|| ನಮಗಿಲ್ಲದ ಸಮಯ||

ಬಹಳ ಸಮಯವಿದೆ
ಬದುಕ ಬಂಡಿ ನಡೆಯಲು
ಹುಟ್ಟು-ಸಾವಿನ ನಡುವೆ ಬಾಳಿನ ಪುಟಕ್ಕೆ
ತೆರೆಬೀಳುವ ಮುನ್ನ
ಬಾಳಿನಲಿ ಮುನ್ನಡೆಯಲು ಬಹಳ ಸಮಯವಿದೆ\\

ನಿದ್ದೆಗಿದೆ ಸಮಯ
ಕನಸಿಗಿದೆ ಸಮಯ
ಪಕ್ಕದ ಮನೆಯ ಗಂಡ-ಹೆಂಡಿರ
ಕೋಳಿ ಜಗಳ ನೋಡೋದಕ್ಕಿದೆ ಸಮಯ
ಬಾಡಿಗೆ ಮನೆಯ ಮುದಿ ಯಜಮಾನಿಯ
ತೆಗಳುವುದಕ್ಕಿದೆ ಸಮಯ
ಗಂಟೆಗಟ್ಟಲೆ ಕ್ರಿಕೇಟ್ ನೋಡೋದಕ್ಕಿದೆ ಸಮಯ
ಬೀದಿಯಲಿ ಸ್ನೇಹಿತನ ಜೊತೆ ರಾಜಕೀಯ
ಮಾತಾಡೋದಕ್ಕಿದೆ ಸಮಯ
ವರ್ಷಗಟ್ಟಲೆ ಸಾಗುವ ದಾರಾವಾಹಿಯ
ನೋಡೋದಕ್ಕಿದೆ ಸಮಯ
ಬಂಧು-ಬಳಗದ ಜೊತೆ ಸಿನಿಮಾ
ನೋಡೋದಕ್ಕಿದೆ ಸಮಯ
ಕಾಲೇಜಿಗೆ ಚಕ್ಕರ್ ಹೊಡೆದು
ಪಾರ್ಕಿನಲ್ಲಿ ಕೂತು ಲವ್ ಮಾಡೋದಕ್ಕಿದೆ ಸಮಯ
ನಮ್ಮ ನಾವು ಆತ್ಮವಂಚನೆ ಮಾಡಿಕ್ಕೊಳೊದಿಕ್ಕಿದೆ ಸಮಯ
ಬದುಕಿನ ಬಾಳ ಪುಟ ಮುಗಿಯುತಿರಲು
ಸಾವಿಗೆ ಶರಣಾಗೋದಕ್ಕೆ ಎಲ್ಲರಿಗಿದೆ ಸಮಯ

ಕನಸು ನನಸಾಗಿಸೋದಿಕ್ಕಿಲ್ಲ ಸಮಯ
ಪರೀಕ್ಷೆಗೆ ಓದೋದಕ್ಕಿಲ್ಲ ಸಮಯ
ಮನಸು-ಮನಸು ಅರಿಯೋದಕ್ಕಿಲ್ಲ ಸಮಯ
ನಮ್ಮ-ನಾವು ತಿಳಿಯೋದಕ್ಕಿಲ್ಲ ಸಮಯ
ದೇವನಲ್ಲಿ ಮನವಿಟ್ಟು ಪ್ರಾರ್ಥಿಸೋದಕ್ಕಿಲ್ಲ ಸಮಯ
ಆತ್ಮೋಧಾರ ಮಾಡಿಕೊಳ್ಳಲು ಇಲ್ಲ ಸಮಯ
ಮಾಡುವ ಸಮಯಕ್ಕೆ ಕೆಲಸ ಮಾಡೋದಕ್ಕಿಲ್ಲ ಸಮಯ
ನಮ್ಮನ್ನು ನಾವು ಸಂತೋಷಪಡಿಸಿಕೊಳ್ಳೋದಿಕ್ಕಿಲ್ಲ ಸಮಯ\\

|| ರಾಧೆಯ ವಿರಹ ||

ಹೇಳೆ ಗೆಳತಿ ಶ್ಯಾಮನ ಕಂಡೆಯೇನೆ?
ನಿನ್ನೆಯಿಂದ ಕಾಣುತ್ತಿಲ್ಲ;
ನನ್ನ ನೋಡಲು ಬಂದಿಲ್ಲ;
ಎಲ್ಲಿ ಹೋದನೆಂದು ನಿನಗೆ ಗೊತ್ತೇ ಹೇಳು ಸಖಿ\\

ಯಮುನೆಯ ದಡದಲ್ಲಿ ಕುಳಿತಿದ್ದೆ
ಅವನು ಬರುವನೆಂದು;
ಬಂದು ಕೆಣಕುವನೆಂದು;
ಕಾದು ಕಾದು ಬೇಸರಿಸಿದೆ ಅವ ಬರಲಿಲ್ಲ ಕೇಳು ಸಖಿ\\

ಅವನಿಗಾಗಿ ಬೆಣ್ಣೆ ತೆಗೆದಿರಿಸಿದ್ದೆ
ಬಂದು ಕಾಡಿಸುವನೆಂದು;
ಬೆಣ್ಣೆ ಕದ್ದು ಹೋಗುವನೆಂದು;
ಬೆಣ್ಣೆ ಕರಗಿ ಕರಗಿ ಹೋಯಿತು;ನನ್ನ ಭಾವ ಕರಗಿ ಹೋಗುತಿದೆ ಸಖಿ\\

ಅವನಿಗಾಗಿ ಕಾಯುತ್ತಿರುವೆ ಗೆಳತಿ
ಎಲ್ಲಿ ಹೋದನೋ ತಿಳಿಯದಾಗಿದೆ;
ತಿಳಿಯುವ ಕುತೂಹಲ ದೊಡ್ಡದಾಗಿದೆ;
ಬಾ ಗೆಳತಿ ಶ್ಯಾಮನ ತೋರು;ಈ ವಿರಹವ ಪರಿಹರಿಸು ಸಖಿ\\

|| ದಾರಿ ದೀಪವಾಗು ಬದುಕಿಗೆ ||

ನಿನ್ನ ನೋಡದ ಕಣ್ಣು ಏಕೆ ಕೃಷ್ಣಾ
ಬಾ ಬಾಳಿಗೆ ಚೈತನ್ಯವಾಗು ಕೃಷ್ಣಾ\\

ನನ್ನ ಕಣ್ಣಿನ ಬೆಳಕು ನೀನು;
ನನ್ನ ಜೀವನದ ಗುರಿಯು ನೀನು;
ನಿನ್ನ ನೋಡದೆ ನೊಂದಿಹೆನು ಕೊರಗಿ ಕೊರಗಿ
ಚೈತನ್ಯವಿಲ್ಲದೆ ಕಳೆಗುಂದಿದೆ ಬಾಳು ಕೊರಗಿ\\

ನಿದ್ದೆ ಬಾರದು,ಅನ್ನ ಸೇರದು;
ಮನ ಬಯಸಿದೆ ಕೃಷ್ಣ...ಕೃಷ್ಣಾ ಎಂದು;
ಯಾರಿಲ್ಲ ಇಲ್ಲಿ ನನ್ನ ಸಂತೈಸುವವರು
ಒರೆಸುವವರೂ ಇಲ್ಲ ಇಲ್ಲಿ ನನ್ನ ಬೆವರು\\

ಒಳಗಿರುವ ಆತ್ಮಶಕ್ತಿಯೇ ನೀನು;
ಹೊರಬಂದು ನನ್ನ ಸಂತೈಸು ನೀನು;
ದಾರಿ ತೋರು ಈ ಬದುಕಿಗೆ
ದಾರಿ ದೀಪವಾಗು ಬಾ ನನ್ನ ಬದುಕ ಹಾದಿಗೆ\\

||ಅಕ್ಷರದ-ಏಣಿ||

ನಡೆ ಮುಂದೆ, ನಡೆಮುಂದೆ
ಅಕ್ಷರದೋಟದ ಜ್ನಾನದ ಮುಂದೆ
ಬಡತನ, ಅಜ್ನಾನ ಎಲ್ಲವೂ ಹಿಂದೆ
ನಾವು ಎಳೆಯರು ಸಾಗುವ ಮುಂದೆ
ಜ್ನಾನ ದಾಹ ನಮಗೆಲ್ಲರಿಗೊಂದೆ
ಸಾಧನದೆತ್ತರ, ಅಕ್ಷರದೇಣಿಯ ಹತ್ತುವ ಇಂದೇ
ದಿನಕರ ಜೀವಿಗೆ ಕಿರಣ
ಅಕ್ಷರದೀವಿಗೆ ಬಾಳಿಗೆ ಹೂರಣ
ಮನದ ದುಗುಡವ ತೀರುವ ಹರಣ
ಹೆಜ್ಜೆ-ಹೆಜ್ಜೆ ಹಾಕುವ ಶಾಲೆಗೆ
ಸಾಧನೆ ಗುರಿಯ ಹಿಡಿಯುವ ಬಾಳಿಗೆ
ಮನದ ಕತ್ತಲೋಡಿಸುವ
ಬಾ ಹೊತ್ತಿಸುವ ಬಾಳಿನ ದೀವಿಗೆ

|| ಕಂಬನಿಯ ಜೀವನ||

ಪರರ ಕಂಬನಿಯೊಳ್ ಬೆದಕುವರು ತಮ್ಮಯ ಸುಖವ
ಇಂತಿರ್ಪ ಜನಂಗಳ ಏನೆಂದು ಕರೆಯುವುದು
ಹೇಳೆಲೋ ನೀ ಬೊಮ್ಮ
ದಿನಂಪ್ರತಿ ಕಣ್ಣ ಕಂಬನಿಯಲಿ
ಕೈ ತೊಳೆಯುವವರ ಕಂಡರೆ ನಿನಗೇಕೋ ಅಸಡ್ಡೆ?
ಕಂಬನಿ ಸುರಿಸಲೆಂದೇ ಈ ಜಗಕೆ ತಂದು ಬಿಟ್ಟೆಯಾ?
ಇದೆಯಾ ನಿನಗೆ ಸಮಾಧಾನ?
ನೀ ಹೇಳೆಲೋ ಬೊಮ್ಮ
ಕಣ್ಣ ಕಂಬನಿಯಾದರೇನು?
ಮಧುಪಾನವಾದರೇನು?
ಎರಡೂ ತಂತಿ ಹರಿದ ತಂಬೂರಿಯೇ!
ಮೇಲು- ಕೀಳು ತಾರತಮ್ಯವೇ ನಿನ್ನ ನೀತಿ
ಪ್ರಾಣಚಂಚು ಕಳಚಿದ ಮೇಲೆ
ಮಸಣದಲ್ಲೆಲ್ಲರೂ ಸಮಾನರೇ!
ಏಕೆ ಹೀಗೆ ನೀ ಹೇಳೆಲೋ ಬೋಮ್ಮ

||ಹೂವು||

ಮುಂಜಾನೆ ಸಂಧ್ಯಾ ಸಮಯದೊಳ್
ತರುವಿನ ಶಿಶುವೊಂದು ಕಣ್ಣಬಿಟ್ಟು
ಲೋಕವನ್ನು ನೋಡಲು ಬಿರಿಯ ಬಯಸಿತು
ಹಿಮಮಣಿಯೊಂದು ಮುತ್ತಿಕ್ಕಿ
ತಂಪೆರೆಯುತ್ತಿತ್ತು ಮುದದಿಂದಲಿ
ದಿಗುತಟದಲಿ ಕಣ್ಣ ತೆರೆದ ಹಗಲಿನಕ್ಷಿಯ
ಕೆಂಪುವರ್ಣವು ತರುವಿನ ಶಿಶುವಿಗೆ ಸುಪ್ರಭಾತ ಹಾಡಿತ್ತು
ನಗುತ ನಗುತ ಅರಳಿತು ಕುಸುಮವು
ಹಿಮಮಣಿಯ ತುಟಿಯು ಸೋಂಕಿ ಪರಿಮಳವ ಪಸರಿತು
ಸೃಷ್ಟಿಸಿದ ಬ್ರಹ್ಮನೇ ಕುಸುಮ ಸೌಂದರ್ಯಕೆ
ಮನಸೋತು ಮರಿದುಂಬಿಯಾಗಿ ಮಧುವ
ಹೀರಲು ಬಯಸಿ ಹಾರಿಬಂದನು

||ಸು-ರತ||

ಹೇಳು ಗೆಳೆಯ! ಯಾರಿಹರು ಈ ಜಗದಲ್ಲಿ
ತಮ್ಮಾತ್ಮ ಸೌಂದರ್ಯವ ಎರಕ ಹೊಯ್ಯದವರು?
ಲೋಕದಲ್ಲಿ ಪುರುಷ-ಸ್ತ್ರೀ ಸುರತಿಯಿಂದಲಿ
ಭಾಹ್ಯ ಸೌಂದರ್ಯದ ಛಾಯೆ ಬಿಟ್ಟು ಹೋಗುವರು
ದಿನಕರ-ಭೂಮಿಯ ಸುರತಿಯಿಂದಲೆ
ಜನಿಸಿದವರು ಭೂಮಿಯ ಸಕಲ ಜೀವಗಳು
ಸಂನ್ಯಾಸಿಗಳೆಂದರೆ ಪ್ರಶ್ನಾರ್ಥಕವೇ?
ಭಾವ-ಮನಸ್ಸು-ಜ್ನಾನಗಳ ನಡುವೆ ಸುರತದಿಂದಲೇ
ಜನಿಸಿದವು ಎಲ್ಲಾ ದರ್ಶನಗಳು, ತತ್ವಗಳು ಜಗದಲಿ
ಲೌಕಿಕರೋ, ಜ್ನಾನಿಗಳೋ, ಚಾರ್ವಾಕರೋ
ಯಾರನೂ ಬಿಟ್ಟಿಲ್ಲ ಈ ಸು-ರತ
ಎರಕ ಹೊಯ್ಯುವ ಕಾಯಕ ನಿಂತಿಲ್ಲ ಈ ತನಕ
ಸು-ರತವಿಲ್ಲದ ಜೀವನ ಎಲ್ಲಿದೆ ಈ ಜಗದಲಿ?
ಕಾಲದ ಸು-ರತವೇ ಭೂತ-ಭವಿಷ್ಯತ್-ಪರಿವರ್ತನೆ

||ನಾಳೆ ಬರೆಯೋಣ||

ಯೋಚಿಸಿದೆ ಇಂದು ಬರೆಯೋಣವೆಂದು
ಆಫೀಸಾಗಲಿ ಸಂಜೆ ನೋಡೋಣವೆನಿಸಿತು
ಮುಸ್ಸಂಜೆಯಲಿ ಏಕಾಂಗಿ
ಚಿತ್ತ ಎತ್ತಲೋ ಹೊರಟಿದೆ
ರಾಜಕೀಯದ ಕಾಲೆಳೆತ
ಮನಸು ಜಾರಿ ಬಿತ್ತು
ರಾತ್ರಿಯಾಗಲಿ ಬರೆಯೋಣವೆಂದು
ರಾತ್ರಿಯ ಚಂದ್ರಮನ ತಂಪುಕಿರಣ
ಏಕಾಂಗಿ ಬೇರೆ ಜೊತೆಗೆ ನಾಳೆಯ ಚಿಂತೆ
ಬೇಗ ಮಲಗೋಣ ನಾಳೆ ಬರೆಯೋಣವೆಂದು

ನಾಳೆ ಕಳೆಯಿತು
ನಾಳಿದ್ದು ಕಳೆಯಿತು
ಪಕ್ಕದ ಮನೆಯ ಹುಡುಗಿ ಆಗಲೇ ಋತುಮತಿ
ದಿನ-ರಾತ್ರಿ ಕಳೆದದ್ದು ಅದೆಷ್ಟೋ
ಆದರೂ ಅನಿಸಿತು ನಾಳೆ ಬರೆಯೋಣವೆಂದು
ಸಂಬಳ ಖಾಲಿಯಾಗಿತ್ತು
ತಿಂಗಳು ತಿಂಗಳು ಕಳೆದು
ಈಗ ನನ್ನವಳು ಗರ್ಭಿಣಿ
ಮನಕೆ ಚಿಂತೆ- ಅನಿಸಿತು ನಾಳೆ ಬರೆಯೋಣವೆಂದು

||ನನ್ನ ಕೋಗಿಲೆ ಹಾಡುತ್ತಿಲ್ಲ||

ನನ್ನ ಕೋಗಿಲೆ ಹಾಡುತ್ತಿಲ್ಲ
ಏಕೆ ನೀವು ಬಲ್ಲಿರಾ?


ಮುಂಜಾವಿನ ರಸ ಗಳಿಗೆಯಲಿ
ರಾಗರವಿಗೆ ಸುಪ್ರಭಾತ ಹಾಡ ಹೇಳಿ
ಕವಿಯದರ ಮಧುರತೆಯಲಿ ತೇಲಿ
ದಿನದ ಕಾಯಕಕ್ಕೆ ಅದುವೆ ಲಾಲಿ

ಮಧುರತೆಗೆ ಮನಸೋತು
ಕಾಲವು ಮುಂದೆಹೋತು
ನೆನಹು ಭಾವ ನಲ್ಮೆ ಹೂತು
ಭಾವ ಬೆಸುಗೆ ಮನದಲಿ ಮೂಡಿತು

ಇಂದು ಹಾಡ ಇಂಪು ಕೇಳಿಸದು
ಕವಿಯ ಮನಸು ಬೆದರಿಹುದು
ಯಾರ ಕೇಳಲಿ? ಎಲ್ಲಿ ಹುಡುಕಲಿ?
ಹೃದಯ ಭಾರ ಭಾವಬಿಂದು
ಮನುಸು ಅದನು ಕೇಳದು

||ಗುರು||

ಲೋಕದೊಳು ಬಹುಮಂದಿ
ಜೀವನದಲಿ ಬೆಂದು
ಹದವಾಗಿ ಬೆಳೆದು
ಮಿತವಾಗಿ ಮಣಿದು
ಶ್ರೀವಾಣಿ ಸಂಗದಲಿ ಬಲುಬಂಧಿ

ನಿತ್ಯವೂ ಸಾಧನೆಯ ತಪವು
ಚೈತನ್ಯದ ಒಲವು
ಬರಲೆಮಗೆ ಎದುರಿಸುವ ಬಲವು
ಸಾಧಿಸುವ ಛಲವು
ದಾರಿತೋರು ಜಗದೊಳಗೆ ಪರಮ ಗುರುವೇ

ಬಾಳಿನಲಿ ಜ್ಜಾನ ಜ್ಯೋತಿಯ ಹಚ್ಚಿ
ಯೋಗ ಜ್ಜಾನದ ರೆಕ್ಕೆಯ ಬಿಚ್ಚಿ
ಕನಿಕರಿಸು ಕಾರುಣ್ಯವಾ ಚುಚ್ಚಿ
ಕ್ರಾಂತಿಯ ಕಹಳೆಯ ಊದು ಬಾ ಸಚ್ಚಿ-
ದಾನಂದ ಸ್ವರೂಪನೇ ಎಚ್ಚ-
ರಿಸು ಬಾ ಪರಮ ಗುರುವೇ

ಹುಟ್ಟಿದಾ ಜೀವ
ಎತ್ತ ಹೋಗದು ಇಲ್ಲಿ
ಬೆಳೆಬೆಳೆದು ಏರುವುದು ದಿಗಂತಕ್ಕೆ
ನಿಮ್ಮ ಯೋಗದಾ ಫಲವ
ಜೀವದಾ ಮೇಲಿಟ್ಟು ಹರಸಿ
ಜೀವನವ ಉದ್ಧರಿಸೋ ಪರಮಗುರುವೇ

||ಸಂಜೆಯ ಕಣ್ಣೀರು||

ನಾನೊಂದು ಸಂಜೆ ಬೇಸರವ ಕಳೆಯಲು
ಸಮುದ್ರದ ದಂಡೆಗೆ ಹೋರಟುನಿಂತೆ
ಮುಗಿಲಾಚೆ ಮೋಡಗಳು ಬಾ...ಬಾ.. ಎಂದು ಕರೆಯುತ್ತಿತ್ತು


ಮರಳ ಮೇಲೆ ನಡೆವಾಗ ಚಿತ್ತ
ಮತ್ತೇನನ್ನೋ ಯೋಚಿಸಿ ಬೇಸರಿಸುತ್ತಿತ್ತು

ಬಿಸಿಯಾ ಬೇಗೆಗೆ ನೊಂದೊಂದು ಹಕ್ಕಿ
ಏಕಾಂಗಿಯಾಗಿ ಇನಿಯನ ಅರಸುತ್ತಿತ್ತು

ದಿನದಾಟ ಮುಗಿಯಿತೆಂದು
ಹಕ್ಕಿಗಳ ಹಿಂಡೊಂದು ಗೂಡು ಸೇರುವ ತವಕದಲ್ಲಿತ್ತು
ತಾಯಿ ಹಕ್ಕಿಯೊಂದು ಮಗುವ ಜೊತೆಗೂಡಿ
ತಂದೆಯ ನಿರೀಕ್ಷೆಯಲ್ಲಿತ್ತು

ಹಿರಿಯ ಹಕ್ಕಿಯೊಂದು ಕಿರಿಯ ಹಕ್ಕಿಗೆ ನೋವಿನ
ಕಥೆಯ ಹೇಳುತ್ತಿತ್ತು
ಕಿರಿಯ ಹಕ್ಕಿ ಪ್ರೀತಿಯ ಗರಿಯ ಬಿಚ್ಚಿ
ಮುದದಿ ಮನವ ಹದವಗೊಳಿಸುತ್ತಿತ್ತು
ಕರಿಮೋಡ ಕಣ್ಣೀರಾಗಿ ಬಾನಿನಿಂದ ಜಾರುತ್ತಿತ್ತು

||ಸತ್ಯ-ಮಿಥ್ಯ||

ಸೂರ್ಯಾಸ್ತದ ರಕ್ತವರ್ಣ
ನಾಳೆಗೆ ಮುನ್ನುಡಿ
ಕಹಿನೆನಪುಗಳ ಕರಾಳವರ್ಣ
ಕಳೆದದಿನಗಳ ಹಿನ್ನುಡಿ
ನಾಳೆಯು ಬರಲಿ.....
ಸಂತಸ ತರಲಿ.....


ಸಾಗರದಲೆಗಳ ಮಾರ್ಧನಿಯ ಲಹರಿ
ನಾಳೆಯ ಜೀವನಕೆ ಮುನ್ನುಡಿಯ ಶಾಯರಿ
ಹೋದವರು ಕೆಲವರು ಮರಳಿಬಾರರು
ಮಿಥ್ಯ ಜೀವನದ ಭಾಗೀದಾರರು
ಹಿರಿಯರ ಜೀವನ ಸಂಧ್ಯೆಯ ತಿಳಿಹಾಸ
ಎಳೆಯರ ನಾಳೆಗಳ ಮಂದಹಾಸ

||ಸುನಾಮಿ||


೨೫ರ ಸಂಜೆ ಎಲ್ಲವೂ ಎಂದಿನಂತೆ
ಬೆಳಿಗ್ಗೆಯಿಂದ ಸಂಜೆಯವರಿಗೂ ಸಾಗಿತ್ತು
ನಿರಂತರ ಆಮೀಷಗಳ ಮತಾಂತರ
"ಮೆ ಆಲ್ ಬಿ ಒನ್" ಧೀರ್ಘಗೊಂಡ
ಅಸಹ್ಯವಾದ ಸಂಖ್ಯಾಬಲದ ಆಸೆಯಿಂದ
ಬಿಳಿ-ಕಂದು-ತಿಳಿನೀಲಿ ಗೌನುಗಳು
ಕನ್ಯಾಸೆರೆಯ ಕಳೆದುಕೊಂಡ ಕನ್ಯೆಯರು
ಹೊಟ್ಟೆಗೆ ಹಸಿವಿನ ಕಾವಿಟ್ಟ ಬಡಜನತೆಗೆ
ಕೊರಳಿಗೆ ಶಿಲುಬೆಯ ನೇಣುಬೀಗೆ
ಮತ್ತೆ ಗುಲಾಮಗಿರಿಯ ಛಾಯೆ......
ಬಡಿದೊಡಿಸಲು ಕಾಯುತ್ತಿತ್ತೇ ಕಾಲ
ಹರಿದ ಪ್ರಾರ್ಥನೆಯ ಗುನುಗು ನಿಂತಿರಲಿಲ್ಲ
ಧರೆ ನಿನ್ನೊಡಲು ಸಮುದ್ರದ ನೀರಿದ್ದರೂ
ತಣಿಯಲ್ಲಿಲ್ಲವೇ ಏಕೆ ಕ್ರೋಧಗೊಂಡೆ?
ಏಕೆ ಗುಡುಗಿದೆ? ಏಕೆ ನಡುಗಿದೆ?
ನಿನ್ನ ಕ್ರೋಧದ ಜಲಾಗ್ನಿಯೇ............"ಸುನಾಮಿ"
ಬಡವ-ಬಲ್ಲಿದ-ಹಿಂದೂ-ಮುಸ್ಲಿಂ-ಕ್ರಿಚ್ಚಿಯನ್ ರೆನ್ನದೆ
ನವ ತಾಂತ್ರಿಕತೆಗೆ ಸವಾಲೆಸದು
ವಿಜ್ಜಾನದ ಜಿಜ್ಜಾಸೆಯ ನುಂಗಿದೆಯಲ್ಲ
ಲಕ್ಷಾಂತರ ಜನರ ಬಲಿತೆಗೆದುಕೊಂಡೆಯಲ್ಲ
ನಿನ್ನ ನಡತೆ ಸಹ್ಯವೇ?ಮತ್ತೇ ನಿರಾಳವಾಗಿ...
ಚೇತನದ ಆಗರವಾಗಿ.....
ಅಲೆಅಲೆಯಲ್ಲಿ ಬದುಕಿನ ಏರಿಳಿತಗಳ ಬಿಂಬಿಸುತ್ತಿರುವೆಯಾ?
ಮತ್ತೆ ಎಲ್ಲವೂ ಎಂದಿನಂತೆ......... ನಿರಂತರ ಆಮೀಷಗಳು
ಬದುಕು-ಸಾವುಗಳು ಹೋರಾಟದ ನಡುವೆಯೂ
ತಮ್ಮ ಮತವ ಸೇರಿದರೆ ಸವಲತ್ತುಗಳ...ಆಮೀಷ....
.........ಮತಾಂತರ.....ನಿರಂತರ....



(ಕವಿತೆ ಬರೆದ ಹಿನ್ನೆಲೆ: ಹಲವು
ವರ್ಷಗಳ ಹಿಂದೆ ಆಂದ್ರ ಹಾಗು ತಮಿಳು ನಾಡಿನ ಕೆಲವು ಸಮುದ್ರ ತೀರದ ಹಳ್ಳಿ,ಪಟ್ಟಣಗಳ ಮೇಲೆ ಸಮುದ್ರರಾಜ ಮುನಿದು ತನ್ನ ಪ್ರರಾಕ್ರಮ ತೋರಿಸಿ ನಮ್ಮ ಜನರನ್ನು ಸಂಕಷ್ಟಕ್ಕೆ ಗುರಿಮಾಡಿದ ಸಂಗತಿ ನಿಮಗೆಲ್ಲಾ ತಿಳಿದಿದೆ. ಈ ಕವಿತೆ ಬರೆದು ತುಂಬಾ ವರ್ಷಗಳಾದರೂ ಅಂದು ನಡೆದ ಅಲ್ಲಿನ ಜನರ ಸಂಕಷ್ಟಗಳಿಗೆ ಬಹಳಷ್ಟು ಮಂದಿ ಸ್ಪಂದಿಸುತ್ತಿದ್ದರೂ ಕೆಲವು ಮತೀಯ ಗುಂಪು ಜನರ ಸಂಕಷ್ಟದ ಸಮಯದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಬಯಸಿ ಜನರಿಗೆ ಆಮೀಷಗಳನ್ನು ಒಡ್ಡಿ ತಮ್ಮ ಮತಕ್ಕೆ ಸೆಳೆಯಲೆತ್ನಿಸಿದ ಸಂಗತಿಗಳನ್ನು ಓದಿ,ನೋಡಿ ,ನೊಂದು ಈ ಕವಿತೆಯನ್ನು ಬರೆದೆ.)

ಮೌನಕ್ಕೆ ಶರಣು

ಏಕೆ ಮೌನಕ್ಕೆ ಶರಣಾಗಿರುವೆ ರಾಧೇ?
ಬೃಂದಾವನವೆಲ್ಲಾ ಶೋಕದಲ್ಲಿ ನರಳಿದೆ
ನಿನ್ನ ಮೌನ ಕಂಡು\\

ಚೈತನ್ಯದ ಚೆಲುವು ನೀನು
ಪುಷ್ಫಗಳ ಸುಗಂಧವು ನೀನು
ತಂಗಾಳಿಯ ತಂಪು ನೀನು
ಇಂದೇಕೆ ಚೈತನ್ಯ ಮರೆಯಾಗಿದೆ ಹೇಳು ನೀನು\\

ನಮ್ಮೆಲ್ಲರ ಸಖಿಯು ನೀನು
ಬೃಂದಾವನದ ಚೆಲುವು ನೀನು
ಶ್ಯಾಮನ ಪ್ರಾಣವು ನೀನು
ಇಂದೇಕೆ ಮೌನಕ್ಕೆ ಮನಸೋತೆ ಹೇಳು ನೀನು\\

ಹೇಳು ಮನದ ನೋವನು
ನಿನ್ನ ನೋವು ನಮ್ಮದೇ ಹೇಳು ನೀನು
ಶ್ಯಾಮನಿಲ್ಲ ಬೃಂದಾವದಲ್ಲಿ ತಿಳಿದೆವು ನಾವು
ಬಂದ ಭಾಗ್ಯವು ಕೆಲಸ ಮುಗಿಸಿ ಹೊರಟು ಹೋಯಿತು\\

ಸಮಾಧಾನವಿರಲಿ ಗೆಳತಿ
ಮಧುರ ನೆನಪುಗಳ ಅವ ಬಿಟ್ಟು ಹೋದನಲ್ಲಾ
ಹೇಳದೇ ಬಂದ ಮಧುರ ನೋವು ಹೇಳದೇ ಹೋಯಿತಷ್ಟೆ
ಶ್ಯಾಮ ನಮ್ಮೊಡನಿದ್ದನೆಂಬುದೇ ನಮಗೆಲ್ಲಾ ಹರುಷವಷ್ಟೇ ಗೆಳತಿ\\

ಜೀವನದ ಪಾಠ ಕಲಿಸಿದ ಗುರು ಅವನು
ನಮ್ಮ ತಪ್ಪು-ಒಪ್ಪುಗಳನ್ನೆಲ್ಲಾ ತಿದ್ದಿ ತೀಡಿದ ಗೆಳೆಯ ಅವನು
ಆತ್ಮದ ಕಣ್ಣು ತೆರೆಸಿದ ಸ್ವಾಮಿ ಅವನು
ಜೀವನದಲ್ಲಿ ಇದ್ದರೂ ಇಲ್ಲದಂತೆ ಇರುವುದ ಕಲಿಸಿ ಮೋಹವ ತೊಳೆದ ಮನ ಮೋಹನ ಅವನು\\

||ಆಹ್ವಾನ||

ಧರ್ಮ-ಅರ್ಥ-ಕಾಮ- ಪ್ರೇಮ ಒಲವುಗಳ
ನವಜೀವನದ ಸುಂದರ ಭವಿತವ್ಯಕ್ಕೆ
ನಾವು ಹೆಜ್ಜೆಯನ್ನಿಡುವ ಈ ಶುಭ ಸಂದರ್ಭದಲ್ಲಿ
ಹಿರಿಯ-ಕಿರಿಯ ಸಮಾನ ವಯಸ್ಸಿನ
ತಮ್ಮೆಲ್ಲರ ಸಮ್ಮುಖದಲ್ಲಿ ಭಾವುಕರಾಗಿ ಪ್ರಾರ್ಥಿಸುವೆವು.........


ನಮ್ಮಲ್ಲಿ ಚಿರಂತನ ಹುಮ್ಮಸ್ಸು,
ಕಷ್ಟ-ದುಃಖವನ್ನೆದಿರಿಸುವ ಆತ್ಮಸ್ಥೈರ್ಯ,
ಸತ್ಯವನ್ನರಸುವ ತಾಳ್ಮೆ, ವಿವೇಕ,
ಅಮೃತತ್ವದೆಡೆಗೆ ಒಯ್ಯುವ ಬೆಳೆಕಿನ ಜ್ಜಾನ,
ಶಾಂತಿ ನೆಮ್ಮದಿ ಆಯುರಾರೋಗ್ಯ
ಸಕಲೈಶ್ವರ್ಯಗಳ ಸಹ ಜೀವನದಲ್ಲಿ ಸಾಧಿಸುವ ಛಲ,
ಜೀವನ ವಿಕಾಸ ಬದುಕು ಬಂಗಾರಗೊಳಿಸಿಕೊಳ್ಳುವ ಏಕಾಗ್ರತೆ-ಶಕ್ತಿ ಪ್ರಾಪ್ತವಾಗಲಿಯೆಂದು ಹೃದಯಪೂರ್ವಕವಾಗಿ ಹರಸ ಬನ್ನಿರೆಂದು ಆತ್ಮೀಯವಾಗಿ ಆಹ್ವಾನಿಸುವ...........

|| ಗೀಜಗ||

ಜಗವೇ ನೀನೆಷ್ಟು ಸುಂದರ
ನಿನ್ನ ಸೃಷ್ಟಿಯ ಪ್ರತಿ
ಜೀವಿಯೂ ಇಲ್ಲಿ ಕಲೆಗಾರ
ಮೂರ್ಜಗವು ಮೆಚ್ಚೋ ವಾಸ್ತು ಈ ಗೀಜಗ

ಸುಂದರ ಪ್ರಕೃತಿಯಾಗ
ಎಂಥ ಚಲೋ ಮನೆ ಕಟ್ಟಿಯಲ್ಲೋ
ಪ್ರೀತಿಯ ಜೀವನದ ಗೆಳತಿಯ
ದಾರಿ ಕಾಯುತಾ ಕುಳಿತಿಯೇನೋ?

ಎಲ್ಲೆಲ್ಲೂ ಹೋತದ ಗಡ್ಡದ
ಲಾಡನ್ನಿನದೇ ಭೀತಿ
ಎಚ್ಚರಿಕೆಯಿಂದಿರೋ ನೀ
ನಿನ್ನ ಬಂಗಲೆಗೂ ಬಾಂಬಿಟಾನೋ!

ಬಿಡಿಗಾಸು ಇಲ್ಲದ ನನಗೆ
ನಿನ್ನ ವಾಸ್ತುವಿನ ಮನೆಯ
ಕಟ್ಟಿ ಕೊಡುವೆಯೇನೋ
ಮೂರ್ಜಗವು ಮೆಚ್ಚೋ ವಾಸ್ತು ಈ ಗೀಜಗ

.|| ದರ್ಪ||

ನಾವು ಗಂಡಿನವರು
ನೀವು ಹೆಣ್ಣಿನವರು
ಇರಲಿ ನಡುವೆ ಅಂತರ\\

ನಾವು ಗಂಡಿನವರು
ನಮ್ಮನ್ನು ಯಾರೂ ಖುಷಿಪಡಿಸಲಾರರು
ನೀವು ಹೆಣ್ಣಿನವರು
ಕಾದಿದೆ ಸದಾ ಪರೀಕ್ಷೆಗಳು ಸಾವಿರಾರು\\

ನಮ್ಮನು ಸದಾ ಸಂತೋಷಪಡಿಸುವುದೇ ನಿಮ್ಮ ಗುರಿ
ಇರಬೇಕು ನೀವು ನಮಗಾಗಿ ಸದಾ ಹರಿಬರಿ
ನಾವು ಹೇಳುವೆವು ನೀವು ಸರಿಇಲ್ಲಾ
ಒಪ್ಪಬೇಕು ನಮ್ಮ ಮಾತು ಎಲ್ಲಾ\\

ಎಲ್ಲಾ ಆಗಬೇಕು ನಮ್ಮ ಅಣತಿಯಂತೆ
ಕಾಯಬೇಕು ನೀವು ಶಬರಿಯಂತೆ
ಏನು? ಏಕೆ? ಎತ್ತ? ಎಂಬ ಗುಟುರು ನಮ್ಮದು
ಊಂ,ಉಹುಂ, ಮೌನ ಕಣ್ಣೀರಿನ ಕರ್ಮ ನಿಮ್ಮದು\\

||ಸಾಧನ ಭೈರವ||

ಓ! ಎಚ್ಚರಗೊಳ್ಳೋ ಸಾಧನ ಭೈರವ
ಧೈರ್ಯದಿ ಗುರಿಯನು ಸಾಧಿಸುವ


ಸತ್ತಂತಿರುವ ಮನವ ಬಡಿದೆಚ್ಚರುಸು
ನಿದ್ದೆಯಿಂದ ಮೈಮರೆಯುವವರ ಭ್ರಾಂತಿಯ ಇಳಿಸು
ಮೈಗಳ್ಳರ ಸೊಗಲಾಡಿತನವನು ಸಂಹರಿಸು
ಕಷ್ಟದಿ ಸೆಣಸುವವರನು ಪ್ರೋತ್ಸಾಹಿಸು


ಓ! ಎಚ್ಚರಗೊಳ್ಳೋ ಸಾಧನ ಭೈರವ
ಧೈರ್ಯದಿ ಗುರಿಯನು ಸಾಧಿಸುವ


ನೀ ನಡೆಯುವ ಸಾಧನೆಯ ಪಥದಲ್ಲಿ
ಜ್ಜಾನೋದಯವಾಗಲಿ ಮತಿಮತಿಯಲ್ಲಿ
ಸಾಧಕರ ವೇದಾಂತಿ ತಾರ್ಕಿಕರ ಆದರ್ಶದಲ್ಲಿ
ಜ್ಜಾನಜ್ಯೋತಿಯು ಬೆಳಗಲಿ ಭುವಿಯಲ್ಲಿ


ಓ! ಎಚ್ಚರಗೊಳ್ಳೋ ಸಾಧನ ಭೈರವ
ಧೈರ್ಯದಿ ಗುರಿಯನು ಸಾಧಿಸುವ

ಒಂದೇ ಗುರಿ ಕೊನೆಯಲ್ಲ
ಮುಂದಿಹುದು ಭವಿಷ್ಯದ ಗುರಿಯಿಲ್ಲಿ
ಸಾಧನೆ ಎಂದೂ ನಿಂತನೀರಲ್ಲ
ಸಾಧಕನ ಚೈತನ್ಯದ ಕಲ್ಪವಲ್ಲಿ


ಓ! ಎಚ್ಚರಗೊಳ್ಳೋ ಸಾಧನ ಭೈರವ
ಧೈರ್ಯದಿ ಗುರಿಯನು ಸಾಧಿಸುವ

|| ಮನಸ್ಸಿನ ಕನ್ನಡಿ ||

ಓ ಗೆಳೆಯನೇ ಒಮ್ಮೆ ಮನದ ಕನ್ನಡಿಯೊಳಗೀಕ್ಷಿಸು
ಮೊಗವ ಕಂಡು ಹೇಳ್ ಇದುವೆ ಸಮಯ ಭಾವವಿಡು ತನುಜನೊಳ್
ಭಾವ ತನುಜನೊಳ್ ಇಡೆನೆಂದಾದರೆ ನೀನ್
ಬಗೆಯುತಿಹೆ ದ್ರೋಹವ ಈ ಜಗಕ್ಕೆ ಮತ್ತು ಹೆಣ್ಣೊಬ್ಬಳ ಮಾತೃತ್ವಕ್ಕೆ ಅಪಚಾರ
ಯಾವ ಸುಂದರ ಹೆಣ್ಣಿಹಳು ಈ ಜಗದಲಿ
ಮಡಿಲು ತುಂಬದ ಅಸ್ಪೃಶ್ಯೆ
ಬಯಕೆ ತುಂಬಿ ಸುರತಿಯಿಂದಲಿ ಗರ್ಭವತಿಯಾಗದವಳು?
ಯಾರಿಹನು ಮೂರ್ಖನು ತನ್ನ ಗೋರಿಯ ಕಟ್ಟುವವನು?
ಸ್ವಾರ್ಥದಿಂದಲಿ ತಾನೇ ಮಣ್ಣು ಮುಕ್ಕುವವನು?
ನಿನ್ನ ತಾಯ ಪ್ರತಿಬಿಂಬವೇ ನೀನ್
ತಾಯಿ ಕಾಣುತಿಹಳು ನಿನ್ನ ತಾರುಣ್ಯದಲ್ಲಿ ಕಳೆದ ಮುಂಜಾವು
ನಿನ್ನ ಮುಸುಕಿದ ಕಂಗಳಲ್ಲೇ ನೀನ್ ನೋಡುವೆ
ಸುಕ್ಕುಗಟ್ಟಿದ ಮನಸ್ಸಿನಲ್ಲಿ ನಿನ್ನ ಹರೆಯದ ನಿನ್ನ ನೀನೆ
ನೀನು ಮರೆತರೆ ನಿನ್ನ ತನುಜರಲ್ಲಿ
ಏಕಾಂತದ ಸಾವು, ನಿನ್ನ ರೂಪ ನಿನ್ನಲ್ಲೇ ಕೊನೆಯುಸಿರೆಳೆಯುವುದು.

||ದೇವ-ದಾಸಿ||

ದೇವನು ನಾನಲ್ಲ
ದಾಸಿಯು ನೀನಲ್ಲ
ನಾನು ಮೇಲಲ್ಲ
ನೀನು ಕೀಳಲ್ಲ
ಬೇಧ-ಭಾವ ನಮ್ಮಲಿಲ್ಲ

ಹಗಲು-ರಾತ್ರಿ
ಆಕಾಶ-ಭೂಮಿ
ಕಣ್ಣು-ರೆಪ್ಪೆ
ಹಾಲು-ಜೇನು
ಒಂದನೊಂದು ಅಗಲದು

ನಾನು-ನೀನು ಒಂದೇ......ಒಂದೇ
ಮರಣವೂ ಹಿಂದೆ......ಹಿಂದೆ
ಒಲವು ಮುಂದೆ.........ಮುಂದೆ
ನಾವದರ ಹಿಂದೆ......ಹಿಂದೆ
ಜೀವ-ಜೀವ ಪ್ರಣಯ ಪಕ್ಷಿ ನಾವು......ನಾವು

||ಶಾಂತಿ...ಇಸಂ||

ಬಹಳ ಹಿಂದೆ ಭಾರತದಲ್ಲಿ
ಬುದ್ದೀಸಂ...
ಜೈನಿಸಂ....
ಹಿಂದುಯಿಸಂ...
ಎಷ್ಟೊಂದು......ಇಸಂ ಗಳೆಲ್ಲಾ
ಪ್ರಪಂಚದಲ್ಲಿ ಹೆಸರುವಾಸಿಯಾಗಿತ್ತು.
ಆದರೆ ವಿಚಿತ್ರ ಈಗ ಪ್ರಪಂಚದೆಲ್ಲಡೆ
ಪ್ರಚಲಿತದಲ್ಲಿದೆ ಟೆರರಿಸಂ.... ನಕ್ಸಲಿಸಂ...
....................................................................................................................
.....................................................................................................................
.....................................................................................................................
ಆದರೆ ಇಂದು ಎಲ್ಲರಿಗೂ ಬೇಕಾಗಿದೆ ಶಾಂತಿಯಿಸಂ....

|| ಭಾವನೆ||

ಬರೆಯೋಣವೆಂದರೆ ಮನಸ್ಸು
ಓಡದೆ ತಟಸ್ಥವಾಗಿದೆ
ಮಾತನಾಡೋಣವೆಂದರೆ ನಾಲಗೆ
ತಿರುಗದೆ ಮೊಕನಾಗಿರುವೆ

ನಿನ್ನ ಕಂಡೊಡನೆಯೇ ಮನಸ್ಸು
ಆನಂದದಿಂದ ಕುಣಿಯುವುದು
ಬಾಯಿಯಿಂದ ಮಾತುಗಳು ಹೊರಡದೆ
ಹೃದಯದ ಮಾತುಗಳು ಕಣ್ಣೀರಾಗುವುದು

ನಿನ್ನ ನೆನಪೇ ಹೀಗೆ ಸಂತೋಷದ
ಸ್ಪೂರ್ತಿಯ ಗಳಿಗೆಗಳು ನನಗೆ
ಮನಸ್ಸಿನ ನೋವುಗಳು ಮಾಯವಾಗಿ
ಜೀವನದಲಿ ಹೊಸ ಹುರುಪು ನೀಡುವುವು

ಪ್ರೀಯೇ! ನೀನು ಅನನ್ಯ
ನನ್ನ ಶಕ್ತಿಯೇ ನೀನು
ಪ್ರೀತಿ-ವಾತ್ಸಲ್ಯದ ಗಣಿ
ಮಮತೆಯ ತಾಯಿಯೇ ನೀನು

ನೀನೇ ಹೀಗೆ ಸುಂದರ ಕಾವ್ಯ
ಓದುಗರ ಮನಗೆಲ್ಲುವ
ಕೇಳುಗರ ಹೃದಯ ಸೊರೆಗೊಳ್ಳುವ
ನನ್ನ ಭಾವನೆಗಳ ಅಂತರಂಗವೇ ನೀನು

||ಸೃಷ್ಠಿ||


ಹಬ್ಬ ಹರಿದಿನಗಳು
ತಿನ್ನಲೋಸುಗವಲ್ಲ
ಹಿಂದಿನ ಆದರ್ಶವ ತಿಳಿದು
ಬಾಳ್ವೆ ನಡೆಸೋ ಮನುಜ

ಮನುಜ ಜನ್ಮವು ಪ್ರಾಣೆಗಳಂತೆ
ಬಂದು ಹೋಗುವುದಕ್ಕಲ್ಲ
ಇದ್ದು ಜಯಿಸುವುದಕ್ಕೆ
ವಿಜಯಿಯಾಗೋ ಮನುಜ

ಸೃಷ್ಟಿಯ ಸೌಂದರ್ಯ
ಕುರಿಯು ಮೇಯುವುದಕ್ಕಲ್ಲ
ಕೋಗಿಲೆಯಂತೆ ಹಾಡುವುದಕ್ಕೆ
ಸೊಬಗ ಸವಿಯೋ ಮನುಜ

ಸೃಷ್ಟಿಯ ರಹಸ್ಯಗಳಿಗೆ
ಅಂತ್ಯವಿಲ್ಲ ತಿಳಿಯಲು
ಹತ್ತು ಹಲವು ಜನುಮಗಳು
ಸಾಲವು ಗಹನವಿದು ಮನುಜ

ಸುನೀತ- ||ಅದ್ವೈತರು||

ಮೌನದಲ್ಲೂ ಬಗೆಗಳುಂಟು, ನಿನ್ನ ಮೌನಕ್ಕೆ ಕಾರಣವೇನು?
ಕೋಪದ ಮೌನವುಂಟು,ಕೋಪವನ್ನು ತಡೆಯುವಿಕೆಯೋ ಹೇಗೇ?
ಮನಸ್ಸಿನಲ್ಲಿ ನಡೆಯುವ ಕದನ, ಮುಖದಲ್ಲಿ ಅದರ ಪ್ರತಿಬಿಂಬ
ಕಂಗಳೇ ಹೇಳುತ್ತೆ ಮೌನವೇನೋ ನಿಜ, ಬಾಣಗಳಂತೆಸೆಯುವ ಕಿಡಿಗಳೇಕೆ?
ಸಂತಸದ ಮೌನವಂತೂ ಅಲ್ಲ, ಚಂದಿರನ ತಬ್ಬಿದ ಕಾರ್ಮೋಡವೇ!
ಮುಖದಲ್ಲೇನೋ ಹೊಳಹು ಇದೆ, ಬೆಳಕು ಮಾತ್ರ ಮಬ್ಬಾಗಿದೆ
ಕೋಪಕ್ಕೆ ಕಾರಣವಂತೂ ನಾನೇ ಏನೋ!? ವಿಷಯವೇನೂ ತಿಳಿದಿಲ್ಲ
ಬಟ್ಟೆ, ಹಣ,ಒಡವೆಯಂತೂ ಅಲ್ಲ, ಮಾತಿನ ವಿರಳವೇ? ಏಕಾಂತವೇ?
ಸಂಬಂಧಿಗಳ ಕಿರಿಕಿರಿಯಂತೂ ಇಲ್ಲ, ಇನ್ನೆಲ್ಲಿಯ ಜಗಳ ಕದನ!
ಬೆಳಗು ಕಳೆದು ಇರುಳು ಮುಸುಕುವ ಹಾಗೆ ನಿನ್ನ ಮೊಗದ ಸಿರಿಯೂ..
ಬೆಳಗಿನ ಸೂರ್ಯನೂ ನಾನೇ.. ಇರುಳಿನ ಚಂದ್ರನೂ ನಾನೇ.. ನೀನೇ ಭೂಮಿ
ಮೌನ ಇರುಳು ಕ್ಷಣಿಕವೇ ನಮಗೆ- ಅಮಾವಾಸ್ಯೆಯಂತೂ ದೂರದೂರ
ಸೂರ್ಯ ಚಂದ್ರರನ್ನು ಮುತ್ತಿಕ್ಕುವ ಕಾರ್ಮೋಡಗಳು ಸಹಜ ನಾನು ನೀನೂ ಸಹಜ
ಇಲ್ಲಿ ಭೂಮಿ ಯಾರೋ, ಸೂರ್ಯಚಂದ್ರರಾರೋ- ನಾವು ಸದಾ ಅದ್ವೈತರು.....

-ಸಾಕ್ಷಾತ್ಕಾರ-

ಮದುವೆಯೆಂದರೆ ಸ್ವಾತಂತ್ರದ ಹರಣ
ನಮ್ಮತನವ ವಿಮರ್ಶೆಗೊಳಪಡಿಸಿ ತೋರುವ ಮರಣ

ತನ್ನ ಮನೆಯಲ್ಲೇ ಆಗುವನು ಪರಕೀಯ
ಸುಖ-ಸಂತೋಷದ ತೋರುವಿಕೆಯ ರಾಜಕೀಯ
ಮಾತಿಗೆ ಬೆಲೆಯಿಲ್ಲ ,ತನ್ನವರ ನಡುವೆಯೇ ಅಸ್ಪೃಶ್ಯ
ನೋಡುಗರಿಗೆ ಮನರಂಜನೆಯ ದೃಶ್ಯಕಾವ್ಯ

ಎಲ್ಲೇ ಹೋದರೂ, ತಡವಾಗಿ ಬಂದರೂ
ಮೈಮೇಲೆ ಬೀಳುವುದು ಪ್ರಶ್ನೆಗಳ ಬಾಣ
ಮನೆಯಲ್ಲಿ ತನ್ನ ಪಾಡಿಗೆ ತಾನು ಸುಮ್ಮನಿದ್ದರೂ
ಠೀಕೆ-ಟಿಪ್ಪಣಿ ಮೊನಚು ಮಾತಿನ ಭಾಷಣ

ಹೆಚ್ಚು ಮಾತನಾಡಿದರೂ ಕಷ್ಟ
ಮೌನಿಯಾದರಂತೂ ತೀರ ನಿಕೃಷ್ಟ
ಬೆಂಕಿಯಿಲ್ಲದೆ ಬೇಯುವುದೇ ಸಂಸಾರ
ಇದುವೇ ಸತ್ಯ ದರುಶನದ ಸಾಕ್ಷಾತ್ಕಾರ

||ಯುಗಾದಿ||


ಜನಮನದಲೀ ಯುಗಾದಿ
ಯುಗಾದಿ ಆದಿಯಾದರೂ ಅಂತ್ಯದ ಸುಳಿವಿಲ್ಲ
ಅಂತ್ಯವಿಲ್ಲದಾತನ ಅನಂತ ಕ್ರೀಡೆಯ ನೋಡೋ ಮನುಜ


ಜಗದೊಡೆಯನ ಚದುರಂಗದಾಟದ ಬೊಂಬೆಗಳು ನಾವು
ಗೆಲ್ಲುವವರು ಯಾರೋ?
ಸೋಲುವವರು ಯಾರೋ?
ಸೋಲರಿಯದವನ ಕೈಚಳಕವನು ಬಲ್ಲವನು ನಾನಲ್ಲ!
ಸೋಲೋ.......?
ಗೆಲುವೋ.....?
ಅನುಭವಿಸುವವನು ನಾನೇ.......
ಹೋಳೀ ಹಬ್ಬದ ಓಕುಳಿಯ ಚೆಲ್ಲಿದಂತೆ
ಗಿಡ ಮರಗಳಲಿ ಬಣ್ಣವನ್ನೇ ಚೆಲ್ಲಿದನು.
ಬಿಸಿಲ ದಗೆಯಲೀ ಆದಿ!
ಯಾವ ಯುಗವೋ ಏನೋ?
ಅರಿವೆಂಬ ಅರಿವೆ ಇಲ್ಲದವನು ನಾನು
ಅರಿತವನು ನೀನು
ತಿಳಿಯ ಹೇಳೋ ಅರಿತಜ್ಜ.......

ಧಗೆಯಲ್ಲಿ ಯುಗದ ಆದಿ!
ಎಷ್ಟು ಸಮಂಜಸವೋ ಏನೋ?
ಅರಿತಜ್ಜನ ಕಾರ್ಯವೈಖರಿಯ ಬಲ್ಲವನು ನಾನಲ್ಲ
ಹೀಗೆಳೆಯುವ ಮನಸ್ಸಿನವನು ಅಲ್ಲ
ಆಗಿ ಹೋಗುದುದಕ್ಕೆ ಚಿಂತಿಸಿ ಫಲವೇನು?
ಸೃಷ್ಟಿಯ ಸಮಷ್ಟಿಯ ವೈಚಿತ್ರ್ಯವೀ ಯುಗಾದಿ......

ಅಮರ ಪೇಮ

ಪ್ರಿಯಮನ ಅರಸುತಲಿ
ಪ್ರಿಯತಮೆಯು ಅಲೆಯುತಿಹಳು

ಬಾನಿನಂಗಳದಲ್ಲಿ ಚಂದ್ರ
ತಾರೆಯರು ಮಿನುಗುತಿಹರು
ಏಕಾಂಗಿಯಾಗಿ ಬೃಂದಾವನದಲಿ
ನರಹರಿಯ ಸಂಗ ಬಯಸಿ ಬಂದಳು ರಾಧೆ

ಹುಡುಕುತಲಿ ನಡೆಯ
ಅವಳ ಕಾಲಿನ ಸ್ಪರ್ಶಕ್ಕೆ
ಮನಸೋತ ತರಗೆಲೆಗಳು
ಮನ್ಮಥಾನಂದವಾದಂತೆ ಜಾಗೃತವಾದವು

ಬಳುಕುತಲಿ ನಡೆಯೆ
ಗಿಡ ಮರಗಳು ಅವಳ ಸೌಂದರ್ಯಕ್ಕೆ
ಮಾರುಹೋಗಿ ಅವಳತ್ತ ಬಾಗಿ
ಚುಂಬನಕ್ಕೆ ಕರೆಯುತಿರುವಂತೆ ತೋರಿತು

ಹೂವಿನ ಮರಗಳು ಅವಳ
ಮೇಲೆ ಪುಷ್ಪಗಳನ್ನೆರಚಿದವು
ತಂಗಾಳಿಯ ಬೀಸಿ ಬೀಸಿ
ಅವಳ ಗಮನ ಸೆಳೆಯಲೆತ್ನಿಸಿದವು

ಅದಾವುದರ ಅರಿವೂ ಇಲ್ಲದೆ
ನರಹರಿಯ ಹುಡುಕುತಿಹಳು ರಾಧೆ

ನಡೆ ನಡೆದು ದಣಿವಾಗಿ
ಯಮುನಾ ತೀರದಲಿ ನೀರನ್ನು
ಕುಡಿಯುತಿರೆ ಬಾನಿನಲ್ಲಿಯ ಚಂದ್ರ
ಧರೆಗಿಳೆದು ಬಂದು ರಾಧೆಯ ಚುಂಬಿಸುವಂತೆ ಭಾಸವಾಯಿತು

ದೂರದಲಿ ಕಾಣಿಸಿತು ನರಹರಿಯ
ಬರುವು ನಲಿದಿತು ಮನ
ತನು ಬಳಲಿದ್ದರೂ ಮನವು ನರಹರಿಯ
ಬಯಸುತ್ತಿತ್ತು ಬೃಂದಾವನದಲೀ

ನೆನೆದೊಡೆ ಬಂದ ನರಹರಿಯ
ಬಾಹುಬಂಧನದಲಿ ಸಿಲುಕಿದಳು ರಾಧೆ

ಇವರ ಮಿಲನದಿಂದ
ಪುಲಕಿತಗೊಂಡ ವರುಣನು
ಕಾರ್ಮೋಡಗಳಿಂದ ಚಂದ್ರಮುಖಿಯ
ಬಳಸಲೋಡಿ ಬಂದನು

ಮಿಲನದ ಸಂತುಷ್ಟತೆಯ ಅನುಭವಿಸಿ
ಗುಡುಗು ಮಿಂಚುಗಳನ್ನೊಳಗೊಂಡು
ಧಾರಾಳವಾಗಿ ಮಳೆ ಸುರಿಯಿತು

ಇದಾವುದರ ಪರಿವೆಯೂ ಇಲ್ಲದೆ
ಇಬ್ಬರೂ ಒಲವಿನ ಸಾಗರದಲಿ
ಮದ್ಮೋನ್ಮತ್ತರಾದರು

ಇವರೀರ್ವರ ಮಿಲನವ ಕಂಡು
ಬಾಗಿದ್ದ ಮರಗಿಡಗಳು
ತರುಲತೆಗಳು ದಿಕ್ಕನು ಬದಲಿಸಿದವು
ನಾಚಿಕೆಯಿಂದಲಿ

ಹೂ ಗಿಡಗಳು ಪ್ರೇಮಿಗಳ
ಮೇಲೆ ಪುಷ್ಪಗಳನ್ನು ಸುರಿಸಿ
ವಾಸ್ತವೀಕತೆಯಿಂದ
ಬಹುದೂರ ಕರೆದೊಯ್ದವು

ಆರ್ಯ-ಚಂದ್ರಮುಖಿ

ತಿಳಿನೀಲಿ ಆಕಾಶದಲ್ಲಿ
ಹಾಲು ಚೆಲ್ಲಿದ ಹೊಂಬೆಳಕಲ್ಲಿ
ತಾರೆಯರ ಒಡನಾಟದಲ್ಲಿ
ಚಂದ್ರಮುಖಿ ಪಯಣಿಸುತಿಹಳು

ಕರ್ತವ್ಯದ ಕರೆಗೆ ಓಗೊಟ್ಟು
ಸಪ್ತ ಹಯವೇರಿ
ಬಾನಿನಂಗಳಕ್ಕೆ ಲಗ್ಗೆ ಇಟ್ಟನು
ಆರ್ಯ ಕುಮಾರ

ವಜ್ರ ಕಿರೀಟಗಳಿಂದ ಭೂಷಿತನಾದ
ಆರ್ಯ ಕುಮಾರನ ಸೌಂದರ್ಯವ
ಕಂಡು ನಾಚಿ ನೀರಾದಳು ಚಂದ್ರಮುಖಿ

ಚಂದ್ರಮುಖಿಯಲಿ ಪೇಮಾಂಕುರಿಸೆ
ನಾಲಗೆಗೆ ಮಾತುಗಳು ಎಟುಕದೆ
ನಾಚಿಕೆಯಿಂದ ಕೆನ್ನೆ ಕೆಂಪೇರಿದವು

ತಿಳಿದಾ ಗಗನವು ತಾನೇ ಆರ್ಯ ಕುಮಾರನಿಗೆ
ಮನ ಸೋತಂತೆ ನಾಚಿ
ಬಾನೆಲ್ಲಾ ಕೆಂಪಾಗಿಸಿದನು

ರೆಕ್ಕೆ ಬಿಚ್ಚಿ ಹಾರು ಹಕ್ಕಿಯೇ!


ನಾನಿರುವುದೊಂದು ದೊಡ್ಡಮರ
ನಮ್ಮ ರೆಂಬೆಯಲಿ ನೂರಾರು
ಪೊಟರೆಗಳು ಹತ್ತು ಹಲವು
ಹಕ್ಕಿಗಳ ನೆಮ್ಮದಿಯ ತಾಣ

ಭಾಸ್ಕರನ ಮೊದಲ್ಕಿರಣ ಮೂಡಿ
ಹಕ್ಕಿಗಳೆಲ್ಲಾ ಗೂಡುಗಳ ತೊರೆದು
ಹೋರಡುವುದು ಲೋಕ ಯಾತ್ರೆಗೆ
ತೆರಳುವುದು ಹೊಟ್ಟೆಗೆ, ಬದುಕಿಗೆ

ನಾನು ಇಲ್ಲೇ ಪೊಟರೆಯಲಿ
ಸಂಗಾತಿಗಳು ಬರುವವರೆಗೆ
ಕಾಯಬೇಕು ಹಾರಲಾರದೆ
ತೊಳಲಾಡಬೇಕು ಬದುಕಲೋಸುಗ

ಯಾವುದೋ ಕೆಟ್ಟ ಘಟನೆಗಳ
ಕಹಿನೆನಪುಗಳು ರೆಕ್ಕೆಗಳ
ಬಲವನ್ನೇ ಕಳೆದು ಹೆಳವನನ್ನಾಗಿಸಿದೆ
ನೆನಪುಗಳು ಮತ್ತೇ ಮತ್ತೇ ಕೊಲ್ಲುತ್ತಿವೆ

ನನ್ನದೇ ರೆಂಬೆಯಲಿ
ಪುಟ್ಟದೊಂದು ಪೊಟರೆಯಲಿ
ಬೆಳೆಯುತಿಹುದು ಪುಟ್ಟ ಹಕ್ಕಿಯೊಂದು
ಪುಟ ಪುಟನೆ ಹಾರುವುದು ನವ ಉತ್ಸಾಹದಿ

ಅದನೊಡಿದೊಡೆ ಬಲು ಸಂತಸವೆನಗೆ
ಹಾರು ಹಾರು ಮೆಲ್ಲಗೆ ಎತ್ತರೆತ್ತರಕೆ
ಜಾಗ್ರತೆಯಿಂದಲಿ ಎಚ್ಚರಿಯಿಂದಲಿ
ಮನಃಪೂರ್ವಕವಾಗಿ ಹರಸುವೆನು

ಅ ಪುಟ್ಟಹಕ್ಕಿ ನನ್ನನೊಡಿದೊಡೆ
ನಗುವುದು, ಪಟಪಟನೆ ಮಾತಾಡುವುದು
ನಗುತ ನಲಿಯುತ ಹಾರುವುದು
ದಿನವಿಡಿಯ ಅನುಭವಗಳ ಬಣ್ಣಿಸುವುದು

ಪುಟ್ಟ ಹಕ್ಕಿಯೇ ಹಾರು
ಎತ್ತರೆತ್ತರಕೆ ರೆಕ್ಕೆ ಬಲಿತಿವೆ
ಎಚ್ಚರಿಕೆ ಪುಟ್ಟಾ ಬೇರೆ ಕೆಟ್ಟ
ಹಕ್ಕಿಗಳು ತೊಂದರೆ ಕೊಟ್ಟಾವು

ಜೋಡಿಹಕ್ಕಿ ದೊರಕಿತೆಂದು
ಸಾಕಿಸಲಹಿದ ತಂದೆ-ತಾಯಿಗಳ
ಪ್ರೀತಿ ಅಕ್ಕರೆಯ ಅಣ್ಣ-ತಮ್ಮಂದಿರ
ಮರೆತು ದೂರ ಹೋಗದಿರು

ಪುಟ್ಟಾ ನೀ ಎತ್ತರೆತ್ತರಕೆ ಹಾರುತಿರೆ
ನನ್ನ ರೆಕ್ಕೆಗಳಿಗೂ ಶಕ್ತಿ ತುಂಬುವುದು
ನಿನ್ನೆತ್ತರಕೆ ನನ್ನ ಸ್ವಾಭಿಮಾನವೂ ಬೆಳೆವುದು
ಕಹೀ ನೆನಪುಗಳ ಮರೆತು ನಾ ಹಾರುವೆ

ಇಂದು ನಾನೂ ಹಾರುತಿರುವೆ
ನೀನೇ ಸ್ಪೂರ್ತಿಯಾದೆ
ಕಹೀ ನೆನಪುಗಳೆಲ್ಲಾ ಮರೆತಿದೆ
ನಿನ್ನದೇ ಸವಿನೆನಪುಗಳು

-ಸ್ವಾತಂತ್ರದ ಹಾಡು-

ಮಂಜು ಸುರಿಯುತ್ತಿದೆ
ಎದುರಿಗೆ ದಿಟ್ಟತನದಲಿ ಎದೆಗುಂಧದೆ ನಿಂತೆದೆ ಪರ್ವತಶ್ರೇಣಿ
ಕಗ್ಗತ್ತಲು ಕಣ್ಣಮುಂದೆ ಕಾನನವ ಆವರಿಸಿದೆ
ಕಣ್ಣ ಮುಚ್ಚಿದರೂ ನಿದ್ರೆ ಆವರಿಸದು
ಕಾಡಿದೆ ಮನದ ತುಂಬಾ ಸ್ವಾತಂತ್ರದ ಹಾಡು

ನಮ್ಮ ದೇಶ, ನಮ್ಮ ಭಾಷೆ
‘ವಂದೇ ಮಾತರಂ’ ಎದೆ ಎದೆಗಳಲ್ಲಿ ಕಿಚ್ಚುಹಚ್ಚಿದೆ
ಎಷ್ಟು ದಿನ ಗುಲಾಮಗಿರಿಯ ಶೋಷಣೆ?
ನಮ್ಮ ದೇಶ, ನಮ್ಮ ಮಣ್ಣು ನಾವೇ ನಮ್ಮ ಆಳುವೆವು
ದಿಕ್ಕು ದಿಕ್ಕುಗಳಲ್ಲಿ ಮೊಳಗಿತು ಸ್ವಾತಂತ್ರದ ಹಾಡು

ಸಾಲು ಸಾಲು ಜನರು
ತಾಯ ಗುಲಾಮಗಿರಿಯ ಬೇಡಿ ಕಳಚಲು
ತನು ಮನ ಪ್ರಾಣ ಮುಡಿಪಾಗಿಟ್ಟರು ನವ ಯೋಧರು
ಜಾತಿ ಮತ ಪಂಥಗಳ ಭೇದ ಭಾವ ತೊಲಗಿಸುತಾ
ನಾವೆಲ್ಲಾ ಭಾರತೀಯರೆಂಬ ಧೀರತೆಯ ಗೀತೆ ಮೊಳಗಿತು

ನಮ್ಮ ತಪ್ಪು ನಮ್ಮ ಒಪ್ಪು
ನಮಗೆ ನಾವೇ ವಿಮರ್ಶಕರು
ತಿದ್ದಿ-ತೀಡಿ, ಅಳಿಸಿ-ಬೆಳಸಿ ಹೊಸ ದಾರಿಯ ಹುಡುಕುವೆವು
ಶಾಂತಿ ಮಂತ್ರ ನಮ್ಮ ಶಕ್ತಿ
ಭಾಂದವ್ಯ ನಮ್ಮ ಯುಕ್ತಿ- ಪ್ರೇಮ ಗೀತೆ ಪಸರಿಸಲಿ

ನೂರು ಜನರು ಬರಲಿ
ಶರಣು ಬಂದವರಿಗೆ ತಾಯ ಆಸರೆ ಕಲ್ಪಿಸುವೆವು
‘ಬಂದೂಕು-ಖಡ್ಗ’ ಶಾಂತಿ ಮಂತ್ರ ಪಠಿಸದು
‘ಮತಾಂತರ-ಜಿಹಾದ್’ ಮೋಕ್ಷ ದೊರಕದು
ರಕ್ತ ಹರಿಯಲಿ ಸ್ವಾಭಿಮಾನ ಗೀತೆ ಉಳಿಯಲಿ

-ಭಾರತಿ-


ನಮ್ಮ ನಾಡಿನಲ್ಲಿ ನಾವು ಪರಕೀಯರು
ಸ್ವಾತಂತ್ರದ ಕನಸು ಹೊತ್ತ ಹೋರಾಟಗಾರರು

ನಮ್ಮ ನಾಡು
ನಮ್ಮ ಭಾಷೆ
ಸಾವಿರ ಸಾವಿರ ವರ್ಷಗಳ ಇತಿಹಾಸ
ನಮ್ಮ ಜನ
ನಮ್ಮ ಮನ
ಸಾವಿರ ಸಾವಿರ ಒಡಕಿನ ಪರಿಹಾಸ

ನಮ್ಮ ದೇಶ
ನಮ್ಮ ತಾಯಿ
ಕೋಟಿ ಕೋಟಿ ಮಕ್ಕಳಿದ್ದರೂ ಸೊರಗಿಹಳು
ನಮ್ಮ ಮತ
ನಮ್ಮ ಧರ್ಮ
ಸಾವಿರ ಸಾವಿರ ದಾರಿಗಳಾಗಿ ಹರಿದು ಹಂಚಿ ಹೋಗಿದೆ

ನಾವು ಒಂದು
ನಾವೆಲ್ಲಾ ಒಂದು
ಅಜ್ನಾನದಿಂದ ವೈಮನಸ್ಸುಗಳು ಬೃಹದಾಕಾರವಾಗಿದೆ
ನಮ್ಮ ಮತ
ನಮ್ಮ ಜಾತಿ
ಜ್ನಾತಿಯಿಲ್ಲದ ಸಂಕೀರ್ಣತೆಗಳು ಅನೂಚಿತವಾಗಿ ಮೆರೆದಿದೆ

ಬಾ ಬದುಕಿಗೆ...ಬಾ ಸಾರ್ಥಕತೆಗೆ..

ನೀನು ಬದಲಾಗಬೇಕು
ನೀನು ತುಂಬಾ ಬದಲಾಗಬೇಕು
ಮತ್ತೆ ಮತ್ತೆ ಹೇಳುತ್ತಿದ್ದಳವಳು
ನನ್ನಲ್ಲಿ ಏನು ಬದಲಾಗಬೇಕು?
ನನ್ನಲಿ ನೂರು ಪ್ರಶ್ನೆಗಳು
ಮೊಡಲು ಕಾರಣ ಅವಳೇ!

ನೀಟಾಗಿ ತಲೆಕೂದಲು ಕತ್ತರಿಸು
ಇಸ್ತ್ರಿ ಮಾಡಿದ ಬಟ್ಟೆಗಳನ್ನೇ ಧರಿಸು
ಒಂದೊಂದೇ ತಿದ್ದಿ ತೀಡಿ ಹುರುಪುಗೊಳಿಸಿದಳವಳು

ಎಲ್ಲರೊಂದಿಗೂ ಮಾತನಾಡು
ತುಟಿಯ ಮೇಲೆ ಸದಾ ನಗುವಿರಲಿ
ನಿನ್ನ ಯೋಚನೆಗಳನ್ನು ಬದಲಾಯಿಸೆಂದು ದಾರಿ ತೋರಿದಳವಳು

ದಾರಿ ತೋರುವ ದೀಪವಾಗಿ
ಜ್ನಾನವೀಯುವ ಗುರುವಾಗಿ
ಮುಕ್ತಿ ತೋರುವ ತಾಯಿಯಾಗಿಹಳವಳು

ಹೇಗೆ ತೀರಿಸಲಿ ನಿನ್ನ ಋಣವ
ನಿನ್ನ ಸೇವೆ ಮಾಡುವ ಶಕ್ತಿ
ಎನಗೆ ನೀಡು ತಾಯೇ

ನೀನಿಲ್ಲದೆ ಈ ಜೀವನ ಬರಡು
ನಿನ್ನಿಂದಲೇ ಈ ಬದುಕಿಗೆ ಸಾರ್ಥಕತೆ
ಬಾ ಬದುಕಿಗೆ...
ಬಾ ಸಾರ್ಥಕತೆಗೆ

-ಸಾಕ್ಷಾತ್ಕಾರ-

ಮದುವೆಯೆಂದರೆ ಸ್ವಾತಂತ್ರದ ಹರಣ
ನಮ್ಮತನವ ವಿಮರ್ಶೆಗೊಳಪಡಿಸಿ ತೋರುವ ಮರಣ

ತನ್ನ ಮನೆಯಲ್ಲೇ ಆಗುವನು ಪರಕೀಯ
ಸುಖ-ಸಂತೋಷದ ತೋರುವಿಕೆಯ ರಾಜಕೀಯ
ಮಾತಿಗೆ ಬೆಲೆಯಿಲ್ಲ ,ತನ್ನವರ ನಡುವೆಯೇ ಅಸ್ಪೃಶ್ಯ
ನೋಡುಗರಿಗೆ ಮನರಂಜನೆಯ ದೃಶ್ಯಕಾವ್ಯ

ಎಲ್ಲೇ ಹೋದರೂ, ತಡವಾಗಿ ಬಂದರೂ
ಮೈಮೇಲೆ ಬೀಳುವುದು ಪ್ರಶ್ನೆಗಳ ಬಾಣ
ಮನೆಯಲ್ಲಿ ತನ್ನ ಪಾಡಿಗೆ ತಾನು ಸುಮ್ಮನಿದ್ದರೂ
ಠೀಕೆ-ಟಿಪ್ಪಣಿ ಮೊನಚು ಮಾತಿನ ಭಾಷಣ

ಹೆಚ್ಚು ಮಾತನಾಡಿದರೂ ಕಷ್ಟ
ಮೌನಿಯಾದರಂತೂ ತೀರ ನಿಕೃಷ್ಟ
ಬೆಂಕಿಯಿಲ್ಲದೆ ಬೇಯುವುದೇ ಸಂಸಾರ
ಇದುವೇ ಸತ್ಯ ದರುಶನದ ಸಾಕ್ಷಾತ್ಕಾರ

-ಅತಂತ್ರ-

ಏನು ಕಾರಣವ ಹೇಳಲಿ?
ನಾಳೆ ನಾನು ಬರುವುದಿಲ್ಲವೆಂದು
ಏನು ಹೇಳಿದರೂ
ನೀನು ತಿಳಿಯುವೆ ನನ್ನಲಿ ಪ್ರೀತಿಯಿಲ್ಲವೆಂದು
ನೂರು ಮಾತು ಸಾಕಾಗೊಲ್ಲ
ನಿನ್ನ ಹೇಗೆ ತಣಿಸಲಿ?
ನಿನ್ನೆ ಬರುವೆನೆಂದು ಹೇಳಿ
ನಾಳೆ ಬಾರೆನೆಂದರೆ ಮಾತು ಸಾಯುವುದಿಲ್ಲವೇ?

ಸುಮ್ಮನೇ ಕುಳಿತು ಯೋಚಿಸುವ ಭಾವಶಿಲ್ಪ
ಮನದೊಳಗೆ ಕಾಣದ ಕಧನದ ಮೂರ್ತಶಿಲ್ಪ
ಮನವ ನೋಯಿಸಿ ಫಲವೇನು?
ಆರ್ತನಾದದಲಿ ಆಂತರ್ಯದ ಭಾವ ಪ್ರತಿಮೆ ತುಂಬಿಹುದೇ?

ಮನಸ್ಸಿನಾಳಕ್ಕೆ ಇಳಿದು ತಿಳಿಯಲಾರೆ
ಮಾತಿನಲಿ ಹೇಳಿದರೇ ಅರ್ಥವಾಗದ ಸ್ಥಿತಿ ನನ್ನದು
ಅರ್ಥಮಾಡಿಕೊಳ್ಳಬೇಕಿದೆ ನಿನಗಾಗಿಯೇ
ಕಾರಣವ ಬಿಟ್ಟೆ ನಿನಗಾಗಿಯೇ ಬರುವವನಿದ್ದೇನೆ

-ಹೆಣ್ಣು-


ಹೆಣ್ಣು-ಹೆಣ್ಣಲ್ಲಿ ಮತ್ಸರವೇಕೆ?
ಒಂದೂ ತಿಳಿಯೋದಿಲ್ಲ-ಪ್ರಶ್ನೆಗೆ ಉತ್ತರವಿಲ್ಲ

ತಾಯಿ-ಮಗಳು ಅವಿನಾಭಾವ ಸಂಬಂಧ
ಮತ್ಸರವೆಲ್ಲಿ ಬಂತು? ಮತ್ಸರ ಮೊಲೆ ಸೇರಿತೋ!

ಅತ್ತೆ-ಸೊಸೆ ಋಣಾನುಬಂಧ
ಮತ್ಸರವೂ ಬಂತು-ತಲೆಯ ಮೇಲೆ ಕುಳಿತಿತೋ!

ತಾಯಿ-ಮಗಳು ಕರುಳಿನ ಸಂಬಂಧ
ಪ್ರೀತಿಯೇ ಮೈವೆತ್ತಿದಂತೆ

ಅತ್ತೆ-ಸೊಸೆ ದೇವರು ಕಲ್ಪಿಸಿದ ಬಂದ
ದ್ವೇಷವೇ ಧರೆಗಿಳಿದಂತೆ

ತಾಯಿ-ಮಗಳು ನಿರಾತಂಕ ಪೋಷಣೆ
ಅತ್ತೆ-ಸೊಸೆ ನಿರಂತರ ಶೋಷಣೆ

-ಮಧುಮೋಹಿ-

ಮೋಡ ಕವಿಯುತ್ತಿದೆ ನಾಳೆ ಬರುವೆಯೆಂದು
ಮನಸು ಹಾರುತ್ತಿದೆ ಸುಖದ ಶಿಖರವ ಏರಲೆಂದು

ಮಂಧಬೆಳಕು ನೂರು ಜನರು ಅಲ್ಲಿ
ಕಾಯುತ್ತಾ ಕುಳಿತಿದೆ ಗ್ರಾಹಕರು ಬರುವರೆಂದು
ಖಾಲಿ ಬಾಟಲು, ಖಾಲಿ ಕುರ್ಚಿ ಅಲ್ಲಿ
ಕತ್ತಲೊಳಗೆ ಸುಖವೂ ಹೂತಿರುವುದೆಂದು

ದ್ರಾಕ್ಷಾರಸ ಗಂಟಲೊಳಗಿಳಿದರೆ ಸ್ವರ್ಗ ಆರೋಹಣ
ಕತ್ತಲೊಳಗೆ ಮೈಮರೆಯುತ್ತಾ ನಾಳೆ ಬರುವುದೆಂದು
ದೇಹದ ಆಯಸ್ಸು ಇಳೆಯ ಕಡೆಗೆ ಅವರೋಹಣ
ಬೆಳಗು ಕಾಣದೆ ಹೃದಯವನ್ನೇ ಇರಿಯುವುದೆಂತು

ಕತ್ತಲೊಳಗೆ ಬೆಳಕು ಹುಡುಕುವ ಪಯಣಿಗ
ಹೃದಯದೊಳಗೆ ಪ್ರೀತಿಯ ವಿಷವ ಅರೆಯುವವ
ಬೆಳಗಿನೊಳಗೆ ಕತ್ತಲೆ ಮಾರುವ ವ್ಯಾಪಾರಿ
ಸಾವಿಗಾಗಿ ಕಾಯುವ ಪ್ರೀತಿಗಾಗಿ ಸೆಣಸುವ ಸೈನಿಕ

ರಾತ್ರಿಯಿಡೀ ನಿದ್ದೆಕೆಟ್ಟು ಪ್ರೀತಿಯ ಕೋಟೆ ಕಾಯುವೆ
ದೇಹದಲ್ಲಿ ಶಕ್ತಿ ಕುಂದದೇಯಿರಲೆಂದೇ ಈ ಮಧು
ಹೃದಯ ಛಿದ್ರ ಛಿದ್ರವಾಗಿದೆ ಅವಳು ಬಿಟ್ಟ ಬಾಣದಿಂದ
ಹೆಜ್ಜೆ ಮುಂದೆಹಾಕದಂತೆ ಕಟ್ಟಿಹಾಕಿದೆ ಅವಳ ಪ್ರೀತಿಯ ಬಲೆ

ಬಲೆಯೊಳಗೆ ಸಿಕ್ಕ ಮೀನಿನಂತೆ ನಾನಾಗಿಹೆ
ಮಧುವಿನ ಹನಿಹನಿಯಲ್ಲೂ ಅವಳ ಕಹಿನೆನೆಪು
ಭಾಳಿನ ಪುಟಪುಟದಲ್ಲೂ ಅವಳ ಅಪೂರ್ಣ ಸಹಿ
ಅವಳ ನೆನೆಪೇ ಹೆಚ್ಚಾಗಿ ಆಗಿಹೆ ಮಧುಮೋಹಿ

ಸಾವಿನ ಒಂದೋಂದು ಮೆಟ್ಟುಲೇರುತ್ತಿದ್ದರೆ ಏನೋ ಹರ್ಷ
ಬದುಕಿ ಸಾಧಿಸಿದ್ದಾದರೂ ಏನು? ಪ್ರಶ್ನೆ ಮುಂದಿದೆ
ಕೇಕೆ ನಗುವ ಹಾಕಿ ಅವಳ ನಗುವನೇ ತಂದಿದೆ
ಸಮಯವನೇ ಕೊಂದೆ, ನನಗೆ ನಾನೇ ಸಮಾಧಿ ಕಟ್ಟಿದೆ

ಮೋಡ ಕವಿದಿದೆ ಹೃದಯ ಭಾರವಾಗಿದೆ
ಭೂಮಿಗೆ ಭಾರವಾಗಿ ಕಾಯುತಿಹೆನು ಇಳೆ

-ಕೋಗಿಲೆಯೇ ಹಾಡು ಬಾ-

ಯಾವ ಕೋಗಿಲೆಯ ಕರೆಯಲಿ
ಎನ್ನೆದೆಯ ಹಾಡು ಹಾಡಲೆಂದು
ನೋವಿನ ನೂರು ರಾಗಕ್ಕೆ
ಎದೆಯ ತಂತಿ ಮೀಟುವುದೆಂತು

ಅಳುವ ರಾಗಕೆ ತಾಳ ಹಾಕುವರಾರು?
ಶುದ್ಧ ಶೃತಿಯ ಹಿಡಿದು ಹಾಡುವರಾರು?
ಶೃತಿ ಹಿಡಿದ ಮಳೆಯ ರಾಗಕ್ಕೆ
ನೂರು ಮರಗಳು ಮಾಧುರ್ಯ್ಯ ತುಂಬಿವೆ

ನನ್ನೆದೆಯ ತುಂಬೆಲ್ಲಾ
ನೂರುಭಾವಗಳು ಹೊರಬರಲಾರದೆ ಚಡಪಡಿಸುತ್ತಿದೆ
ಯಾವ ನೋವಿಗೆ ಯಾವ ರಾಗವ ಕಟ್ಟಲಿ?
ಯಾವ ಕೋಗಿಲೆಗೆ ಯಾವ ಹಾಡು ಹಾಡಲೆಂದು ಹೇಳಲಿ?

ನನ್ನೆದೆಯ ಭಾವಗಳೆಲ್ಲಾ
ಬತ್ತಿಹೋಗುವ ಮುನ್ನ
ಕಾಣದ ಕೋಗಿಲೆಯೇ ಬಾ
ಎನ್ನೆದೆಯೊಳಗೆ ನುಗ್ಗಿ ರಾಗರತಿಯ ಹಾಡು ಬಾ

-ಕಾಣದ ಪರದೆ-

ಎಲ್ಲಿ ಹೋದಿರಿ ಕಾರಣಗಳೇ
ಮನದ ನೆಮ್ಮದಿಯ ಹೊತ್ತು ಎತ್ತ ಹೋದಿರಿ?
ಗಹಗಹಿಸಿ ನಗುವ ನಗುವು ಮಾತ್ರ ಕೇಳಿಸುತ್ತಿದೆ
ಮನವು ದಿಕ್ಕುಗೆಟ್ಟು ಓಡುವಂತೆ ಮಾಡಿದೆ


ಕಾಣದ ಕಾರಣಗಳೇ
ಮನದ ತಿಳಿಯ ಕದಡಿದಿರೇಕೆ?
ಅತ್ತ ಹೇಳಲಾಗದೆ
ಇತ್ತ ಸುಮ್ಮನಿರಲಾಗದೆ ಮನಸು-ಬುದ್ಧಿ ಕದನಕ್ಕಿಳಿದಿದೆ


ಅದು ಸರಿ, ಇದು ತಪ್ಪು
ವಾದ-ವಿವಾದಗಳ ಸುಳಿಯಲ್ಲಿ
ಅದು ಸತ್ಯ, ಇದು ಮಿಥ್ಯ
ತರ್ಕ-ವಿತರ್ಕಗಳ ಬಾಣಲೆಯಲ್ಲಿ


ಬಿದ್ದು ಹೊರಳಾಡುವುದು
ನೋವಿನಲಿ ಬೇಯುವುದು
ಕಾಣದ ಗುರಿಯತ್ತ ಹೊರಳುವುದು
ಕಾರಣಗಳು ಗರಿಗೆದರಿ ನಲಿಯುವುದು


ಪೂರ್ವಾಗ್ರಹದ ಕಪ್ಪು ಮೋಡ ಆವರಿಸಿದೆ
ಬುದ್ಧಿಗೆ ಮಂಕು ಕವಿದಿದೆ ಬೆಳಕು ಕಾಣದೆ
ನಾನು ಹೇಳುವುದೇ ಸತ್ಯ ಬೇರೆಯವರದೆಲ್ಲಾ ಮಿಥ್ಯ
ಕಾಣದ ಪರದೆಯೊಂದು ಪರಿಧಿಯ ದಾಟದಿರಲೆಂದು ಕಟ್ಟಿಹಾಕಿದೆ

-ವಿಧಿ-


ಸುಮ್ಮನೆ ಮರೆಯಲ್ಲಿ ನಿಂತು ನಗುತ್ತಿದೆ
ಮೇಲೆ ಮೇಲೇರೆಂದು ಮುಂದೆ ತಳ್ಳಿ ಕೈಬಿಟ್ಟಿದೆ
ಹಾರಿಬಿಟ್ಟು ಗಾಳಿಪಟದ ಸೂತ್ರವ ಹರಿದಿದೆ
ಏಳು-ಬೀಳುಗಳ ಕಂಡು ಗಹಗಹಿಸಿ ನಗುತ್ತಿದೆ
ತನ್ನ ಶಕ್ತಿಯ ಅಗಾಧತೆಯ ಪ್ರದರ್ಶಿಸುತ್ತಿದೆ
ತನಗೆ ಸರಿಸಾಟಿಯಾರಿಹರೆಂದು ಬಡಬಡಿಸುತ್ತಿದೆ

ನೋವು-ನಲಿವುಗಳು ಕೂಡಿರಲೆಂದು
ಸಿಹಿ-ಕಹಿ ಬಾಳಿಗಿರಲೆಂದು
ಸೂತ್ರವ ಹಿಡಿದು ಪಾಠವ ಕಲಿಸುವ ಗುರುವೇ ತಾನೆಂದು
ಮನವನ್ನು ನೋವಿನಲ್ಲಿ ಶೋಧಿಸುತ್ತಿದೆ
ಶಾಂತಿಯ ಬಸಿದು ಬಸಿದು ತೆಗೆಯುತ್ತಿದೆ
ಗಲಭೆ, ಕೊಲೆ ರಕ್ತವ ಹರಿಸುತ್ತಿದೆ
ಶಾಂತಿ ಶಾಂತಿ ಶಾಂತಿ ಎಲ್ಲೆಂದು ಹುಡುಕುವಂತೆ ಮಾಡಿದೆ

-ಅರಿವಿನ ಹಣತೆ-

ಹಣತೆಯೊಂದು ಬೆಳಕ ಚೆಲ್ಲಿ
ಎಷ್ಟು ಕತ್ತಲ ನುಂಗುವುದೋ?
ಅದರ ಪರಿಧಿಯ ನಾ ಬಲ್ಲೆ
ಬೆಳಕ ಕಾಣದೆ ಎಷ್ಟು ಜೀವಗಳು ನರಳುತಿಹುದೋ?
ಮನದ ಪರಿಧಿಯ ನೀನೊಬ್ಬನೇ ಬಲ್ಲೆ

ರವಿಯ ಕಣ್ಣು ಭೂಮಿಯ ಕಡೆಗೆ
ಜೀವ ಕೋಟಿಗದುವೆ ಕಾರಣ ಏಳಿಗೆಗೆ
ಹೂವು ಹೊರಳುವುವು ಸೂರ್ಯನ ಕಡೆಗೆ
ನಮ್ಮ ಯೋಚನೆ ಬರಿಯ ಹೊಟ್ಟೆಯ ಬಗೆಗೆ

ಮನದ ದೀಪ ಹಚ್ಚಲೊಲ್ಲರು
ಬದುಕಿನ ಭೇಗುದಿಗೆ ನರಳುತಿಹರು
ಕೋಟಿಗೊಬ್ಬನೇ ಸಂಭವಿಸುವನು
ಜನರ ಮನದಲಿ ಅರಿವಿನ ಹಣತೆಯ ಹಚ್ಚುವನು

ಎಷ್ಟು ಯುಗಗಳು ಕಾಯಬೇಕೋ?
ಎಷ್ಟು ಜೀವಗಳು ನರಕಯಾತನೆ ಅನುಭವಿಸಬೇಕೋ?
ಮನದ ಅಂತಃಚಕ್ಷುವ ಎಚ್ಚರಗೊಳಿಸದ ಬೆಳಕು
ನೂರು ಇದ್ದರೇನು? ಇಲ್ಲದಿದ್ದರೇನು?

-ಕನಸು-


ನಾನೊಂದು ಕನಸ ಕಂಡೆ
ಮನಸೇ ಅದನು ಹೇಗೆ ಹೇಳಲಿ?

ನಾಡಿನ ನದಿಗಳೆಲ್ಲಾ ತುಂಬಿ ಹರಿಯುವುದ ಕಂಡೆ
ಗೋವುಗಳೆಲ್ಲಾ ಕರೆಯದೇ ಹಾಲು ಕೊಡುವುದ ಕಂಡೆ
ಚಾರಿತ್ರ್ಯದ ಹೊಳೆ ಹರಿದು ದ್ವೇಷದ ಅವನತಿಯ ಕಂಡೆ
ವ್ಯಕ್ತಿಯ ಅಹಂ ತಾನೇ ತಾನಾಗಿ ಸುಡುವುದ ಕಂಡೆ

ಪರನಾರೀ ಸಹೋದರರ ಕಂಡೆ
ಕಾಮ ಸಂಕಟಪಡುತ್ತಾ ನರಳುವುದ ಕಂಡೆ
ದ್ವೇಷ ಮತ್ಸರ ಮೋಹಗಳೆಲ್ಲಾ ಧೂಳಿಪಟವಾಗುವುದ ಕಂಡೆ
ನೋವು ತಾನೇ ಮಸಣದ ಹಾದಿ ಹಿಡಿಯುವುದ ಕಂಡೆ

ಜಾತಿ-ಮತ ಭೇದಗಳೆಲ್ಲಾ ಉಸಿರುಗಟ್ಟಿ ಸಾಯುವುದ ಕಂಡೆ
ಧರ್ಮಗಳೆಲ್ಲಾ ಮೂಲೆಗುಂಪಾಗುವುದ ಕಂಡೆ
ಗುಡಿ-ಮಸೀದಿ ಚರ್ಚುಗಳೆಲ್ಲಾ ಧರೆಗುರುಳುವುದ ಕಂಡೆ
ಮೃಗೀಯ ಮಖವಾಡ ಕಳಚಿ ಮಾನವೀಯತೆಯು
ಅನಾವರಣಗೊಳ್ಳುವುದ ಕಂಡೆ

-ಬೆಂಬಲ-


ಯಾರು ನನ್ನ ಬೆನ್ನ ಹಿಂದೆ ಬೆಂಬಲವಾಗಿ ನಿಂತರೋ?
ಕಾಣದ ಆ ಕೈಗಳು ಎಷ್ಟು ಸಾರಿ ಬೆನ್ನು ತಟ್ಟಿತೋ?
ಪ್ರತಿ ಸಾರಿ ಸೋತು ಕಣ್ಣೀರಿಟ್ಟಾಗ
ಜೀವನ ಬೇಡಬೇಡವೆಂದು ಬೇಸರಿಸಿದಾಗ
ನನ್ನ ಕಣ್ಣಾಗಿ,ಮನದ ಶಕ್ತಿಯಾಗಿ,ಗೆಲುವಾಗಿ ಕಾಣದಾಯಿತೋ!

ಹೃದಯ ಬೆಂದು ಬೇಯುತ್ತಿರುವಾಗ
ಕಣ್ಣಲ್ಲಿ ನೋವು ನೀರಾಗಿ ಹರಿವಾಗ
ಗೆಳೆಯರು ಕೈಲಾಗದವನೆಂದು ನಕ್ಕಾಗ
ಪರೀಕ್ಷೆಯಲ್ಲಿ ನಾಪಾಸಾದಾಗ
ನನ್ನ ಬೆನ್ನ ಬಿಂದೆ ನಿಂತವರಾರೋ?

ಆಶಾವಾದವೆಲ್ಲಾ ನಿರಾಶೆಯಾಗಿ ಕರಗುವಾಗ
ಹೆಜ್ಜೆಹೆಜ್ಜೆಯಲ್ಲಿ ಸೋಲುಂಡಾಗ
ನನ್ನವರೆಂದುಕೊಂಡವರೆಲ್ಲಾ ಕಾಣೆಯಾದಾಗ
ಏಕಾಂಗಿಯಾಗಿ ಜೀವನದ ಕಹಿ ನುಂಗುವಾಗ
ನನ್ನ ಬೆನ್ನ ಬಿಂದೆ ನಿಂತವರಾರೋ?

ನಾನು ನಾನಾಗದೆ ನನ್ನ ನಾ ಮರೆತಾಗ
ನನ್ನತನವ ಕಂಡುಕೊಂಡು ನರಳುವಾಗ
ನೆರೆಹೊರೆಯವರ ಠೀಕೆ ಮನವ ಕಲಕಿದಾಗ
ಸಿಟ್ಟು ದ್ವೇಷವಾಗಿ ಮನುಷ್ಯತ್ವವ ಮರೆತಾಗ
ನನ್ನ ಬೆನ್ನ ಬಿಂದೆ ನಿಂತವರಾರೋ?

ಇಂದು ನಾನು ನಾನಾಗಿಹೆ
ಠೀಕೆ-ಟಿಪ್ಪಣಿಗಳಿಗೆಲ್ಲಾ ಉತ್ತರವಾಗಿಹೆ
ಕಂಡು ನಕ್ಕ ಗೆಳೆಯರಿಗೆಲ್ಲಾ ಸವಾಲಾಗಿಹೆ
ಸೋತು-ಸೋತು ಗೆಲ್ಲುವಂತಾಗಿಹೆ
ಯಾರೂ ಸಾಗದ ಹಾದಿಯಲ್ಲಿ ನಡೆದಿಹೆ
ನನ್ನ ಬೆನ್ನಹಿಂದೆ ನಿಂತು ಬೆಂಬಲವಾಗಿಹರಾರೋ
ತಿಳಿಯುವ ಬಯಕೆ ಇಂದಾಗಿದೆ

-ದಿನದ ಪುಟ-


ನೀನು ಬರುವೆಯೆಂದು ನಾ ಕಾಯುತ್ತಿದ್ದೆ
ನಿನ್ನ ಕಂಡು ಧನ್ಯತೆಯ ಪಡೆಯೋಣವೆಂದು

ಬೆಳಗಿನ ಸೂರ್ಯ ಕಣ್ಣುಬಿಟ್ಟಾಗ
ಮುಗಿಲು ಮೋಡಗಳ ಕಲೆಹಾಕಿ ನಿನಗಾಗಿ ಕಾಯುತ್ತಿತ್ತು
ನೀನು ಬರಲಿಲ್ಲವೆಂದು ತಾಳ್ಮೆ ಕಳೆದುಕೊಂಡಾಗ
ದುಃಖದ ಕಟ್ಟೆಯೊಡೆದು ಕಣ್ಣೀರು ಮಳೆಯಾಗಿ ಇಳಿಯುತ್ತಿತ್ತು

ಅದರ ದನಿಯು ನಿನಗೆ ಕೇಳಲಿಲ್ಲ
ನೀನು ಬರಲಿಲ್ಲ, ನನಗೆ ತಾಳ್ಮೆ ಕೆಡಲಿಲ್ಲ
ಬಾನ ಸೂರ್ಯ ಪಶ್ಚಿಮದಲ್ಲಿ ದಿನಕ್ಕೆ ತೆರೆ ಎಳೆಯುತ್ತಿದ್ದ
ಸಂಜೆಗೆಂಪು ಮುಗಿಲು ಮಳೆಯ ಶೃತಿಹಿಡಿದು ನಿನ್ನ ಕರೆಯುತ್ತಿದ್ದ

ಯಾವ ಹೆಸರಿನಿಂದ ನಿನ್ನ ಕರೆಯಲಿ?
ಯಾವ ಉಡುಗೊರೆಯ ನೀಡಿ ಗೌರವಿಸಲಿ
ಇಂದೆಲ್ಲವೂ ಭ್ರಮೆಯಂತೆ ಮನಕ್ಕೆ ಅನಿಸುತಿತ್ತು
ನೀನು ಬರಲಿಲ್ಲ,ಜೀವನದ ಈ ದಿನದ ಪುಟ ನಿನ್ನಹೆಸರಿಲ್ಲಿ ಬರೆಯಲಾಗಿತ್ತು

ನೂರು ನೆನಪುಗಳು ಮನದ ತೆರೆಯಲ್ಲಿ ತೆರೆದಿದೆ
ನೂರು ಅನಾಧಿಗಾನಗಳ ಸವಿನೆನಪುಗಳ ಹರಿಸಿದೆ
ಮಮತೆಯಿಂದಲಿ ನೀ ಕಲಿಸಿದ ಒಲವಿನ ನುಡಿಯಿದೆ
ನಿನ್ನ ಋಣವ ತೀರಿಸಲೆಂತೆಂದು ಮನವು ಎಣಿಸಿದೆ

ಈ ದಿನದಲ್ಲಿ ಏನೋ ವಿಶೇಷತೆಯಿದೆ
ನಾ ನಿನಗಾಗಿ ಕಾತರಿಸಿ ಕಾಯುತ್ತಿದ್ದೆ
ಬೇಸರವಿಲ್ಲ ನೀನು ಬರಲಿಲ್ಲವೆಂದು
ನಿನ್ನ ಮಧುರಗೆಳೆತನದ ಮುತ್ತುಗಳನ್ನು ಈ ದಿನದ
ಪುಟಗಳಲ್ಲಿ ಬರೆದೆನೆಂದು

-ಹೃದಯ ಮಾಧವ-

ಮಾಧವ ಮುರಳೀಲೋಲ ಎಲ್ಲಿರುವೆಯೋ?
ನೀನು ಹೇಗಿರುವೆಯೋ?
ತಿಳಿಯುವ ತವಕವು ಮನದಲ್ಲಿ ಮೂಡಿದೆ ಇಂದು
ರಾಧಾಮಾಧವ ಎಲ್ಲಿ ಹುಡುಕಲಿ ನಿನ್ನ
ಎಲ್ಲಿ ಹುದುಗಿರುವೆ?
ನೀನಿಲ್ಲದೆ ಬದುಕಿರಲಾರೆನು ಎಂದೆಂದೂ

ಸುತ್ತ ತಿರುಗುವ ಉದ್ಬುದ್ದ ತಿರುಗುವ
ಗಾಳಿಯ ನಿಲ್ಲಿಸಿ ಕೇಳಿದೆ " ಕೃಷ್ಣನೆಲ್ಲಿ? ಕೃಷ್ಣನೆಲ್ಲಿ?" ಎಂದು
ತಂಗಾಳಿಯ ಬೀಸಿ ತಣಿಸಿ ಕಾಣದೆ ಮರೆಯಾಯಿತು

ಉಧ್ಯಾನವನದಲ್ಲಿ ಆಗ ತಾನೆ ಕಣ್ಣುಬಿಡುತ್ತಿರುವ
ಸುಮವನ್ನು ಕೇಳಿದೆ" ಕೃಷ್ಣನೆಲ್ಲಿ? ನೀ ಕಂಡೆಯಾ?" ಎಂದು
ನಗುಮೊಗದಿ ಅರಳಿ ಪರಿಮಳವ ಪಸರಿಸಿತು

ಮಾಮರದಲ್ಲಿ ಕುಳಿತ ಕೋಗಿಲೆಯನ್ನು ಕೇಳಿದೆ
" ಕೃಷ್ಣನೆಲ್ಲಿಹನು? ನೀ ಕಂಡೆಯಾ?" ಎಂದು
ಮಧುರ ಕಂಠದಿ ಸುಸ್ವರ ಗಾಯನ ಮಾಡಿತು

ಆಗಸದಲ್ಲಿ ಪಯಣಿಸುವ ಕರಿ-ಬಿಳಿ ಮೋಡಗಳ ಕೇಳಿದೆ
" ಹೇಳಿರಿ ಗೆಳೆಯರೇ ಮಾಧವನೆಲ್ಲಿಹನೆಂದು?"
ಆಗಸದಲ್ಲಿ ಕುಣಿಯುತ್ತಾ ತಂಪದ ಮಳೆಗೈದವು

ಕಾನನದಿ ತಿರುಗುವ ನವಿಲನ್ನು ಕೇಳಿದೆ
" ಗೆಳೆಯಾ ನೀನಾದರೂ ಹೇಳು ಮಾಧವನೆಲ್ಲಿಹನೆಂದು?"
ನೂರು ಕಣ್ಣುಗಳ ತೆರೆದು ತಕಥೈ ತಕಥೈ ನರ್ತನ ಮಾಡಿತು

ನೂರು ಹಾದಿಯ ಸವೆಸುತಾ ಸಾಗುವ ನದಿಯನ್ನು ಕೇಳಿದೆ
" ಹೇಳೇ ನೀರೇ ಮಾಧವನೆಲ್ಲಿಹನೆಂದು?"
ಮಧುರದಿ ತಂಪನ್ನೆರೆಯುತಾ ಸಾಗರದ ಕಡೆ ಓಡಿತು

ಅಂಡಲೆದು ಸುಸ್ತಾಗಿ ನನ್ನ ಮನವನೇ ಕೇಳಿದೆ
" ಎಲ್ಲಿಹನು ಆ ಮಾಧವನು?"
ನಿನ್ನೊಳಗೇ ಇಹನು ಅಂತರಂಗದ ಕಣ್ಣು ತೆರೆದು
ನೋಡೆಂದಿತು ಹೃದಯವು

-ಮನದ ಚಿಂತೆ-


ನೀನಿಲ್ಲದ ನಾನು ಹೇಗಿರಲಿ ಕೃಷ್ಣಾ
ನೀನಿಲ್ಲದ ಬಾಳು ಬಾಳೇ ಕೃಷ್ಣಾ

ಈ ಜೀವ ಕೊಟ್ಟವ ನೀನು
ಈ ಮನದ ಚೈತನ್ಯ ನೀನು
ನಿನ್ನ ಕಾಣದ ಈ ಮನ
ನಿನ್ನ ನೋಡದ ಈ ಕಣ್ಣು ಏತಕ್ಕೆ ಕೃಷ್ಣಾ

ಇಂದು ಕಾಣುವೆ ನಿನ್ನನ್ನೆಂದು
ಕನವರಿಸಿ ಕಾತರಿಸಿ ಕಾಯುತಿಹೆ
ಮನಸಿಗೆ ಕನಸಿಗೆ ದಿನಕ್ಕೊಂದು
ನೆಪವ ಹೇಳಿ ಸಾಕುಸಾಕಾಗಿ ನಿದ್ದೆಗೆಟ್ಟಿಹೆ

ವರುಷ ವರುಷಗಳು ಉರುಳಿಹೋಗಿದೆ
ತುಂಬಿ ತುಳುಕುವ ನದಿ ನಿನ್ನ ಹುಡುಕಿ ಎತ್ತಲೋ ಹರಿದಿದೆ
ಗಿರಿ,ತರುಲತೆ,ಗಿಡಮರಗಳೆಲ್ಲಾ ಬೆತ್ತಲಾಗಿವೆ
ನಿನ್ನ ಕಾಣದೆ ಏನು ಮಾಡಲಾಗದೆ ಚಿಂತೆಗೆ ಬಿದ್ದಿದೆ

-ಸಂಬಂಧ-

ಶರಣು ಎನ್ನಿ
ಶರಣು ಬನ್ನಿ
ದೇವನನ್ನು ಕಂಡಿರಾ

ಹಬ್ಬವು ಬಂತು
ಹರುಷವ ತಂತು
ಕಟ್ಟೋಣ ತಳಿರು-ತೋರಣಾ

ನನ್ನೊಳು ನೀನು
ನಿನ್ನೊಳು ನಾನು
ನಡೆಯುತಿದೆ ಪ್ರೇಮ-ಪ್ರಣಯಾ

ಅವನೇ ವಸಂತ
ಅದೇ ಕೋಗಿಲೆ
ಹಾಡುತಿದೆ ಸುಸ್ವರ-ಗಾಯನಾ

ನಾನು ನಾನೇ
ನೀನು ನೀನೇ
ಸಾಗಿಸುವೆವು ಹಸನಾದ ಬದುಕಾ

ನೋವು ಎನ್ನಿ
ನಲಿವು ಎನ್ನಿ
ಗಳಿಸಬೇಕು ಅನುಭವಾ

ಕತ್ತಲಿರಲಿ
ಬೆಳಕೇ ಇರಲಿ
ಸಾಗಬೇಕು ಜೀವನಾ

ಬದುಕಬೇಕು
ಬಾಳಬೇಕು
ತೀರಿಸಬೇಕು ಭುವಿಯ ಋಣವಾ

ನಾಳೆ ಏನೋ
ನಾಳಿದ್ದು ಎಂತೋ
ಇಂದೇ ಕಟ್ಟೋಣ ಗುರಿಯ ಕಡೆಗೆ ಕಂಕಣಾ

ಅವನು ಬಡವ
ಅವನು ಬಲ್ಲಿದ
ತೊಡೆದು ಹಾಕೋಣ ತಾರತಮ್ಯಾ

-ಸಮರ್ಪಣೆ-

ನೀವೇ ಸ್ಪೂರ್ತಿ ಈ ಕವಿತೆಗೆ
ನೀವೇ ಸ್ಪೂರ್ತಿ ಈ ಬಾಳಿಗೆ
ನಿಮ್ಮ ಮನದ ಛಲ
ನಮ್ಮ ಬಾಳಿಗದುವೆ ಬಲ


ನಿಮ್ಮ ಜೀವನದ ಕಷ್ಟ
ಅಂದುಕೊಂಡೆವು ನಿಮಗಾಯಿತು ನಷ್ಟ
ನೀವು ಮುನ್ನಡೆದಿರಿ ಯಾವುದನ್ನೂ ಲೆಕ್ಕಿಸದೆ
ನೋಡು ನೋಡುತ್ತಿದ್ದಂತೆ ಸಾಧನೆಯ ತುತ್ತತುದಿಯ
ಗೆಲುವಿನ ಉತ್ಸಾಹದಿ


ಜೀವನದ ಏಳನೇ ವಯಸ್ಸಿನಲ್ಲಿ
ಯಾವುದೋ ವ್ಯಾಧಿಗೆ ಕಳೆದುಕೊಂಡಿರಿ ಕಣ್ಣುಗಳ ಬೆಳಕು
ಎಲ್ಲರಿಂದಲೂ ಕೇಳಿಸಿಕೊಂಡಿರಿ ಅನುಕಂಪದ ಅಲೆ
ನಿಮ್ಮ ದಾರಿ ನೀವೇ ಕಂಡುಕೊಂಡಿರೆ ಭಲೇ ಅಬಲೆ


ಸಾಧನೆಯಿರುವುದು ಸಾಧಕನಿಗಲ್ಲದೆ ಸೋಮಾರಿಗಲ್ಲ
ಈ ಮಾತು ನಿಜವಾಗಿಸಿದಿರಿ ನಡೆದು ಸಾಧನೆಯ ದಾರಿಯಲ್ಲಿ
ಸಾಮಾನ್ಯರೂ ಸಾಧಿಸದ ಸಾಧನೆ ನಿಮ್ಮದೆಂದು ಹೆಮ್ಮೆ ನಮಗೆ
ಪ್ರತಿದಿನವೂ,ಪ್ರತಿಹೆಜ್ಜೆಯಲ್ಲೂ ಅಡ್ಡಿಗಳನೆದಿರಿಸುವ
ನಿಮ್ಮ ಗಂಡೆದೆ ನಮಗೆ ಮೆಚ್ಚುಗೆ


ಕಣ್ಣಿದೂ ನಾವೇನೂ ಸಾಧಿಸಲಿಲ್ಲ
ಸಾಧಿಸಲಾರದಕ್ಕೆ ಹಲವು ಕಾರಣಗಳಿವೆ ನಮಗೆ
ನೀವು ಎಲ್ಲರಿಗೂ ಅಪವಾದ
ಹಲವು ಕಾರಣಗಳಿವೆ ನಿಮ್ಮ ಸಾಧನೆಗೆ

ನಿಮ್ಮನ್ನು ಕಂಡದ್ದು,ನಿಮ್ಮ ಜೊತೆ ಮಾತನಾಡಿದ್ದು
ಅದೇ ನಮ್ಮ ಸಾಧನೆಯಾಗಿದೆ
ನಿಮ್ಮ ಮಾತು,ನಿಮ್ಮ ನಡೆಗೆ
ನಿಮ್ಮ ಸಾಧನೆಗೆ ನೂರು ನಮನ

( ಡಾ ಸಂಗೀತಾ ರವರಿಗೆ ಸಮರ್ಪಣೆ. ಡಾ ಸಂಗೀತಾರವರು ಭಾರತೀಯ ಇತಿಹಾಸದ
ಮೊದಲ ಡಾಕ್ಟರೇಟ್ ಪಡೆದ ವಿಕಲಚೇತನ ( ಅಂಧ ಮಹಿಳೆ) ಮಹಿಳೆಯಾಗಿದ್ದಾರೆ.
ಅವರು ಕನ್ನಡದವರು,ಬೆಂಗಳೂರಿನವರೆಂಬುದು ನಮಗೆ ಹೆಮ್ಮೆ).

-ಅರಿವಿನ ಹಣತೆ-

ಹಣತೆಯೊಂದು ಬೆಳಕ ಚೆಲ್ಲಿ
ಎಷ್ಟು ಕತ್ತಲ ನುಂಗುವುದೋ?
ಅದರ ಪರಿಧಿಯ ನಾ ಬಲ್ಲೆ
ಬೆಳಕ ಕಾಣದೆ ಎಷ್ಟು ಜೀವಗಳು ನರಳುತಿಹುದೋ?
ಮನದ ಪರಿಧಿಯ ನೀನೊಬ್ಬನೇ ಬಲ್ಲೆ
ರವಿಯ ಕಣ್ಣು ಭೂಮಿಯ ಕಡೆಗೆ
ಜೀವ ಕೋಟಿಗದುವೆ ಕಾರಣ ಏಳಿಗೆಗೆ
ಹೂವು ಹೊರಳುವುವು ಸೂರ್ಯನ ಕಡೆಗೆ
ನಮ್ಮ ಯೋಚನೆ ಬರಿಯ ಹೊಟ್ಟೆಯ ಬಗೆಗೆ
ಮನದ ದೀಪ ಹಚ್ಚಲೊಲ್ಲರು
ಬದುಕಿನ ಭೇಗುದಿಗೆ ನರಳುತಿಹರು
ಕೋಟಿಗೊಬ್ಬನೇ ಸಂಭವಿಸುವನು
ಜನರ ಮನದಲಿ ಅರಿವಿನ ಹಣತೆಯ ಹಚ್ಚುವನು
ಎಷ್ಟು ಯುಗಗಳು ಕಾಯಬೇಕೋ?
ಎಷ್ಟು ಜೀವಗಳು ನರಕಯಾತನೆ ಅನುಭವಿಸಬೇಕೋ?
ಮನದ ಅಂತಃಚಕ್ಷುವ ಎಚ್ಚರಗೊಳಿಸದ ಬೆಳಕು
ನೂರು ಇದ್ದರೇನು? ಇಲ್ಲದಿದ್ದರೇನು?

-ಶಿಲ್ಪಿಯ ಶ್ರಮ-


ಒಮ್ಮೆ ದೇವಾಯಲಕ್ಕೆ ಹೊರಟೆ
ಮನದಲ್ಲಿ ಅನೇಕ ಭಾವತೆಗಳಿಗೆ ಜಾಗಮಾಡಿಕೊಡುತ್ತಾ
ಈ ಮನದಲ್ಲಿ ಯೋಚಿಸುವುದಕ್ಕೆ ಶಕ್ತಿಕೊಟ್ಟವರಾರು?
ಈ ಭೂಮಿಗೆ ಬೆಳಕ ಚೆಲ್ಲುವರಾರು?
ಹೀಗೆ ಉತ್ತರ ಸಿಗದ ನೂರು ಪ್ರಶ್ನೆಗಳು ಮನದಲ್ಲಿ ಕಾದಟಕ್ಕಿಳಿಯಿತು
ಮನಸ್ಸಿನ ನೀರವತೆಯ ನಾಶಮಾಡಿ

ಗುಡಿಯ ಗೋಪುರ ದೂರಕ್ಕೆ ಕಾಣುವುದು
ಅದ್ಬುತ-ಕಲಾಚದುರನ ಕೈಚಳಕಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾ
ಗುಡಿಯ ಘಂಟೆಯ ಶಬ್ದ ಕಿವಿಗೆ ಇಂಪಾಗಿ ಕೇಳಿಸುತಿತ್ತು
ಬೆಳಗಿನ ಸುಪ್ರಭಾತ ಮನದಲ್ಲಿ ಚೈತನ್ಯ ತುಂಬುತಿತ್ತು
ಮನದಲ್ಲಿ"ಕೃಷ್ಣಾ,ಕೃಷ್ಣಾ" ಜಪ ದೇಹದ
ಮೂಲೆಮೂಲೆಯಲ್ಲಿ ಮಾರ್ಧವಿಸುತಿತ್ತು

ದೇವನೊಬ್ಬ ನಾಮಹಲವು
ಹಲವು ಭಾಷೆ,ಧರ್ಮ,ತೋರುವ ಭಕ್ತಿ ಒಂದೇ
ಎಲ್ಲರೂ ಒಂದೇ,ಕಿತ್ತಾಟ ಹಲವು
ಎಲ್ಲರೂ ಮನುಷ್ಯರೇ,ಯೋಚನೆ ಮಾತ್ರ ಹಲವು
ಮೇಲು-ಕೀಳು,ಭೇದ-ಭಾವ ಕೀಳದೇ ಬೆಳೆದಿದೆ

ದೇವರ ಶಿಲೆ ಅತ್ಯದ್ಭುತ
ನೂರು ನಮನ ನಿನಗೆ ದೇವರೆಂದು
"ಮೂರ್ತಿ ಪೂಜೆ ಸಲ್ಲದು"
ಬುದ್ದಿಜೀವಿಗಳ ವ್ಯರ್ಥ ಆಲಾಪನೆ
ಬುದ್ದಿಯಿಲ್ಲದ?ಪ್ರಲಾಪನೆ
ನಾವು ನಮಿಸುವುದು ಆ ಕಲ್ಲು ದೇವರಿಗೇ ನಿಜ
ನಾವು ನಮಿಸುವುದು ಆ ಶಿಲೆಯ ಕೆತ್ತಿದ ಶಿಲ್ಪಿಯ ಕಲಾತ್ಮಕತೆಗೆ
ನಾವು ನಮಿಸುವುದು ಆ ಶಿಲ್ಪಿಯ ಭಾವನೆಗಳ ಎರಕಹೊಯ್ಯುವಿಕೆಗೆ
ನಾವು ನಮಿಸುವುದು ಆ ಶಿಲ್ಪಿಯ

ದೇವರನ್ನು ಧರೆಗೆ ಕರೆತರುವ ಅವನ ಭಗೀರಥ ಯತ್ನಕ್ಕೆ
ಅವನ ಅಸಾಧಾರಣ ತ್ಯಾಗಕ್ಕೆ
ಅವನ ಅಸಾಮಾನ್ಯ ಶ್ರಮಕ್ಕೆ
ಆ ಮೂರ್ತಿಗೆ ನಮಿಸುವುದು ತಪ್ಪಲ್ಲವಲ್ಲ,ತಪ್ಪಲ್ಲವಲ್ಲ

-ಕಾಟ-

ಮನಸ್ಸಿನ ನೆಮ್ಮದಿಗೆಂದು ಹೊರಟೆ
ಎಲ್ಲಿ ಹುಡುಕುವುದು ನಡೆಯುತ್ತಿತ್ತು ಮನದಲ್ಲಿ ಹರಟೆ
ಗುಡಿ,ಕಾನನ,ಹೆಣ್ಣು,ಹೊನ್ನು,ಮಣ್ಣು ನಡೆಯುತ್ತಿತ್ತು ಬೇಟೆ
ಧರ್ಮ,ಅಧರ್ಮ,ಕಾಯಕ,ಪ್ರೇಮ,ಕಾಮ ನಿಲ್ಲದ ಗಲಾಟೆ
ಎಲ್ಲೂ ಕಾಣಲಿಲ್ಲ
ಎಲ್ಲೂ ಹೊಳೆಯಲಿಲ್ಲ
ಅರಸಿ ಅರಸಿ ತಾಳ್ಮೆ ಕಳೆದುಕೊಂಡಿದ್ದಾಯಿತು
ನಿಲ್ಲಲಿಲ್ಲ ಹುಡುಕಾಟ

ನಿಲ್ಲಲಿಲ್ಲ ಅದರ ಹುಡುಕಾಟ
ಕಾಣದಾಯಿತು ಅವನ ಸೂತ್ರದಾಟ
ಹುಡುಕಾಟ ನಿರಂತರ
ನಿರಂತರ ಹುಡುಕಾಟ

-ಬದಲಾದ ಚಿತ್ರ-

ಕನ್ನಡಿಯ ಮುಂದೆ ನಿಂತು ನನ್ನನ್ನೇ ನೋಡಿಕೊಂಡೆ
‘ಮುಗ್ದ ಹುಡುಗ’ ಮನಸ್ಸು ಹೇಳಿತು
ಬುದ್ದಿ ನಗುತ್ತಿತ್ತು ‘ಮುಗ್ದ ಹುಡುಗ’
ಕಣ್ಣು ಮಿಟುಕಿಸಿದೆ ನನ್ನನ್ನೇ ನಾನು ಮರೆತು
ನಾನೊಬ್ಬ ದೊಡ್ಡ ಚಿತ್ರದ ಹೀರೋ ಎಂದು ನನಗೆ ನಾನೇ
ಭಾವಿಸಿಕೊಂಡೆ, ಕೈ ತಲೆಗೂದಲನ್ನು ತೀಡುತ್ತಿತ್ತು
ಮನಸ್ಸು ಹತ್ತು ವರ್ಷ ಮುಂದೆ ಹೋಗಿ ನಿಂತಿತ್ತು
ಚಿತ್ರ ಮಂದಿರದಲ್ಲಿ ನೂರು ದಿನ ಧಾಟಿ ಮುನ್ನುಗ್ಗುತ್ತಿದೆ
ನನ್ನ ನಾಯಕತ್ವದ ಚಿತ್ರ, ನಿರ್ಮಾಪಕರು ನನ್ನ ಮನೆಯ
ಮುಂದೆ ಸಾಲುಗಟ್ಟಿ ನಿಂತಿದ್ದಾರೆ ನನ್ನ ಕಾಲ್ ಶೀಟಿಗಾಗಿ
ಎಲ್ಲಿ ಹೋದರೂ ಹುಡುಗಿಯರ ಸಾಲು ಸಾಲು ನನ್ನ
ಹಸ್ತಾಕ್ಷರಕ್ಕಾಗಿ,ನನ್ನ ಚುಂಬಿಸಲು ಮುಗಿಬೀಳುತ್ತಿದ್ದಾರೆ
ಕೆಲವೇ ದಿನಗಳಲ್ಲಿ ಅಸಹ್ಯವಾಗತೊಡಗಿತು
ನನ್ನ ಸ್ವಾತಂತ್ರ ಹರಣವಾಗತೊಡಗಿತು
ಗೆಲುವಿನ ಗೀಳು ಅಂಟಿಕೊಂಡಿತು
ಸೋಲಿನ ರುಚಿಯೇ ಚಂದವೆನಿಸಿತು
ಅಜ್ನಾತವಾಸಕ್ಕೆ ಹೊರಡಬೇಕೆನಿಸಿತು
ಸಾಕು ಸಾಕೆನಿಸಿತು
ಮುಂದೆ ಬೇಡವೆನಿಸಿತು
ನಾನು ಏನಾಗಬೇಕಾಗಿತ್ತು?
ನಾನು ಏನಾದೆ?
ಉತ್ತರ ಸಿಗದ ಪ್ರಶ್ನೆಗಳು
ಸುಳಿಸುಳಿಯಾಗಿ ನನ್ನ ಬಳಸುತ್ತಿತ್ತು
ದಿಗಂತದ ಸೂರ್ಯ ಬರುವೆ ಎಂದು ತೆರಳುತ್ತಿದ್ದ
ಮನದಲ್ಲಿ ನೂರು ಪ್ರಶ್ನೆಗಳ ಹುಟ್ಟುಹಾಕಿ
ನಾಳೆ ಉತ್ತರ ಹೇಳು ಎಂದು ಹೋದ ಗುರುವಿನಂತೆ ಕಂಡ.
ಹಣೆಯ ಮೇಲಿ ನೂರು ಬೆವರಿನ ಹನಿಗಳು ಮೂಡಿತ್ತು
ವಾಸ್ತವಕ್ಕೆ ಇಳಿದ ಮೇಲೆ ಕಂಡ ಮನಸ್ಸಿನ ಕಣ್ಣೀರದು
ಭ್ರಮೆ-ವಾಸ್ತವ ಮನುಷ್ಯನನ್ನು ತಿಂದುಬಿಡುತ್ತೆ
ಭ್ರಮೆಯೇ ಬಧುಕು ಎಂದು ನಡೆಯುವವರೇ ಹೆಚ್ಚು
ವಾಸ್ತವವ ಅರಿತು ನಡೆಯುವವನೇ ನಿಜವಾದ ನಾಯಕ
ಕನ್ನಡಿಯು ನನ್ನ ಕಂಡು ನಗುತ್ತಿತ್ತು
ಮನದಲ್ಲಿ ಮೂಡಿದ ಚಿತ್ರ ಬದಲಾಗಿತ್ತು.

-ಅಹಂನ ಹುಚ್ಚು-

ಜನಸಾಗರ ಹರಿದುಬರುತ್ತಿದೆ
ಅದು ಜಾತ್ರೆಯೋ?
ಜನರ ಯಾತ್ರೆಯೋ?
ತಿಳಿಯದಾಗಿದೆ ಏಕೆ ಹೀಗೆ ಹರಿದುಬರುತ್ತಿದ್ಡಾರೆಹೌದು ಇಲ್ಲಿ ಎಲ್ಲಕ್ಕೂ ಜಾತ್ರೆಯೇ
ತಿನ್ನುವುದಕ್ಕೆ
ಕೊಳ್ಳುವುದಕ್ಕೆ
ಬಸ್ಸಿಗೆ ಹತ್ತುವುದಕ್ಕೆ
ಮಾಯೆಯೋ ತಿಳಿಯದಾಗಿದೆ ಹೀಗೇಕೆ?

ಸುದ್ದಿ ತಿಳಿಯುತ್ತಿದ್ದಂತೆ
ಬೀದಿಗಿಳಿಯುತ್ತಾರೆ
ತವಕವೋ?
ಆಶಾವಾದವೋ?
ಅವಕಾಶಾವಾದವೋ?
ತಿಳಿಯದಾಗಿದೆ ಜನರಲ್ಲಿ ಹರಿವ ಚಿಂತನೆ?

ಸಿಕ್ಕಿದ್ದನ್ನು ಬಾಚುತ್ತಾರೆ
ಕೈಗೆ ಸಿಕ್ಕಿದ್ದನ್ನು ಬಿಸುಟುತ್ತಾರೆ
ಬಾಯಿಬಾಯಿ ಬಡಿದುಕೊಳ್ಳುತ್ತಾರೆ
ಮೊಸಳೆ ಕಣ್ಣೀರು ಸುರಿಸುತ್ತಾರೆ
ತಿಳಿಯದಾಗಿದೆ ಮುಖವಾಡವಾವುದೆಂದು?

ಎಲ್ಲರೂ ಮಹಾನ್ ನಟರೇ
ಮುಖದಲ್ಲಿ ಮಂದಹಾಸ
ಮನಸ್ಸಿನಲ್ಲಿ ನಡೆದಿದೆ ಖೂಳದಾಟ
ಹೊಟ್ಟೆ ಹೊರೆಯುವುದಕ್ಕೆ ನಡೆದಿದೆ ಕಾದಾಟ
ತಿಳಿಯದಾಗಿದೆ ಯಾವ ಮಾಯೆ ಆವರಿಸಿದೆಯೆಂದು?

ನಾನು ನಾನೇ
ನನ್ನದೇ ಹೆಚ್ಚು
ಅಹಂನ ಹುಚ್ಚು
ಬೃಹದಾಕಾರವಾಗಿ ಆವರಿಸಿದೆ ಬೆಂಕಿಯ ಕಿಚ್ಚು
ಕಣ್ಣು ಕುರುಡಾಗಿದೆ, ಬುದ್ದಿ ಮಂದವಾಗಿದೆ ಏನೂ ಮಾಡಲಾಗದೆ

-ಗೋಡೆಯ ಮೇಲಿನ ಕಿಟಕಿ-


ಚಿಕ್ಕವನಿದ್ದಾಗ ಕಿಟಕಿಯಿಂದ ಹೊರ ಜಗತ್ತನ್ನು ನೋಡಬೇಕೆಂದು
ತುಂಬಾ ಇಷ್ಟಪಡುತ್ತಿದ್ದೆ.
ಬೆಳಿಗ್ಗೆ ಎದ್ದತಕ್ಷಣ ಪೂರ್ವದಿಕ್ಕಿನ ಆ ಆಗಸವನ್ನು ನೋಡುತ್ತಾ
ನನ್ನದೇ ಕನಸಿನ ಲೋಕಕ್ಕೆ ಹಾರುತ್ತಿದ್ದೆ.
ಚಿನ್ನದ ತೇರಿನ ರವಿಯ ಆಗಮನ ಮನಕ್ಕೆ ಮುದಕೊಡುತ್ತಿತ್ತು
ಕನ್ನಡದ ಗುರುಗಳು ಹೇಳುತ್ತಿದ್ದ ಮಾತು " ಬೆಳಿಗ್ಗೆ ತದೇಕ ದೃಷ್ಟಿಯಿಂದ
ಸೂರ್ಯನ್ನನ್ನು ನೋಡಿದರೆ ಕಣ್ಣಿನ ಆರೋಗ್ಯ ಚೆನ್ನಾಗಿರುತ್ತದೆ"
ರಕ್ತವರ್ಣವನ್ನು ಚೆಲ್ಲುತ್ತಾ ಕತ್ತಲನ್ನು ಓಡಿಸುತ್ತಾ ಬರುವ ಸೂರ್ಯನನ್ನು
ನೋಡೋದೆ ಒಂದು ಆನಂದ.
ಬೆಳಗಿನ ಮಂಜಿನ ಆಟ ಸುಂದರ ಹಾಗೂ ಮನೋಹರ.
ಬೆಳಿಗ್ಗೆ ೭.೦೦ ಗಂಟೆಗೆ ಬೆಂಗಳೂರಿನ ಕಡೆಗೆ ಓಡುವ ರೈಲನ್ನು ನೋಡಲು
ತುದಿಗಾಲಲ್ಲಿ ನಿಂತಿರುತ್ತಿದ್ದೆ,
ಕಪ್ಪು ಹೊಗೆಯನ್ನು ಚೆಲ್ಲುತ್ತಾ ಆಕಾಶವನ್ನು ಗಲೀಜು ಮಾಡುತ್ತಾ,
ಆರ್ಭಟಮಾಡುತ್ತಾ ೬ ಬೋಗಿಗಳ ರೈಲು ಕ್ಷಣ ಮಾತ್ರದಲ್ಲಿ ಕಿಟಕಿಯಿಂದ
ಕಾಣೆಯಾಗುತ್ತಿತ್ತು.
ಬೆಳಿಗ್ಗೆ ಹಾಲಿನವನ ಆಗಮನವನ್ನು ಕಾಯುವುದು,
ಗುರುತಿನ ಗೆಳೆಯ ಬೆಳಗಿನ ಟ್ಯೂಷನ್ ಗೆ ತೆರಳುವ ನೋಟ
ಆಪ್ಯಾಯಮಾನವಾಗಿತ್ತು.
ಈಗ ಪರಿಸ್ಥಿತಿ ಬದಲಾಗಿದೆ, ಸೂರ್ಯ ಕಿಟಕಿಯಿಂದ ಕಾಣಿಸೋದಿಲ್ಲ
ಸುತ್ತಲೂ ಕಾಂಕ್ರೀಟ್ ಕಾಡು ಬೆಳೆದಿದೆ
೭.೦೦ ಗಂಟೆಯ ರೈಲಿನ ಶಬ್ದಮಾತ್ರ ಕೇಳಿಸಿತ್ತದೆ
ಬೆಳಗಿನ ಆ ಮನೋಹರ ದೃಶ್ಯ ಕಾಣೋದಿಲ್ಲ
ಬರೀ ಶಬ್ದ, ಮಾಲಿನ್ಯ ಮಾತ್ರ ಕಣ್ಣಮುಂದಿದೆ
ಮನದಲ್ಲಿ ಬೇಸರದ ಛಾಯೆ ಆವರಿಸಿದೆ.

-ಪ್ರೀತಿಯೆಂಬ ದೊಂಬರಾಟ-


ನಗು ಬರುವುದು ಪ್ರೀತಿಯೆಂದರೆ
ಪ್ರೀತಿಯೆಂದರೆ ಅರಿಯದ ಹೃದಯಗಳ ಡಂಬಾಟ
ಪ್ರೀತಿಯೆಂದರೆ ಅಚಲ
ಪ್ರೀತಿಯೆಂದರೆ ಧೃವ ನಕ್ಷತ್ರ
ಇಂದು, ನಾಳೆ, ಪ್ರಳಯಗಳಲ್ಲೂ ಬದಲಾಗದ್ದು
ಗುಲಾಬಿ ಪ್ರೀತಿಯ ಧ್ಯೋತಕವಂತೆ
ನಾಳೆ ಬಂದು ನೋಡಿದರೆ ಹೂವಿನ ಗತಿಯೇನು?
ಪ್ರೀತಿಗೆ ಬಂಧನವಿದೆಯಂತೆ
ಮಧುವೆಯೆಂದರೆ ಪ್ರೀತಿಯಂತೆ- ಹಾಸ್ಯಾಸ್ಪದವಲ್ಲವೇ?
ಬೆಳಕೆಂದರೆ ಪ್ರೀತಿಯಲ್ಲ,ಕತ್ತಲಲ್ಲೂ ಇಲ್ಲ
ಗಾಧೆಯಲಿಲ್ಲ,ವೇಧಗಳಲಿಲ್ಲ
ಕಣ್ಣೋಟಕ್ಕೆ ಸೋಲುವರಲ್ಲಿ ಪ್ರೀತಿಯಿಲ್ಲ
ಪ್ರೀತಿ ಬದಲಾಗುವುದಿಲ್ಲ
ಪ್ರೀತಿ ಬಯಸುವುದಿಲ್ಲ- ಹಾರೈಸುತ್ತದೆ.

(ಪ್ರೇರಣೆ: Sonnet 116- William Shakespeare)

-ಆ ಹೆಣ್ಣಲ್ಲ ನಾನು-


ನಾನು ಆ ಹೆಣ್ಣಲ್ಲ
ನಾನು ಸಾಮಾನ್ಯ ಹೆಣ್ಣೆಂದುಕೊಳ್ಳಬೇಡ
ನಿನಗೆ ನೆನೆಪಿದೆಯಾ!, ನಾನು ಅದೇ ಹೆಣ್ಣು
ನಿನ್ನಿಂದ ನಾಲ್ಕು ಗೋಡೆಯ ಮಧ್ಯೆದಲ್ಲಿ ಬಂಧಿಸಲ್ಪಟ್ಟವಳು
ನೀನಾದರೂ ಸ್ವಚ್ಛಂಧವಾಗಿ ಹಾರಾಡಿದವನು ನಾನು ಬಲ್ಲೆ

ನಾನು ಅದೇ ಹೆಣ್ಣು
ನಿನ್ನ ಸಂಪ್ರದಾಯ, ಪರಂಪರೆ, ಗೌರವವೆಂದು
ಖುರಾನ್,ಬೈಬಲ್,ಪುರಾಣಗಳ ಹೆಸರು ಕೇಳಿ ಕತ್ತಲಲ್ಲಿ
ಮರೆಯಾದವಳು ನಾನು-ಸುಂದರ ಪ್ರಪಂಚವನ್ನು ನೋಡದೆ
ಕಣ್ಣು ಮುಚ್ಚಿಕೊಂಡವಳು ನಾನೇ!
ನನಗೆ ತಿಳಿದಿದೆ ಕತ್ತಲೆಂದೂ ಬೆಳಕನ್ನು ಹಿಡಿದಿರಲಾರದೆಂದು

ನಾನು ಅದೇ ಹೆಣ್ಣು
ನೀನು ನನ್ನ ಒಡಲಿನಿಂದ ಸುಖವನ್ನು ಪಡೆಯುವಾಗ
ಎದೆಯೊಳಗೆ ಮುಳ್ಳುಗಳನ್ನು ನಾಟಿಸಿಕೊಂಡವಳು ನಾನೇ!
ನಿನಗೆ ತಿಳಿದಹಾಗಿಲ್ಲ ಬೇಲಿ, ಪಂಜರಗಳಿಂದ
ಹೂವಿನ ಪರಿಮಳವನ್ನು ಬಂಧಿಸಲಾಗದೆಂದು

ನಾನು ಅದೇ ಹೆಣ್ಣು
ಗೌರವದ ಹೆಸರಿನಲ್ಲಿ ಕಡೆಗಣಿಸಲ್ಪಟ್ಟವಳು
ಅಭಲೆ, ಅಸಹಾಯಕಳೆಂದು ಶೋಷಣೆಗೊಳಗಾದವಳು
ನನ್ನ ತಾಯ್ತನಕ್ಕೆ ನಿನ್ನಿಂದ ಅಪಚಾರವೆರಗಿಸಿಕೊಂಡವಳು
ನಿನ್ನಿಂದ ಸುಖದ, ಭೋಗದ ವಸ್ತುವಾಗಿಹೋದವಳು ನಾನೇ!

ನಾನು ಈಗ ಆ ಹೆಣ್ಣಲ್ಲ
ಇಷ್ಟೂ ದಿವಸ ನನ್ನ ತಾಳ್ಮೆ,ಹೆಣ್ತನ ಸುಮ್ಮನಿರುವಂತೆ ಮಾಡಿತು
ಕಾಲ ಈಗ ಬಂದಿದೆ- ಸಹನೆಯ ತಾಳ್ಮೆ ಈಗ ಇಲ್ಲ
ಪ್ರಪಂಚ ವಿಸ್ತಾರವಾಗಿದೆಯೆಂದು ತಿಳಿದಿದೆ
ದೇಹದಲ್ಲಿ ದೇವರು ಸಾಕಷ್ಟು ಶಕ್ತಿಕೊಟ್ಟಿದ್ದಾನೆ
ಲೋಕ ಜ್ನಾನವೂ ಬಹಳಷ್ಟಿದೆ
ತೆಗೆದುಕೋ ನೀನು ಹಾಕಿದ ಕಪ್ಪು ಬಟ್ಟೆ, ತಾಳಿ,ಶಿಲುಬೆ
ನೀನೇ ಧರಿಸಿಕೊಂಡು ಮೆರೆದಾಡು
ನೀನು ಹೇಳಿದಂತೆ ತಲೆದೂಗುವ ಕೋಲೆ ಬಸವನಲ್ಲ
ನೀನು ಅಂದುಕೊಂಡಂತೆ ಹಳೆಯಹೆಣ್ಣು ನಾನಲ್ಲ

(ಪ್ರೇರಣೆ: " I am not that Women" by Kishwar Naheed)

-ನಂಬಿಕೆ-

ಮನಸೇ ಹೊರಡು ಇಲ್ಲಿಂದ
ಬಿಡು ಊಟ, ನಿದ್ದೆ ಈಗಲೇ
ಗುಂಡಿನ ಶಬ್ದ ಕೇಳಿಸುತ್ತಿರುವುದೇ
ಗಡಿಯಾಚೆಯಿಂದ ಶತ್ರುಗಳ ಅಟ್ಟಹಾಸ


ಹೊರಡು ಅಲ್ಲಿ ಗೆಳೆಯನೋರ್ವ
ನಿನಗಾಗಿ ಕಾಯುತಿಹನು ಪ್ರಾಣವ ಕೈಯಲ್ಲಿ ಹಿಡಿದು
ಅವನ ನಂಬಿಕೆಯನ್ನು ಸುಳ್ಳಾಗಿಸಬೇಡ
ಅವನು ಕಣ್ಣುಮುಚ್ಚುವ ಮುನ್ನ ಸಾಗು ಅವನೆಡೆಗೆ


ಗುಂಡು ಎದೆಗೆ ಬಡಿದರೂ
ಎದೆಗುಂಧದೆ ಸಾಗು ಮುಂದೆ
ಹಾಂ! ಅಲ್ಲಿ ಬಿದ್ದಿರುವನು ನನ್ನ ಗೆಳೆಯ
ನರಳುತ್ತಾ ಎದೆಯ ಹಿಡಿದುಕೊಂಡು


ಒಂದು ಕೈಯಲ್ಲಿ ಭಗವದ್ಗೀತೆ
ತುಟಿಯಲ್ಲಿ ನನ್ನದೆ ಧ್ಯಾನ
ರಕ್ತತಿಲಕ ಹಣೆಯಲಿ, ಮೈಯಲ್ಲಾ ರಕ್ತ
ನಡೆದಿದೆ ಕೊನೆಯ ಪಯಣದ ಮೆರವಣಿಗೆ


ನನ್ನ ಕಂಡೊಡನೆ ಅವನಲ್ಲಿ ಚೈತನ್ಯ
ತುಟಿಯಲ್ಲಿ ನೋವಿನ ನಗು
ಕಣ್ಣಲ್ಲಿ ಆನಂದ ಭಾಷ್ಪ
ಅವನು ಹೇಳಿದ ಕೊನೆಯ ಮಾತು

ಅವನು ಹೇಳಿದ ಕೊನೆಯ ಮಾತು
"ಗೆಳೆಯ ನನಗೆ ಗೊತ್ತಿತ್ತು ನೀನು
ನನಗಾಗಿ ಬಂದೇ ಬರುವೆಯೆಂದು"
ಅವನ ನಂಬಿಕೆಯನ್ನು ನಾನು ಉಳಿಸಿದ್ದೆ


ಅವನ ನಂಬಿಕೆ ನಾನು ಉಳಿಸಿದ್ದೆ
ಅವನನ್ನು ನಾನು ಕಳೆದುಕೊಂಡಿದ್ದೆ
ನನ್ನ ಮೇಲಿನ ಪ್ರೀತಿ, ಅವನ ಮೇಲಿನ ಪ್ರೀತಿ
ನಂಬಿಕೆಯೊಂದು ಗಟ್ಟಿಗೊಳಿಸಿತ್ತು

-ಮನಸ್ಸಿನ ಹಠ-

ಮನಸೇ ಏನಾಗಿದೆ ನಿನಗೆ
ಏಕೆ ಕುಳಿತಿರುವೆ ಹೀಗೆ?
ಕಾಣದ ಯಾವ ಕನಸ ಕಂಡೆ?
ಮನಸು ಎಲ್ಲಿ ಜಾರಿದೆ?

ಯಾರ ನೆನಪು ಕಾಡಿದೆ?
ಯಾಕಾಗಿ ಕಾಡಿದೆ?
ಎಷ್ಟು ಸಾರಿ ಹೇಳಿದರೂ ಕೇಳದೆ
ಒಲ್ಲೆ ಒಲ್ಲೆಯೆಂದೇ ಹೇಳಿದೆ

ಮಾತು ಬೇಡವಾಯಿತು
ಮೌನ ಸಾಕಾಯಿತು
ಯಾರ ಸಂಗವೂ ಬೇಡ
ಹೇಳಬಾರದೆ ನನ್ನ ಕೂಡ

ಇಷ್ಟು ಇಂದಿಗೆ ಸಾಕು
ನಾಳೆಗೆ ಇನ್ನೇನು ಬೇಕು?
ಮುಂದುವರೆಯದಿರಲಿ ನಿನ್ನ ಹಠ
ಕಲಿತಿದ್ದಾಗಿದೆ ನಿನ್ನಿಂದ ಓಳ್ಳೆಯಪಾಠ

ದಿನವೆಲ್ಲಾ ಹಾಳಾಯಿತು ನಿನ್ನಿಂದ
ಈ ರೀತಿ ಆಗದಿರಲಿ ಮುಂದೆ ನಿನ್ನಿಂದ
ಮೌನ ಬಿಡು, ಹೊರಗೆ ಬಾ
ನಿನಗಾಗಿ ಕಾಲ ಕಾಯುತ್ತಿದೆ ಬಾ

ಮತ್ತೆ ಮತ್ತೆ ಕಾಡಬೇಡ
ನಿನಗೇನು ಬೇಕು ಬಾಯಿಬಿಟ್ಟು ಹೇಳಿಬಿಡು
ಸಂಜೆ ಗಾಳಿ ಸೇವಿಸಿ ಬಾ
ಮನಸು ಹಗುರಗೊಳಿಸು, ಬದಲಾಗು ಬಾ

-ಪ್ರೀತಿಯ ಹನಿ-

ಅರೆ..ಅರೆ ಮೋಡಗಳೇ ಸ್ವಲ್ಪ ನಿಲ್ಲಿ
ಎತ್ತ ಹೋಗಿತಿರುವಿರಿ ಸ್ವಲ್ಪ ಹೇಳಿ ಹೋಗಿ
ನನ್ನ ಗೆಳತಿ ಅಲ್ಲೇ ಎಲ್ಲೋ ಇರುವಳು
ನನ್ನ ಪ್ರೇಮಪತ್ರವನ್ನೊಮ್ಮೆ ಕೊಟ್ಟು ಹೋಗಿ

ಗಾಳಿ ಬಂದತ್ತ ನಮ್ಮ ಪಯಣವು
ಎತ್ತ ಹೋಗುವೆವೋ ನಮಗೇ ತಿಳಿಯದು ಕೇಳು
ನಿನ್ನ ಗೆಳತಿ ಯಾರೆಂದು ತಿಳಿಯೆವು ನಾವು
ನಿನ್ನ ಪತ್ರ ಹೇಗೆ ಕೊಡುವುದು ನೀನೇ ಹೇಳು

ನೀವು ಹೋದೆಡೆ ತಂಪಾದ ಗಾಳಿ ಭೀಸಿ
ಪ್ರೀತಿಯ ಮಳೆಯ ಸುರಿಸಿ
ಇಳೆಯೆಂಬ ಗೆಳತಿಯ ಸಂತೈಸಿ
ನನ್ನ ಪತ್ರ ತಲುಪುವುದು ನನ್ನವಳ ಬಯಸಿ

ಹಾಗೇ ಆಗಲಿ ಯಾವಾಗಲೂ ಮಳೆ ಸುರಿಸಲಾರೆವು
ಮುಂಗಾರಿನ ಸಮಯ ಬರುವವರೆಗೂ ನೀ ಕಾಯಬೇಕು
ನಮ್ಮ ಮಳೆಯಲ್ಲಿ ನಿನ್ನ ಪ್ರೀತಿಯ ಪತ್ರ ಕೊಚ್ಚಿ ಹೋದರೆ
ನಮ್ಮ ಬಯ್ಯದಿರು
ನಿನ್ನ ಪತ್ರ ತಲುಪಿದೆ ಎಂದು ಗೊತ್ತಾಗುವುದಾದರೂ ಹೇಗೆ?

ನನ್ನ ಮಾತು ಮನ್ನಿಸಿದಿರಿ ಕೊಚ್ಚಿ ಹೋಗದಂತೆ
ನಿಮ್ಮ ಪ್ರತಿ ಹನಿಯಲ್ಲೂ ಬರೆಯುವೆ
ವಸಂತ ಬರುವ ಪ್ರತಿ ಮರಗಿಡಗಳ ಮೇಲೂ
ಹಸಿರಿನಿಂದ ಹೊಸ ಚಿಗುರಿನ ಮೇಲೆ ನೀವು ಇಳೆಗೆ ಹಾಕಿದ
ಪ್ರತಿ ಹನಿಯಿಂದ ಬರೆವ

-ಪೀಠಿಕೆ-

ವರುಷ ಕಳೆದಿದೆ ಅವಳು ಮನೆಯ ತೊರೆದು
ಮನದಲ್ಲಿ ಮಾಸದ ನೆನಪು ಗಟ್ಟಿಯಾಗಿ ಇಳಿದಿದೆ
ಮತ್ತೆ-ಮತ್ತೆ ಮನಸು ಅವಳ ಹೆಸರ ಕರೆದು
ನೆನಪು ಮಾಡಿಕೊಂಡೆನೆಂದು ಸಂತೋಷಪಟ್ಟಿದೆ

ಒಂದೇ ತಿಂಗಳು ಆಷಾಡವೆನ್ನುವರು ತಿಳಿದವರು
ವರ್ಷವೆಲ್ಲಾ ಆಷಾಡವೇ ಆಗಿದೆ ನನಗೆ
ಪ್ರೀತಿಯ ತೀವ್ರತೆ ವಿರಹವೋ
ವಿರಹದ ತೀವ್ರತೆ ಪ್ರೀತಿಯೋ ಒಂದೂ ತಿಳಿಯದಾಗಿದೆ

ದಿವಸಕ್ಕೆ ಒಂದು ಹಗಲು ಒಂದು ರಾತ್ರಿಯಂತೆ
ವರ್ಷಕ್ಕೋಂದು ರಾತ್ರಿಯಾದಂತಿದೆ ನನಗೆ
ಮುಂಗಾರಿಗೆ ಬಾಯಿತೆರೆದು ಕಾಯುತಿಹಳು ಇಳೆ
ಮನಸು ಮಿಂದಿದೆ,ನೊಂದಿದೆ-ಕಾರಣ ನಿನ್ನ ನೆನೆಪ ಮಳೆ

ನಾಳೆ ಬರುವಿಯೆಂದು ಇಂದೇ ಮುನ್ನುಡಿ ಬರೆದೆ
ಬರಲೋ? ಬೇಡವೋ? ಎಂದು ಪೀಠಿಕೆ ನೀನೇ ತೆರೆದೆ
ಮುಗಿಯದ ದ್ವಂದ್ವ ನಾಳೆಗೆ ತೆರೆ ಎಳೆದಿದೆ
ನಿನ್ನ ಹೆಸರ ಮನದ ಪುಟಗಳಲ್ಲಿ ಭಾರದ ಹೃದಯದಿಂದಲೇ ಬರೆದೆ

-ಆನಂದ-

ಹರಿಯುವ ನದಿಯನ್ನು ನೋಡಿ ಆಶ್ಚರ್ಯಪಟ್ಟಿದ್ದೇನೆ
ಹಾರೋ ಹಕ್ಕಿಯ ಕಂಡು ಸಂತೋಷಪಟ್ಟಿದ್ದೇನೆ
ಕನಸಿನಲ್ಲಿ ರೆಕ್ಕೆ ಜೋಡಿಸಿಕೊಂಡು
ಹಕ್ಕಿಗಳೊಂದಿಗೆ ಪೈಪೋಟಿಗಿಳಿದಿದ್ದೇನೆ
ಎತ್ತರದ ಬೆಟ್ಟಗುಡ್ಡಗಳನ್ನು ಹತ್ತಿ ಆನಂದಪಟ್ಟಿದ್ದೇನೆ
ಸ್ವರ್ಗವೆಂದರೆ ಇದೇ ಇರಬೇಕೆಂದು ಊಹಿಸಿಕೊಂಡಿದ್ದೆ


ಇಂದು ನಾಲ್ಕು ಗೋಡೆಯ ಮಧ್ಯೆ
ಅರೆ ಹುಚ್ಚನಂತೆ ಹುಡುಕುತ್ತಿದ್ದೇನೆ
ಹಣದ ಪ್ರತಿ ನೋಟಿನಲ್ಲೂ ಹುಡುಕಿದ್ದೇನೆ
ಕಂಡ ಕಂಡವರ ಮುಖಗಳಲ್ಲಿ
ಕಾಣದ ಆನಂದವನ್ನು ಹುಡುಕುತ್ತಿದ್ದೇನೆ
ಎಂದೋ ಅನುಭವಿಸಿದ ಆ ಆನಂದವನ್ನು ಮರೆತು ಹೋಗಿದ್ದೇನೆ
ಬೆಂಬಿಡದೆ ಕಾಂಕ್ರೀಟ್ ಕಾಡಿನಲ್ಲಿ ಗಮಟು ವಾಸನೆ ಬಿಟ್ಟರೆ
ಮತ್ತೇನೂ ಕಾಣಲಿಲ್ಲ, ಸಿಗಲಿಲ್ಲ.

-ಚಿತ್ತಾರ-

ಒಮ್ಮೆ ನಿಂತಿದ್ದೆ
ಮಸಾಲೆ ಪೂರಿ ತಿನ್ನಲು
ಆಗ ಸಂಜೆಯಾಗಿತ್ತು
ಮನಸ್ಸು ಹಗುರವಾಗಿತ್ತು
ಹಾಗೆ ಕಣ್ಣಾಡಿಸಿದ್ದೆ ಸುತ್ತಲೂ
ಸಂಜೆ ಕತ್ತಲು ಸಂತೋಷ ಕೊಡುತ್ತಿತ್ತು
ಪಿಸು-ಪಿಸು ಮಾತನಾಡುತ್ತಾ
ಮೈ-ಕೈ ಸೋಕಿಸಿಕೊಳ್ಳುತ್ತಾ
ಸಾಗೋ ಜೋಡಿಹಕ್ಕಿ
ಆಕಾಶದಲ್ಲಿ ಸಾಲುಸಾಲು ಹಕ್ಕಿಗಳ ಚಿತ್ತಾರ
ರಾತ್ರಿಯ ಶೃಂಗಾರ ಕಾವ್ಯಕ್ಕೆ ಪೀಠಿಕೆ ಬರೆದಂತ್ತಿತ್ತು

*ದಾರಿ-ರಹದಾರಿ*

ಎಷ್ಟು ಜನ ನಡೆದಾಡಿದ್ದಾರೆ ಈ ದಾರಿಯಲ್ಲಿ?
ಒಬ್ಬೊಬ್ಬರು ಒಂದೊಂದು ಎತ್ತರಕ್ಕೆ ಬೆಳೆದಿದ್ದಾರೆ
ಹೌದು ಇದೇ ದಾರಿಯಲ್ಲಿ ಹೋದವರು ಅವರೆಲ್ಲರೂ!
ನಾನೂ ಅದೇ ದಾರಿಯಲ್ಲಿದ್ದೇನೆ!
ಎತ್ತರದ ಅನುಭವ ನನಗಾಗಿಲ್ಲ
ಇವತ್ತು ಅದೇ ದಾರಿಯಲ್ಲಿ ನಡೆಯುತ್ತೇನೆ
ನಾಳೆ ನಾಳೆಗಳಲ್ಲಿ ದಾರಿ ಬದಲಾಗುವುದಿಲ್ಲ
ನನ್ನಲ್ಲಿ ಸಂದೇಹಗಳಿವೆ!
ಯಾರನ್ನು ಕೇಳಬೇಕು ತಿಳಿಯದಾಗಿದೆ?
ಹಿಂದೆ ಈ ದಾರಿಯಲ್ಲಿ ಹೋದವರು ಈಗ ಕಾಣುತ್ತಿಲ್ಲ,
ಈ ದಾರಿ ಇಂದು ಅವರಿಗೆ ಬೇಕಾಗಿಲ್ಲ
ನೆಲದ ಮೇಲೆ ನಡೆಯುವುದು ಅವರಿಗೆ ಸಾಕಾಗಿದೆ
ಅದಕ್ಕೆ ಕಾರು,ವಿಮಾನಗಳು ಸಾಕಷ್ಟಿವೆ
ಮರೆತ್ತಿದ್ದಾರೆಂದು ಆರೋಪಿಸಲೋ?
ಅಸಡ್ಡೆಯೆನ್ನಲೋ ತಿಳಿಯುತ್ತಿಲ್ಲ!
ಅದೇ ದಾರಿಯಲ್ಲಿ ಈಗಲೂ ಸತ್ವವಿದೆ
ನಗುನಗುತ್ತಾ ಸ್ವಾಗತಿಸುವ ಹೂಗಿಡಗಳಿವೆ
ತಣ್ಣನೆ ಗಾಳಿ ಬೀಸಿ ಸಂತೈಸುವ ಮರಗಳಿವೆ
ಹೆಚ್ಚಾಗಿ ನಮ್ಮದೆನ್ನುವ ಅಭಿಮಾನದ ವಾಂಛೆಯಿದೆ
ಅದು ನನ್ನ ದಾರಿ
ಅದು ನಮ್ಮ ದಾರಿ
ಜೀವನ ಸೋಪಾನಕ್ಕೆ ಅದೇ ರಹದಾರಿ||

-ಕಾಯುವ ಭಾಗ್ಯ-

ಇಂದೇಕೆ ಹೃದಯ ವೀಣೆ ಮಿಡಿಯುತಿದೆ
ಯಾವ ರಾಗಕೆ ಮನಸೋತು ನರಳುತಿದೆ
ಮನಕರಗಿ,ಹೃದಯ ಮರುಗಿ ತೊಳಲುತಿದೆ
ಭಾವಗಳು ಮನದೊಳಗೆ ತಿರುತಿರುಗಿ ಮೇಲೇರುತಿದೆ

ನಿನ್ನ ಕಂಡಾಗಲೇ ಮನದಲ್ಲೇನೋ ಹೊಸತನ
ಆ ಮಾತು, ಆ ನೋಟ ಕಾಣಬೇಕೆಂಬ ಕಾತರ
ನಿಂತಲ್ಲೇ ನಿಂತು ಕಾಯುವುದು ನಿನಗಾಗಿಯೇ
ಯಾರೇ ಕಂಡರೂ ನೀನ್ನೆಂದೇ ತಿಳಿಯುವ ಭ್ರಮೆ

ಬೇಸರವಿಲ್ಲ ನೀನು ಬರಲಿಲ್ಲವೆಂದು
ಪ್ರತಿದಿನ ಕಾಯುವೆ ನಿನಗಾಗಿ ಬೇಕೆಂದೇ
ನೀನು ಬರುವೆಯೆಂಬ ನೆವಸಾಕು ನನಗೆ ಜೀವಿಸಲು
ವಿರಹ ನೂರು ಬರಲಿ, ಕಾಯುವ ಭಾಗ್ಯ ನನಗೇ ಸಿಗಲಿ

ಪ್ರತಿಯೊಂದು ಕ್ಷಣವೂ ನಿನ್ನ ಜೊತೆಯಲ್ಲಿರುವೆ
ಕತ್ತಲಲ್ಲೂ, ಬೆಳಕಲ್ಲೂ,ದುಃಖ,ನೆತ್ತರಲ್ಲೂ ನೀನೆ ಕಾಣುವೆ
ನೀನಿಲ್ಲದ ಜಾಗವಾವುದೆಂದು ಹುಡುಕಬೇಕಿದೆ
ಎಲ್ಲೋ ಇರುವ ನಿನ್ನಲ್ಲೂ ನಾನೇ ಇರುವೆ

-ಜೀವದ ಇನಿಯ-


ಯಾರು ಬರುವರೋ?
ಯಾವಾಗ ಬರುವನೋ?
ಈ ಜೀವವ ಉದ್ಧರಿಸಲು

ಮನಸು ಬಯಸುತಿದೆ
ಕಣ್ಣು ತವಕಿಸುತಿದೆ
ಇಂದೇ ಕಣ್ಣ ಮುಂದೆ ಬರಬಾರದೇ

ಇವನು ಗೆಳೆಯನಲ್ಲ
ಇವನು ಇನಿಯನಲ್ಲ
ಸನಿಹ ಬರುವ ಸುಳಿವಿಲ್ಲ

ಯಾರು ಮುಂದೆ ಬಂದರೂ
ಮನದಲ್ಲಿ ಅದೇ ಯೋಚನೆಯೂ
ನಕ್ಕು ಮರೆಯಾಗುವವರೇ ಎಲ್ಲರೂ

ಇನಿಯನೇ ಬಾ..ಬಾ
ಜೀವದ ಉಸಿರೇ ಬಾ..ಬಾ
ಕಾಯುತ್ತಾ ನಿನಗಾಗಿ ಕುಳಿತಿಹೆ ನಲ್ಲಾ

-ಪ್ರೀತಿಯ ಸಹಿ-


ಯಾರಿಗೆ ಕಾಯುತಿರುವೆ?
ಯಾಕಾಗಿ ಕಾಯುತಿರುವೆ?
ಮೋಹನ ಮನಕರಗಿ ಬರುವನೆಂದು
ಎಷ್ಟು ಸರಿ? ಕಾಯುತಾ ದಾರಿ ಕಾಯುವುದು

ಮೋಹ ತೊಳೆಯಲೆಂದೇ ಬಂದವ
ವ್ಯಾಮೋಹ ತೊಳೆದವ
ಪ್ರೀತಿ ಶಾಶ್ವತವೆಂದು ಹೋದವ
ಕಾಯುವ ಈ ಪರಿ ಎಷ್ಟು ಚಂದವೋ?

ಪ್ರೀತಿ-ಪ್ರಣಯವಾಯಿತು
ಜೋಡಿ ಜೀವವಾಗಿ ತೇಲಿದ್ದಾಯಿತು
ಮನಸಿನಲ್ಲಿ ಮೋಹ ಮುಗಿದ ಮೇಲೆ
ಹೃದಯದಲ್ಲಿ ಭಾರದ ವಿರಹ ಮೂಡಿದೆ

ನೀನಿದ್ದಾಗ ಕತ್ತಲಲ್ಲೂ ಬೆಳಕೆ!
ನೀ ಹೋದ ಮೇಲೆ ಎಲ್ಲೆಲ್ಲೂ ಕತ್ತಲೇ
ನೀನಿಲ್ಲದ ಸಮಯ ಮೆಲ್ಲಮೆಲ್ಲನೆ ತೆವಳಿದೆ
ನಿನ್ನ ಕಾಣದ ಹೃದಯ ಚೇತನವಿಲ್ಲದೆ ನರಳಿದೆ

ಹೋದ ಗೆಳೆಯ ಬಾ
ನಿನಗಾಗಿ ಕಾಯುತಿಹೆ ಬಾ..ಬಾ..
ನೀನಿರದ ಈ ಜೀವನ ಕಹಿ
ಹೃದಯದಲ್ಲಿ ಅಚ್ಚಳಿಯದೆ ಉಳಿದಿದೆ ನಿನ್ನ ಪ್ರೀತಿಯ ಸಹಿ

-ಮೌನ ಪಾಠ-


ಕಾಡೋ ಕನಸು
ಹುಡುಕೋ ಮನಸು
ದಣಿಯದೆ ಮುಂದೆ ಸಾಗಿದೆ

ನಾಳೆ ಬರಲಿ
ಹೊಸತು ತರಲಿ
ಮನಸು ಹೊಸತನೆ ಬಯಸಿದೆ

ನೋಡೋ ಕಣ್ಣು
ಸೌಂದರ್ಯದ ಗಣಿ ಹೆಣ್ಣು
ವಿರಹ ನೂರು ಮಾಡಿದೆ

ಕಾಯೋ ಕಾಲ
ತಾಳ್ಮೆಯ ಬಲ
ನಾಳೆ ನಮ್ಮದಾಗುವುದೆಂದು ಹೇಳಿದೆ

ಇಂದು ನೋವು
ನಾಳೆ ನಲಿವು
ಜೀವನ ಮೌನವಾಗಿ ಪಾಠ ಕಲಿಸಿದೆ

-ಗರಗಸ-

ಗರಗಸ.. .. .. .. ಗರಗಸ
ಇವನು ನಮ್ಮ ಗರಗಸ
ಸನಿದಪ.. ಮಗರಿಸ
ಇವನು ನಮ್ಮ ಗರಗಸ

ಇವನು ನಮ್ಮ ಗರಗಸ
ಇವನ ಕೈಗೆ ನಾವು ಸಿಕ್ಕರೆ ಮಗರಿಸ
ಮಗರಿಸ ಗರಗಸ
ಗರಗಸ ಮಗರಿಸ

ಬಾಯಿಬಿಟ್ಟರೆ ನಮಗೆಲ್ಲಾ ಭಯ ಭಯ
ಎದುರುಗಿದ್ದವ ಹರೋಹರ
ಮೆಧುಳಿಗೇ ಕೈ ಹಾಕುವ
ಮಾತಿನಲ್ಲೇ ಭೋರುಗೊಳಿಸುವ

ಗರಗಸ.. .. ಗರಗಸ
ಇವನು ನಮ್ಮ ಗರಗಸ
ಸನಿದಪ ಮಗರಿಸ
ನಿನ್ನ ಜುಟ್ಟು ಎಗರಿಸ

-ಅವನ ಹೆಸರು-

ನಿದ್ದೆ ಆವರಿಸಿದೆ
ನಿದ್ರಾದೇವತೆ ಅವನ ಬಿಟ್ಟು ಹೋಗಳು
ಮುಗ್ದತೆಯೆ ಮೈ ತುಂಬಾ ಹೊಕ್ಕಿದೆ
ಕಣ್ಣು ಬಿಟ್ಟರೆ ನಗುವೇ ಆವರಿಸುತ್ತೆ
ಹಸಿವಾದರೇ ಅಳುವಿನ ಗಣಗಳು ರುದ್ರನರ್ತನ
ಹೊಟ್ಟೆ ತುಂಬಿದರೆ ಯಾವ ಚಿಂತೆಯೂ ಇಲ್ಲ
ಮಾತಿಲ್ಲ ಆದರೇ ಮೌನದಲೇ ಶಬ್ದ ತರಂಗಗಳು
ಸಂಗೀತದ ಅಲೆಗಳು ತೇಲುತ್ತಿವೆ
ಸಾವಿರ ಕಣ್ಣುಗಳ ಗಮನ ಅವನ ಮೇಲೆ
ನಿದ್ದೆಯಿಂದ ಏಳಬಾರದೇ
ಎಲ್ಲ ಮನಗಳ ಆಶಯ
ಅಳುವು ಶುರುವಾದರೆ ಎಲ್ಲರೂ ಮಾಯ
ನಗುವು ತೇಲಿ ಬಂದರೆ ಎಲ್ಲರೂ ಹಾರಿಬರುವರು
ಎಲ್ಲರ ಬಾಯಲ್ಲೂ ಅವನೇ
ಎಲ್ಲರಲ್ಲೂ ಯೋಚನೆ ಅವನ ಹೆಸರೇನೆಂದು?
ಅ-ಅಸಾಮಾನ್ಯ
ನೀ-ನಿಧಾನವೇ ಪ್ರಧಾನವೆನ್ನುವವ
ಶ್-ಶಕ್ತ- ಎಲ್ಲವನ್ನೂ ಸಾಧಿಸುವ ಶಕ್ತಿಯುಳ್ಳವ
ಮುದ್ದು ಮುಖದವ
ನಮ್ಮ ಸುಖವನ್ನು ತನ್ನ ನಗುವಿನಿಂದಲೇ ತರುವವ
ನಮ್ಮ ನಿಮ್ಮವ ಅನೀಶ್.

ನೆಮ್ಮದಿ ಕಾಣಿಸದ ಹಣ

ನೆಮ್ಮದಿ ಕೊಡದ ಆಸ್ತಿ ಏಕೆ?
ಎಂದಾದರೂ ಪ್ರಶ್ನಿಸಿಕೊಂಡಿದ್ದೀರ?
ಕೈಗೆಟುಕುವಷ್ಟೇ ನಿಮಗೆ ದಕ್ಕುವುದು
ಅತಿಯಾದದ್ದು ಕಸವೇ ಅಲ್ಲವೇ?

ನೂರು-ಸಾವಿರ ಜನರ ದಂಡು ಹೋಗುತಿದೆ
ಹಣದ ದಾರಿಯಲ್ಲಿ ಹಣದ ಹಿಂದೆ
ಹಣವೆಂಬ ಮೋಹಿನಿ ವೈಯ್ಯಾರದಿ ಬಳುಕುತ್ತಾ ಸಾಗಿದೆ
ಎಲ್ಲರನ್ನೂ ಮರುಳುಗೊಳಿಸಿ

ಮಾತಿಲ್ಲ, ಕತೆಯಿಲ್ಲ ಹಣವಿದ್ದರೆ ಹತ್ತಿರ
ನಿಮ್ಮ ನೀವು ಮರೆತು ದುಡಿದು ಕೂಡಿಡುವಿರಿ ಹಣ
ಚಂಚಲೆ ಹಣ ಇವತ್ತು ನಿಮ್ಮ ಹತ್ತಿರ ನಾಳೆ ಯಾರೋ!
ಗೊತ್ತಿದೆ ಜನಕ್ಕೆ ಹಣ ಇರುವುದಿಲ್ಲ ಹತ್ತಿರ ಆದರೂ ಬೇಕು

ಕೈಕೊಟ್ಟ ಪ್ರೇಯಸಿಯಂತೆ ಹಣ
ಕೈ ಜಾರಿ ಹೋದಾಗ ಆಗುವುದು ಚಿಂತೆ
ಮತ್ತೆ ಹುಡುಕಾಟ ಹಣವ ಪಡೆಯಲು
ಈ ಲೋಕಕ್ಕೆ ಹಣದ ಹುಚ್ಚು ಹಿಡಿದಿದೆ

ಏನೂ ಬೇಡ ಹಣವನ್ನು ಪಡೆದರಷ್ಟೇ ಸಾಕು
ಹಣ ಹಣವೆಂದು ಬಡಿದಾಡಿ ಸಾಯುವರು ಏಕೋ?
ಹಣದ ವ್ಯಾಮೋಹ ಯಾರನೂ ಬಿಟ್ಟಿಲ್ಲ
ಹಣ ಹಣವೆಂದು ಹೆಣವಾಗುವರೆಗೂ ಬಿಡರು

|| ಶಾಲೆ||


ಕೈ ಮುಗಿದು ಒಳಗೆ
ಬಾ ಜ್ಜಾನ ಭಿಕ್ಷುವೇ
ಅರಿವ ಬೆಳಕಿನ ದೇವಾಲಯಕೆ
ತಾಯ ಪ್ರೀತಿಯ ಮಮತೆಯ
ತೋರುವ ಗುರುಚರಣಕ್ಕೆ
ಮೊಳಕೆಯೊಡೆದು ದಿಗಂತಕೆ
ಬೆಳೆವ ಉತ್ಸಾಹದಿ ನೀ ನಡೆದು ಬಾ.......
ಬನ್ನಿ ಭಾವೀ ಭಾರತದ ಪ್ರಜೆಗಳೇ
ಭಾರತದ ಕೀರ್ತಿ ಪತಾಕೆಯ ಬೆಳೆಸೋಣ
ವಿಶ್ವಶಾಂತಿಯ ಹರಿಕಾರರಾಗೋಣ
ವಿಶ್ವಪಥ ಮನುಜ ಮತವ ಪಠಿಸೋಣ

ಭಾರತೀಯ

ಸಮುದ್ರದ ಅಲೆಗಳು ಬಂದಪ್ಪಳಿಸುತ್ತಿವೆ
ತೀರದ ಬಂಡೆಗಲ್ಲುಗಳಿಗೆ
ಸಪ್ಪಳದ ಝೇಂಕಾರದಲಿ ಸಾರಿ ಸಾರಿ
ಸಾರುತಿಹದು ನಾವು ಭಾರತೀಯರೆಂದು

ಗುಡಿ, ಮಸೀದಿ, ಚರ್ಚುಗಳ ಗಂಟೆಗಳು
ಮೊಳಗುತ್ತಿವೆ ಬಿನ್ನ ಸಂಸ್ಕೃತಿಯ
ಸಾರಿ ಸಾರಿ ಘಂಟಾಘೋಷವಾಗಿ ಮೊಳಗುತಿದೆ
ನಾವು ಭಾರತೀಯರೆಂದು

ಹೂದೋಟದ ದುಂಭಿಗಳು ಝೇಂಕರಿಸುತ್ತಿವೆ
ಪುಷ್ಪಗಳು ಮಧುರ ಸೌಗಂಧವ ಪಸರಿಸುತ್ತಿವೆ
ಪ್ರೀತಿ-ವಾತ್ಸಲ್ಯವ ಸೂಸುತಿಹುದು
ನಾವು ಭಾರತೀಯರೆಂದು

ಎಂದೂ ಅಳಿಯದಂತ ಭಾವವಿದು
ಎಂದೂ ಮರೆಯದಂತ ಮಾಟವಿದು
ಅಲೆ ಅಲೆಗಳಲಿ ಮನ ಮನಗಳಲಿ ತಂಪಾದ ಗಾಳಿಯ
ಕಂಪಿನಲಿ ಪಸರಿಸುತಿದೆ ನಾವು ಭಾರತೀಯರೆಂದು

ಅಮರ ಪೇಮ

ಪ್ರಿಯಮನ ಅರಸುತಲಿ
ಪ್ರಿಯತಮೆಯು ಅಲೆಯುತಿಹಳು
ಬಾನಿನಂಗಳದಲ್ಲಿ ಚಂದ್ರ
ತಾರೆಯರು ಮಿನುಗುತಿಹರು
ಏಕಾಂಗಿಯಾಗಿ ಬೃಂದಾವನದಲಿ
ನರಹರಿಯ ಸಂಗ ಬಯಸಿ ಬಂದಳು ರಾಧೆ

ಹುಡುಕುತಲಿ ನಡೆಯ
ಅವಳ ಕಾಲಿನ ಸ್ಪರ್ಶಕ್ಕೆ
ಮನಸೋತ ತರಗೆಲೆಗಳು
ಮನ್ಮಥಾನಂದವಾದಂತೆ ಜಾಗೃತವಾದವು

ಬಳುಕುತಲಿ ನಡೆಯೆ
ಗಿಡ ಮರಗಳು ಅವಳ ಸೌಂದರ್ಯಕ್ಕೆ
ಮಾರುಹೋಗಿ ಅವಳತ್ತ ಬಾಗಿ
ಚುಂಬನಕ್ಕೆ ಕರೆಯುತಿರುವಂತೆ ತೋರಿತು

ಹೂವಿನ ಮರಗಳು ಅವಳ
ಮೇಲೆ ಪುಷ್ಪಗಳನ್ನೆರಚಿದವು
ತಂಗಾಳಿಯ ಬೀಸಿ ಬೀಸಿ
ಅವಳ ಗಮನ ಸೆಳೆಯಲೆತ್ನಿಸಿದವು

ಅದಾವುದರ ಅರಿವೂ ಇಲ್ಲದೆ
ನರಹರಿಯ ಹುಡುಕುತಿಹಳು ರಾಧೆ

ನಡೆ ನಡೆದು ದಣಿವಾಗಿ
ಯಮುನಾ ತೀರದಲಿ ನೀರನ್ನು
ಕುಡಿಯುತಿರೆ ಬಾನಿನಲ್ಲಿಯ ಚಂದ್ರ
ಧರೆಗಿಳೆದು ಬಂದು ರಾಧೆಯ ಚುಂಬಿಸುವಂತೆ ಭಾಸವಾಯಿತು

ದೂರದಲಿ ಕಾಣಿಸಿತು ನರಹರಿಯ
ಬರುವು ನಲಿದಿತು ಮನ
ತನು ಬಳಲಿದ್ದರೂ ಮನವು ನರಹರಿಯ
ಬಯಸುತ್ತಿತ್ತು ಬೃಂದಾವನದಲೀ

ನೆನೆದೊಡೆ ಬಂದ ನರಹರಿಯ
ಬಾಹುಬಂಧನದಲಿ ಸಿಲುಕಿದಳು ರಾಧೆ

ಇವರ ಮಿಲನದಿಂದ
ಪುಲಕಿತಗೊಂಡ ವರುಣನು
ಕಾರ್ಮೋಡಗಳಿಂದ ಚಂದ್ರಮುಖಿಯ
ಬಳಸಲೋಡಿ ಬಂದನು

ಮಿಲನದ ಸಂತುಷ್ಟತೆಯ ಅನುಭವಿಸಿ
ಗುಡುಗು ಮಿಂಚುಗಳನ್ನೊಳಗೊಂಡು
ಧಾರಾಳವಾಗಿ ಮಳೆ ಸುರಿಯಿತು

ಇದಾವುದರ ಪರಿವೆಯೂ ಇಲ್ಲದೆ
ಇಬ್ಬರೂ ಒಲವಿನ ಸಾಗರದಲಿ
ಮದ್ಮೋನ್ಮತ್ತರಾದರು

ಇವರೀರ್ವರ ಮಿಲನವ ಕಂಡು
ಬಾಗಿದ್ದ ಮರಗಿಡಗಳು
ತರುಲತೆಗಳು ದಿಕ್ಕನು ಬದಲಿಸಿದವು
ನಾಚಿಕೆಯಿಂದಲಿ

ಹೂ ಗಿಡಗಳು ಪ್ರೇಮಿಗಳ
ಮೇಲೆ ಪುಷ್ಪಗಳನ್ನು ಸುರಿಸಿ
ವಾಸ್ತವೀಕತೆಯಿಂದ
ಬಹುದೂರ ಕರೆದೊಯ್ದವು

ಆರ್ಯ-ಚಂದ್ರಮುಖಿ


ತಿಳಿನೀಲಿ ಆಕಾಶದಲ್ಲಿ
ಹಾಲು ಚೆಲ್ಲಿದ ಹೊಂಬೆಳಕಲ್ಲಿ
ತಾರೆಯರ ಒಡನಾಟದಲ್ಲಿ
ಚಂದ್ರಮುಖಿ ಪಯಣಿಸುತಿಹಳು

ಕರ್ತವ್ಯದ ಕರೆಗೆ ಓಗೊಟ್ಟು
ಸಪ್ತ ಹಯವೇರಿ
ಬಾನಿನಂಗಳಕ್ಕೆ ಲಗ್ಗೆ ಇಟ್ಟನು
ಆರ್ಯ ಕುಮಾರ

ವಜ್ರ ಕಿರೀಟಗಳಿಂದ ಭೂಷಿತನಾದ
ಆರ್ಯ ಕುಮಾರನ ಸೌಂದರ್ಯವ
ಕಂಡು ನಾಚಿ ನೀರಾದಳು ಚಂದ್ರಮುಖಿ

ಚಂದ್ರಮುಖಿಯಲಿ ಪೇಮಾಂಕುರಿಸೆ
ನಾಲಗೆಗೆ ಮಾತುಗಳು ಎಟುಕದೆ
ನಾಚಿಕೆಯಿಂದ ಕೆನ್ನೆ ಕೆಂಪೇರಿದವು

ತಿಳಿದಾ ಗಗನವು ತಾನೇ ಆರ್ಯ ಕುಮಾರನಿಗೆ
ಮನ ಸೋತಂತೆ ನಾಚಿ
ಬಾನೆಲ್ಲಾ ಕೆಂಪಾಗಿಸಿದನು

ರೆಕ್ಕೆ ಬಿಚ್ಚಿ ಹಾರು ಹಕ್ಕಿಯೇ!

ನಾನಿರುವುದೊಂದು ದೊಡ್ಡಮರ
ನಮ್ಮ ರೆಂಬೆಯಲಿ ನೂರಾರು
ಪೊಟರೆಗಳು ಹತ್ತು ಹಲವು
ಹಕ್ಕಿಗಳ ನೆಮ್ಮದಿಯ ತಾಣ


ಭಾಸ್ಕರನ ಮೊದಲ್ಕಿರಣ ಮೂಡಿ
ಹಕ್ಕಿಗಳೆಲ್ಲಾ ಗೂಡುಗಳ ತೊರೆದು
ಹೋರಡುವುದು ಲೋಕ ಯಾತ್ರೆಗೆ
ತೆರಳುವುದು ಹೊಟ್ಟೆಗೆ, ಬದುಕಿಗೆ

ನಾನು ಇಲ್ಲೇ ಪೊಟರೆಯಲಿ
ಸಂಗಾತಿಗಳು ಬರುವವರೆಗೆ
ಕಾಯಬೇಕು ಹಾರಲಾರದೆ
ತೊಳಲಾಡಬೇಕು ಬದುಕಲೋಸುಗ

ಯಾವುದೋ ಕೆಟ್ಟ ಘಟನೆಗಳ
ಕಹಿನೆನಪುಗಳು ರೆಕ್ಕೆಗಳ
ಬಲವನ್ನೇ ಕಳೆದು ಹೆಳವನನ್ನಾಗಿಸಿದೆ
ನೆನಪುಗಳು ಮತ್ತೇ ಮತ್ತೇ ಕೊಲ್ಲುತ್ತಿವೆ

ನನ್ನದೇ ರೆಂಬೆಯಲಿ
ಪುಟ್ಟದೊಂದು ಪೊಟರೆಯಲಿ
ಬೆಳೆಯುತಿಹುದು ಪುಟ್ಟ ಹಕ್ಕಿಯೊಂದು
ಪುಟ ಪುಟನೆ ಹಾರುವುದು ನವ ಉತ್ಸಾಹದಿ


ಅದನೊಡಿದೊಡೆ ಬಲು ಸಂತಸವೆನಗೆ
ಹಾರು ಹಾರು ಮೆಲ್ಲಗೆ ಎತ್ತರೆತ್ತರಕೆ
ಜಾಗ್ರತೆಯಿಂದಲಿ ಎಚ್ಚರಿಯಿಂದಲಿ
ಮನಃಪೂರ್ವಕವಾಗಿ ಹರಸುವೆನು


ಅ ಪುಟ್ಟಹಕ್ಕಿ ನನ್ನನೊಡಿದೊಡೆ
ನಗುವುದು, ಪಟಪಟನೆ ಮಾತಾಡುವುದು
ನಗುತ ನಲಿಯುತ ಹಾರುವುದು
ದಿನವಿಡಿಯ ಅನುಭವಗಳ ಬಣ್ಣಿಸುವುದು


ಪುಟ್ಟ ಹಕ್ಕಿಯೇ ಹಾರು
ಎತ್ತರೆತ್ತರಕೆ ರೆಕ್ಕೆ ಬಲಿತಿವೆ
ಎಚ್ಚರಿಕೆ ಪುಟ್ಟಾ ಬೇರೆ ಕೆಟ್ಟ
ಹಕ್ಕಿಗಳು ತೊಂದರೆ ಕೊಟ್ಟಾವು

ಜೋಡಿಹಕ್ಕಿ ದೊರಕಿತೆಂದು
ಸಾಕಿಸಲಹಿದ ತಂದೆ-ತಾಯಿಗಳ
ಪ್ರೀತಿ ಅಕ್ಕರೆಯ ಅಣ್ಣ-ತಮ್ಮಂದಿರ
ಮರೆತು ದೂರ ಹೋಗದಿರು

ಪುಟ್ಟಾ ನೀ ಎತ್ತರೆತ್ತರಕೆ ಹಾರುತಿರೆ
ನನ್ನ ರೆಕ್ಕೆಗಳಿಗೂ ಶಕ್ತಿ ತುಂಬುವುದು
ನಿನ್ನೆತ್ತರಕೆ ನನ್ನ ಸ್ವಾಭಿಮಾನವೂ ಬೆಳೆವುದು
ಕಹೀ ನೆನಪುಗಳ ಮರೆತು ನಾ ಹಾರುವೆ

ಇಂದು ನಾನೂ ಹಾರುತಿರುವೆ
ನೀನೇ ಸ್ಪೂರ್ತಿಯಾದೆ
ಕಹೀ ನೆನಪುಗಳೆಲ್ಲಾ ಮರೆತಿದೆ
ನಿನ್ನದೇ ಸವಿನೆನಪುಗಳು

ಅಮ್ಮಾ ನೀನಿದಿದ್ದರೆ........

ನಾನು ತುಂಬ ಚಿಕ್ಕವ
ಅಮ್ಮ ನನ್ನನ್ನು ಎಲ್ಲಿಂದಲೋ
ತಂದು ಮನೆಯ ಅಂಗಳದಲಿ
ನೆಟ್ಟು ಹೊಸ ಜೀವ ನೀಡಿದಳು||


ಪ್ರೀತಿ ವಾತ್ಸಲ್ಯದ ನೀರೆರೆದು
ತನ್ನ ಅಮೃತಹಸ್ತದಿಂದ
ಮೈದಡವಿ ಎತ್ತರೆತ್ತರಕೆ
ಬೆಳೆ ಮಗು ಎಂದು ಧೈರ್ಯ ತುಂಬಿದಳು||

ನಾ ಮೊದಲು ಹೂ ಬಿಟ್ಟಾಗ
ಅಮ್ಮ ಪಟ್ಟ ಸಂತೋಷ ಅಷ್ಟಿಷ್ಟಲ್ಲ
ನೆರೆಹೊರೆಯವರಿಗೆಲ್ಲಾ ನನ್ನ
ಸೌಂದರ್ಯವ ಹಾಡಿ ಹೊಗಳಿದಳು||

ನಾ ಬಿಟ್ಟ ಹಣ್ಣುಗಳನ್ನು
ಎಲ್ಲರಿಗೂ ಕೊಟ್ಟು ಆನಂದಿಸಿದಳು
ಪಕ್ಕದ ಮನೆಯ-ದಾರಿ ಹೋಕರು
ಕಲ್ಲೆಸೆದಾಗ ನೋವು ಅನುಭವಿಸಿದಳು||

ಅಮ್ಮ ಈಗಿಲ್ಲ
ನಾನು ತುಂಬಾ ಎತ್ತರಕ್ಕೆ ಬೆಳೆದಿದ್ದೇನೆ
ಪರಕೀಯನಾಗಿ ಅನಾಥನಾಗಿದ್ದೇನೆ
ಅಮ್ಮನ ಪ್ರೀತಿ-ವಾತ್ಸಲ್ಯವಿಲ್ಲದೆ ಸೊರಗಿದ್ದೇನೆ||

ಅಮ್ಮನ ಮನೆ ಮುರಿದಿದೆ
ಸರ್ಕಾರದವರ ಪಾಲಾಗಿರುವೆ
ಮನೆಯ ಜಾಗದಲ್ಲಿ ವಾಹನ ನಿಲ್ಡಾಣ
ನಿರ್ಮಾಣವಾಗುವುದೆಂದು ಸುದ್ದಿ||

ಸುದ್ದಿ ನಿಜವಾಯಿತು
ಅಮ್ಮನ ಮನೆ ಮಣ್ಣು ಸೇರಿತು
ಹತ್ತು ಸಾವಿರಕೆ ನಾನು ಮಾರಟವಾದೆ
ಯಾರ ಮನೆಯ ಮೇಜು, ಬಾಗಿಲು ಕುರ್ಚಿ-
ಯಾಗುವೆನೋ ನಾನು?......||

ಅಮ್ಮಾ.........ಅಮ್ಮಾ........
ಗರಗಸದಿಂದ ಕೊಯ್ದರು
ಮಚ್ಚಿನಿಂದ ರೆಂಬೆಗಳ ಕತ್ತರಿಸಿದರು
ನನ್ನ ನೋವನ್ನು ಕಂಡು
ಜನರು ಕೇಕೆ ಹಾಕುತ್ತಿರುವರು||

ಅಮ್ಮಾ ನೀನಿದ್ದರೆ ನನಗೆ
ಈ ರೀತಿ ಮಾರಣಾಂತಿಕ ನೋವಾಗುತ್ತಿತ್ತೆ...
ಅಮ್ಮಾ ನೀನಿದ್ದರೆ....
ಅಮ್ಮಾ ನೀನಿದ್ದರೆ.....||

ನೆನಪು ಕಾಡಲಿ ಸದಾ

ನೀ ಎಷ್ಟೇ ದೂರ ಹೋಗು
ನೀ ಎಲ್ಲೇ ಇರು
ನಿನ್ನ ನೆನಪು ನನ್ನ ಕಾಡಲಿ ಸದಾ
ಹಕ್ಕಿಗೆ ಬಾನಿದ್ದಂತೆ
ಭೂಮಿಗೆ ಸೂರ್ಯನಿದ್ದಂತೆ
ನಿನ್ನ ಮಧುರ ನೆನಪು ನನಗೆ

ಈ ಬಾಂಧವ್ಯ ಪವಿತ್ರ
ನಮ್ಮಲುಳಿಯಲಿ ಸರ್ವದಾ
ನಿನ್ನ ನೆನಪು ನನ್ನ ಕಾಡಲಿ ಸದಾ

ನಿನ್ನ ಹೆಸರೇ ಹೇಳುವುದು
ನೀನೆಷ್ಟು ಮಧುರವೆಂದು
ನಿನ್ನ ತುಟಿಯಂಚಿನ ನಗುವು
ನನಗೇ ಎಂದೆಂದೂ.........
ನಿನ್ನ ನೆನಪು ನನ್ನ ಕಾಡಲಿ ಸದಾ

ಚಂದ್ರಮ


ಮೋಡಾದ ಮುಸುಕಿಂದ
ನಗುವಾ ಮೊಗದಿಂದ
ನಗುತಾ ಬೆಳಾಕ ಚೆಲ್ಲಿ
ಮರೆಯಾದೆ ಎಲ್ಲಿ


ಸ್ನೇಹದಾ ಕಂಪು ಬೀರಿ
ಮಧುರತೆಯ ವಾತ್ಸಲ್ಯವ ತೋರಿ
ಬಾನಿನಂಗಳಕೆ ಹಾರಿ
ಮರೆಯಾದೆ ಎಲ್ಲಿ


ನದಿಯಾ ಕಲರವದಲ್ಲಿ
ನೀರಿನಾ ಅಲೆ ಅಲೆಯಲ್ಲಿ
ತಂಪನ್ನು ಚೆಲ್ಲಿ
ಮರೆಯಾದೆ ಎಲ್ಲಿ


ಪ್ರೀತಿಯಾ ಸೆಲೆಯಿಟ್ಟು
ನೆನಪಿನಾ ಗರಿಬಿಟ್ಟು
ಸ್ಪೂರ್ತಿಯಾ ಚಿಲುಮೆಯಾಗಿ
ನೀ ಮರೆಯಾದೆ ಎಲ್ಲಿ

ಅತಿಥಿ


ನೀನು ಬಂದೆ
ಹರುಷ ತಂದೆ
ಚಲ್ವ ನಗೆಯ ಸೂಸಿ


ತಂಗಿ ಎಂದೆ
ಮನದಲಿ ನಿಂದೆ
ಒಲವ ವರ್ಷವ ಬೀಸಿ


ಗುರಿಯ ಸಾಧಿಸಿ
ಹೊರಟು ನಿಂತೆ
ಮಧುರ ನೆನಪ ಹಾಸಿ


ಬಾಳು ಬಾಳು
ನೂರು ವರುಷ
ಸಂತೃಪ್ತಿಯ ಬದುಕ ಬಾಳಿ

ಗೆಳೆತನ


ನಾವು ಜೊತೆ ಜೊತೆಯಾಗಿ
ಹೆಜ್ಜೆ ಹಾಕಿ ನಡೆಯೆ
ಅದುವೆ ಹೊಸ ಜೀವನದ ಆರಂಭ


ನಮ್ಮ ಕನಸು-ಮನಸುಗಳು
ಒಂದಾಗಿ ಕಾಯಕವ ಮಾಡೆ
ಅದುವೇ ದಾರಿ ಅಭಿವೃದ್ಧಿಗೆ


ಕಾಲ ಜ್ಜಾನದ ನಡುವೆ
ಬೆರೆತು ಬೆಳೆಯುವ
ಅದುವೇ ಅಮಿತ ಗೆಲುವು


ಪ್ರೀತಿ-ವಿಶ್ವಾಸಗಳ
ಕಷ್ಟ-ಸುಖಗಳ
ನಡುವೇ ಒಂದಾಗಿ ನಡೆಯೆ
ಅದುವೇ ಗೆಳೆತನ.

ಪ್ರೀತಿ-ಸಂಪತ್ತು


ಹೃದಯದ ಅಣು ಅಣುವಿನಲಿ
ಪ್ರೀತಿ ವಾತ್ಸಲ್ಯಗಳಿರಲಿ
ಹೃದಯ ವೈಶಾಲತೆಯು ಸದಾ ಹಸಿರಾಗಿರಲಿ
ಪ್ರೀತಿ ವಿಶ್ವಾಸ ವಾತ್ಸಲ್ಯ
ಮಾನವೀಯತೆಗಳೇ ಜೀವನದ
ಅಮೂಲ್ಯ ಸಂಪತ್ತುಗಳಾಗಲಿ.

ಪರಿಸ್ಥಿತಿ


ಬರೆಯುವ ಆಸೆ ಏನನ್ನೋ
ಹೇಳುವ ಆಸೆ ಏನನ್ನೋ
ಹೃದಯವು ಕಂಪಿಸುತಿದೆ
ಮನದಾಸೆಯ ಬಲ್ಲೆಯೇನು?
ಹೇಳಬಾದೇಕೆ? ಬರೆಯಬಾರದೇಕೆ?
ಬರೆಯಲಾರದ ನೀತಿಯೇನು?
ಈ ನಾಚಿಕೆ ತರವಲ್ಲ
ನಾಲಿಗೆಗೆ ಪದಗಳು ಎಟುಕದೆ
ಮೂಕನಾಗಿರುವೆ ಪರಿಸ್ಥಿತಿಯ
ಕೈ ಗೊಂಬೆಯಾಗಿ ಮಲುಗುತಿಹೆ
ನನ್ನ ಕೇಳುವರಾರು? ತಣಿಸುವರಾರು?

ವಸಂತ


ವಸಂತದಲಿ ಚಿಗುರುವಾಸೆ
ನಿನಗೇಕೆ ಮಾವಿನ ಮರವೇ?
ಋತು ಆಗಮನದಿಂದ ನೀನೇಕೆ
ಹಾಡಲು ಶುರುಮಾಡಿರುವೆ\\

ಎಲೈ ಕೋಗಿಲೆಯೆ?
ನಮಗಿರುವ ಚಿಂತೆ ನಿಮಗಿಲ್ಲವೆಂದು
ನಮ್ಮನ್ನು ಅಪಹಾಸ್ಯ ಮಾಡುತ್ತಿರುವಿರೇನು?
ನಾವು ದುಃಖಿಗಳೆನೋ ನಿಜ
ಎಲೈ ಕೋಗಿಲೆಯೇ ನಿನ್ನ
ಹಾಡಿನಿಂದ ನಮ್ಮನ್ನು ತಣಿಸಲಾರೆಯಾ?

ನೆನೆಪುಗಳ ಗಾಯನ

ಅದೇ ಊರು! ಅದೇ ದಾರಿ!
ಇದುವೆ ನನ್ನ ಜೀವನ!
ಅದೇ ಮನೆ! ಅದೇ ಬಂಡೆ!
ನೀನಿರದ ಭಾವನ!
ಬರೀ ನೆನಪು! ಸವಿನೆನಪುಗಳು!
ಬಾಡದ ನಿನ್ನ ಗಾಯನ!.

ಯಾರೀಕೆ?

ಯಾರೀಕೆ?
ಯಾರೀಕೆ?
ಹಸಿರು ಸೀರೆಯುಟ್ಟು
ಧರೆಗಿಳಿದ ಈ ನೀರೆ ಯಾರು?
ಅಂಬರದಿಂದಿಳಿದು ಬಂದ
ಈ ಅಂಬೆ ಯಾರು?

ಬಳುಕುತ್ತಾ ನಡೆದು ಬರುವಾಗ
ಕಾಲಿನ ಗೆಜ್ಜೆಯ ಸದ್ದಿಗೆ
ಇನಿಯನು ಓಡಿ ಬರುವಂತೆ
ಮೋಡಗಳು ಓಡಿ ಬರುತ್ತಿವೆ

ಆಕೆಯ ಕಂಡ ರವಿಯ
ಮುಖ ಕೆಂಪೇರುತಿದೆ
ನೋಡುಗರು ಅಪಹಾಸ್ಯ ಮಾಡುವರೆಂದು
ನೇಪಥ್ಯಕೆ ಸರಿಯುತಿಹನು

ಕಣ್ಣು ಮಿಟಿಕಿಸುವುದರೊಳಗೆ
ನೀರೇ ಕಣ್ಮರೆಯಾಗುತ್ತಿದ್ದಂತೆಯೇ
ಮುಗಿಲಿನಿಂದ ಮುತ್ತಿನ
ಮಳೆಯೊಡನೆ ತಂಗಾಳಿ ತಂದಳು

ಯಾರೀಕೆ? ಯಾರೀಕೆ?
ಮುತ್ತಿನ ಮಳೆಯ ಒಡತಿ
ಅಂಬರದ ಸುತೆ ಈ ನೀರೆ ಯಾರು

ಓ ಶಾಂತಲೇ!

ಓ ಶಾಂತಲೇ! ಓ ಶಾಂತಲೇ!
ನೀನೇಕೆ ಆತ್ಮಹತ್ಯೆ ಮಾಡಿಕೊಂಡೆ?
ಹೊಯ್ಸಳೇಶ್ವರನ ಪಟ್ಟದರಾಣಿ ನೀನು
ನಿನಗೆ ಕಷ್ಟವದಾವುದು ಕಾಡಿತು?
ಶಿವಗಂಗೆ ರಮಣೀಯ, ಮನೋಹರ
ನಿನಗೆ ಮನಸ್ಸಾದರೂ ಹೇಗೆ ಬಂತು ಸಾವನ್ನು ಅಪ್ಪಲು?
ಬೆಟ್ಟವನ್ನು ಹತ್ತುವುದೇ ಒಂದು ಸವಾಲು!
ಜೀವನವೂ ಒಂದು ಸವಾಲೆಂದು ನಿನಗೆ ಅನಿಸಲಿಲ್ಲವೇ?
ಸಾವೇ ಎಲ್ಲದಕ್ಕೂ ಉತ್ತರವೆಂದು ನೀನೇಕೆ ತಿಳಿದೆ?
ಸತ್ತು ಯಾವ ಸಮಸ್ಯೆಗೆ ಉತ್ತರ ಕಂಡುಕೊಂಡೆ ಹೇಳು?
ನೂರು ಸಮಸ್ಯೆಗಳಿವೆ ಪರಿಹಾರ ಕಾಣಲು
ನಿನ್ನಂತಹ ಧೀರ ವನಿತೆಯರು ಬೇಕು ದಾರಿ ತೋರಲು
ದೇವರು ಕೊಟ್ಟ ಪ್ರಾಣ, ತ್ಯಾಗಮಾಡಲಿ ನಿನಗೇನಿದೆ ಹಕ್ಕು
ಸಾಧಿಸಿ ತೋರಿಸಬೇಕಾದದ್ದು ಬಹಳಷ್ಟಿತ್ತು, ಪೂರ್ಣಗೊಳಿಸದೇ ನೀನೇಕೆ ಹೋದೆ?
ಬೆಟ್ಟದ ಮೇಲೆ ಬಂದವರಿಗೆ ವಿಶಿಷ್ಟ ಅನುಭವವಾಗುತ್ತೆ
ದಣಿದ ದೇಹ,ಮನಸ್ಸಿಗೆ ಮುದನೀಡುತ್ತೆ
ಹೊಸ ಯೋಚನೆಗಳಿಗೆ ಹುಟ್ಟುನೀಡುತ್ತೆ
ಈ ಅನುಭವ ನಿನಗಾಗಲಿಲ್ಲವೇ?
ಜೀವನದಲ್ಲಿ ಮೇಲೇರುವುದು ಬಹಳ ಕಷ್ಟ
ಬೆಟ್ಟವನ್ನು ಹತ್ತಿದರೆ ಸತ್ಯಾಸತ್ಯತೆಯ ಪ್ರತ್ಯಕ್ಷ ದರ್ಶನವಾಗುತ್ತೆ
ನಿನಗೆ ಈ ದರ್ಶನವಾಗಲಿಲ್ಲವೇ?
ನನಗೆ ಈ ಪ್ರಶ್ನೆ ಇಂದಿಗೂ ಕಾಡುತ್ತಿದೆ
ಉತ್ತರ ನಿನ್ನಂದ ಮಾತ್ರ ಸಿಗುವಂತಹುದು
ನಾಟ್ಯವಿಶಾರದೆ ನೀನು
ಹೊಯ್ಸಳೇಶ್ವರನ ಪಟ್ಟದ ರಾಣಿ ನೀನು
ಅನೇಕ ಶಿಲ್ಪಿಗಳಿಗೆ ಸ್ಪೂರ್ತಿ ದೇವತೆ ನೀನು
ನಿನ್ನ ಸಾವು ನಮಗೆ ತುಂಬಲಾರದ ನಷ್ಟ
ನಿನ್ನ ಸಾವು ನಮ್ಮಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ
ನಿನ್ನ ಪೂರ್ಣತೆಗೆ ಯಾವುದು ಸವಾಲಾಗಿತ್ತು, ತಿಳಿಯದಾಗಿದೆ
ಆ ಸ್ಥಳವ ಕಂಡು ಒಮ್ಮೆಲೆ ಮನಸ್ಸು ಕಳೆಗುಂದಿತು
ನೂರು ಪ್ರಶ್ನೆಗಳು ದಾಳಿಮಾಡಿತು
ನಿನಗೆ ನೂರು ನಮನ
ನಿನ್ನ ಆ ಕೋಮಲ ಹೃದಯ ಅದೆಷ್ಟು ಸಂಕಟಪಡುತ್ತಿತ್ತೋ?
ಯಾರೂ ಅರಿಯರು
ಹೆಣ್ಣಿನ ಮನಸ್ಸು’ ಅಂದೂ ಹಾಗೆಯೇ ಇದೆ,ಇಂದೂ ಹಾಗೆಯೇ ಇದೆ’
ಅರಿಯುವ ಮನಸ್ಸುಗಳ ಬೇಡಿಕೆಯಿದೆ
ಹೆಣ್ಣಿನ ಶೋಷಣೆಗೆ ಕೊನೆಯೆಲ್ಲಿ
ಸಾವಿನಲ್ಲಂತೂ ಅಲ್ಲ ಎಂಬ ನಂಬಿಕೆ ನನ್ನದು
ವಿಜ್ಘಾನ, ತಂತ್ರಜ್ಘಾನ ಬೆಳೆದರೆಷ್ಟು?
ಶೋಷಣೆ ಮಾತ್ರ ಮುಗಿಯಲಾರದು
ಶಾಂತಲೇ ನೀನು ಶೋಷಿತರ ಪ್ರತೀಕ
ಸಾವಿರಾರು ಅಭಲೆಯರಿಗೆ ನೀನು ಮಾರ್ಗದರ್ಶಿಯಾಗಬಹುದಿತ್ತು ಗುಣಾತ್ಮಕವಾಗಿ
ಆದರೂ ಈಗಲೂ ಮಾರ್ಗದರ್ಶಿಯಾಗಿರುವೆ ಋಣಾತ್ಮಕವಾಗಿ
ನಿನ್ನಂತೆ ಅಸಹಾಯಕರು,ಶೋಷಣೆಗೆ ಬಲಿಪಶುವಾದವರು ನಿನ್ನಂತೆಯೇ ಆತ್ಮಹತ್ಯೆಯ ದಾರಿಹಿಡಿಯುತ್ತಾರೆ,
ಈಗಲೂ ಹಿಡಿಯುತ್ತಾರೆ,ಮುಂದೆಯೊ.........
ಓ ಶಾಂತಲೇ! ಓ ಶಾಂತಲೇ!

||ಹಕ್ಕಿ ಹಾರುತಿದೆ ನೋಡಿದಿರಾ||


ಹಕ್ಕಿ ಹಾರುತಿದೆ ನೋಡಿದಿರಾ!
ಬಾನಿನಂಗಳದಲಿ ರೆಕ್ಕೆ ಬಿಚ್ಚಿ
ಹಾರುತಿರುವೆ ಹಕ್ಕಿಯ ನೀವು ನೋಡಿದಿರಾ!


ಶ್ವೇತ ಮೋಡಗಳ ಮೇಲಿನ ಪ್ರೀತಿಯಿಂದಲೋ
ಕೃಷ್ಣ ಮೋಡಗಳ ಮೇಲಿನ ವೈರದಿಂದಲೋ
ಗಗನಕೆ ಹಾರುತಿರುವೆ ಹಕ್ಕಿಯ ನೀವು ನೋಡಿದಿರಾ!


ರವಿಯ ಕಿರಣಗಳ ಬೆಂದು ಹಾಹಾ ಕಾರದಿಂದಲೋ
ಚಂದ್ರಮುಖಿಯ ಸೌಂದರ್ಯಕ್ಕೆ ಮಾರುಹೋಗಿಯೋ
ಗಗನಕೆ ಹಾರುತಿರುವ ಹಕ್ಕಿಯ ನೀವು ನೋಡಿದಿರಾ!

||ಚಂದ್ರಮುಖಿ||


ಚಂದ್ರಮುಖಿಯ ಬರುವಿಕೆಗಾಗಿ
ನೈದಿಲೆಯೊಂದು ಕಾತರಿಸುತ್ತಿದೆ
ಪ್ರೇಮದ ತಂಗಾಳಿಯ ಹೊತ್ತು
ಬಾರೆಯಾ ನಿನಗಾಗಿ ಪರಿತಪಿಸುತ್ತಿರುವೆ
ಕಾರ್ಮೋಡಗಳು ಹನಿಹನಿಯ ನೀರು
ಸುರಿಸುವೆಯೆಂದು
ಬಾಯಾರಿದ ಭೂಮಿಯ ಹಾಗೆ
ಕಾತರದಿ ಹೃದಯ ಹಿಗ್ಗುತ್ತಿದೆ
ನಿನ್ನ ಪ್ರೀತಿಯ ಹನಿಜೇನಿಗಾಗಿ.
--------------------------------------

||ದ್ವಂದ್ವ ||

ಕತ್ತಲ್ಲಲೆಲ್ಲೋ ಹುಡುಕುತ್ತಿದ್ದೆ
ನನ್ನ ಕನಸನ್ನ, ಜೀವನವನ್ನ .....
ಅರೆರೆ! ಈ ಮಿಂಚುಹುಳ .......
ಬೆಳಕ ಚಿಮುತ್ತಾ, ಕತ್ತಲ ಸೀಳುತ್ತಾ,....
ಎಲ್ಲೆಲ್ಲೋ ಹೊರಟಿದ್ದು, ನನ್ನ ಏಕೆ ಸೆಳೆದಿದೆ?
ಎಲ್ಲಿ ಹೋದವು ನನ್ನ ಕನಸು, ಜೀವನ?

ಹೇ...! ನನ್ನ ಮನಸ್ಸನ್ನೇಕೆ ಸೆಳೆದ ಎನ್ನುವ
ಹೊತ್ತಿಗಾಗಲೇ ದೃಷ್ಟಿಯಿಂದಲೇ ಪರಾರಿ
ಅನಾಥ ಬೇತಾಳಗಳಾಗಿ ಅದರ ಸೆಳೆತಕ್ಕೆ ಒಳಗಾಗಿದ್ದ
ಕನಸು, ಜೀವನ ಮತ್ತೆ ಕತ್ತಲಲ್ಲಿ ಅಲೆವಂತಾಯಿತು.

ಹೋ...! ಅನೈತಿಕತೆಗೆ ಸೆಳೆತ ಹೆಚ್ಚೇಕೆ?
ಮಧುರತೆಯಿರುವುದು ಶಾಂತತೆಗೆ ಹೊರತು ಸುಳ್ಳಿಗಲ್ಲ.
ಜನರ ಪರೀಕ್ಷೆಲೋಸುಗವೇ ಸರಿ?
ಅನೈತಿಕತೆಯೆಂದರೆ ಸಾವೇ ಅಲ್ಲವೇ?
ಸಾವನ್ನಪ್ಪುವರು ಹೇಡಿ, ಮೂರ್ಖರೇ ಅಲ್ಲವೇ?
ಧೈರ್ಯವೇ ಸಾಧನೆಯ ಮೊದಲ ಹೆಜ್ಜೆ........

||ಬಾಲೆ||

ಏಕೆ ನಿಂತಿಹಳೋ ಬಾಲೆ
ಅನವರತ ಬಾಗಿಲಲಿ
ಯಾರಿಗೋ ಕಾಯುತಿಹಳು
ಪಥಿಕ ನಾ ಕಾಣೆ ೧
ತರುಣ ತಾವರೆಯಂತೆ
ಬಾಗಿಹಳು ಬಾಗಿಲಿಗೆ
ತುಟಿಯಂಚಿನ ನಗುವು
ಬಿರಿದ ತಾವರೆಯಂತೆ ೨

ನೆಟ್ಟ ದೃಷ್ಟಿಯು ಏಕೋ
ಪುಟಿಯುತಿದೆ ಚಿಟ್ಟೆಯಂತೆ
ಇನಿಯನಾ ಕಂಡು ಮೋಡದ
ಹಿಂಬದಿಗೆ ಚಂದ್ರಮುಖಿ
ಜಾರಿದಂತೆ ಜಾರುತಿಹಳು
...ಕವಿಯಾ ಕಂಡು
ಕೋಲ್ಮಿಚಿನಂತೆ ಬಾಗಿಲ
ಹಿಂದೆ ಮರೆಯಾದಳು .....೩

ಧಾತ್ರಿ


ಆದಿಯಲಿ ಪೆಳ್ವೆ ಧಾರುಣೆಯ
ಸಹಜ ಸೊಬಗ
ಹೇಳಿಕೆಯ ಮಾತಲ್ಲ ಆಲಿಸದೆ
ಪರಿತಪಿಸದಿರು ನಿಸರ್ಗಪ್ರಿಯ ೧


ಎನ್ನ ಧಾತ್ರಿಯು ಬಹು
ಸೌಂಧರ್ಯವತಿಯ
ಎಂದು ಪೇಳಿಪರು ಪೂಜಿಪರು ಋಷಿವರ್ಯರು
ಹಿಂದೆ ಈ ಮಾತು ಸುಳ್ಳಲ್ಲ ನಿಸರ್ಗಪ್ರಿಯ೨


ನವ ಜವ್ವನದ ತರುಣಿ
ತರುಲತೆಗಳ ಅಂಗಸ್ಮಿತೆ
ಹರೆಯ ಮುಗಿಯದು ಈಕೆಗೆ
ಸತತ ಜವ್ವನೆ ನಿಸರ್ಗಪ್ರಿಯ೩


ಹರಿಯ ಪ್ರೀತಿಯ ಅಂಗನೆಯೀಕೆ
ಧುರುಳ ಹಿರಣ್ಯಕ ಮನಸೋತ
ಧಾತ್ರಿಯ ಸೌಂದರ್ಯಕೆ
ವರಾಹ ರಕ್ಷಿಪ ಧಾತ್ರಿ ನಿಸರ್ಗಪ್ರಿಯ ೪


ಹಗಲು-ಇರುಳು ಕಾಯ್ವರು
ಸೂರ್ಯ-ಚಂದ್ರರು
ಸೃಷ್ಠಿಯ ಜೀವಕೋಟಿಗೆ
ಕಾರಣನು ನೇಸರು ನಿಸರ್ಗಪ್ರಿಯ ೫


ಧಾರುಣಿಯ ಹೃದಯ ವೀ ಹಿಮಾನಿ
ಮನಃ ಕಠಿಣ ವೀ ಪರ್ವತ ವರ್ಷಿಣಿ
ಮಾತೃತ್ವವೇ ಈ ಜಲದಿ ಕಾನನ
ಮಾತೃ ಅಧಿದೇವತೆ ಧಾತ್ರಿ ನಿಸರ್ಗಪ್ರಿಯ ೬


ವನ್ಯಂಗಗಳು ಹಲವು
ಪೋಷಿಸುವುವು
ಕಾಲ ಅಂತ್ಯವೆಡೆಗೆ ಸರಿಯೆ
ನವನವ ವಸಂತಗಳು ಧಾತ್ರಿಗೆ ನಿಸರ್ಗಪ್ರಿಯ೭


ತರುಲತೆಗಳು ತುಂಬಿಹುದು ಕಾನನದಿ
ತಂಪೆರೆಯಲು ಬಳುಕಿಹಳು ಗಂಗೆ ಕಾವೇರಿ
ಪುಟ ಪುಟನೆ ನೆಗೆಯುತ್ತಿಹವು ಪಾತರಗಿತ್ತಿ
ಪುಷ್ಪಗಳ ಚೆಲುವು ಧಾರುಣಿಯ ನಗುವು ನಿಸರ್ಗಪ್ರಿಯ ೮


ನವ ಚೈತ್ರಗಳು ಉರುಳುರುಳಿ ಹೋದವು
ಜೀವಕೋಟಿಗಳು ಬಂದು ಬಂದು ಹೋದವು
ಧಾರುಣಿಯು ಧಾರುಣಿಯೇ
ಕೊರತೆಯಿಲ್ಲ ಜವ್ವನದ ಧಾತ್ರಿಗೆ ನಿಸರ್ಗಪ್ರಿಯ ೯


ಕೋಗಿಲೆಗಳು ಪೇಳುವುವು
ಧಾರುಣಿಯ ಚೆಲವು ಶ್ರೀಗಂಧವು ಪಸರಿಪುದು ಸ್ನೇಹವ
ಮತ್ತೆಲ್ಲೂ ಕಾಣೆ ಈ ಧಾತ್ರಿ ನಿಸರ್ಗಪ್ರಿಯ ೧೦


ಧಾರುಣಿಯ ಸುತರೊಳ್
ಅತಿ ಮತ್ತ ಈ ಮನುಜ
ಪ್ರಾಣಿಗಳೊಳ್ "ಅತಿಪ್ರಾಜ್ನ" ಬಿರುದಾಂಕಿತ
ಸೂರೆಗೊಳ್ಳುತ್ತಿಹನು ಧಾತ್ರಿಯ ಸೊಬಗ ನಿಸರ್ಗಪ್ರಿಯ ೧೧


ಮನವ ಹಿಗ್ಗಿಸಿ ಹಾಡಲಿಲ್ಲ
ಕೋಗಿಲೆಗಳಂತೆ
ಕುಣಿಯಲಿಲ್ಲ ಪುಟ ಪುಟನೆ ಪಾತರಗಿತ್ತಿಯಂತೆ
ಧಾರುಣಿಯ ಕಣ್ಣೀರೆ ಗಂಗಾ ಕಾವೇರಿ ನಿಸರ್ಗಪ್ರಿಯ ೧೨


ಕಾಂಕ್ರೀಟ್ ಕಾಡುಗಳು ತುಂಬಿಹುದು
ಎಲ್ಲೆಲ್ಲೂ ದುರುಳ ಮನುಜ
ಮನುಜವಿದ್ದೆಡೆ ತೃಣವೂ ಬೆಳೆಯಲೊಲ್ಲದು
ಬಿರುದಾಂಕಿತರೀ ನಡೆ ವಿನಾಶದೆಡೆಗೆ ಧಾತ್ರಿ ನಿಸರ್ಗಪ್ರಿಯ ೧೩

ಕಿವಿ ಚಿಟ್ಟೆನ್ನುವ ಸಪ್ಪಳ
ನೊರೆ ಉಕ್ಕುವ ಕಶ್ಮಲ
ಅಲ್ಲೋಲ ಕಲ್ಲೋಲ ವೀ ಧರೆ
ರಕ್ಷಿಪನಾರೀ ಧಾತ್ರಿಯ ನಿಸರ್ಗಪ್ರಿಯ ೧೪

ಸಹಿಸಲೊಲ್ಲರು ತರುವ ಕಂಡು
ಹಿಡಿಯುವರು ಮಚ್ಚು ಕುಡಿಗೊಲು
ಮತಿ ಭ್ರಷ್ಟರೀ ಮನುಜರು
ಇನ್ನೇಲ್ಲಿ ಜವ್ವನ ಧಾತ್ರಿಗೆ ನಿಸರ್ಗಪ್ರಿಯ ೧೫


ನಿಜಸುತನೊಬ್ಬ ಬಿಕ್ಕಳಿಸುತಲೀ
ಪೇಳ್ದ ಧಾರುಣಿಯೂ ಪಾಠಿ
ಹೀಗೇಕೆ ಈ ಪರಿ

ಮಾತೃಜಗೆ ಮತಿಯಿಟ್ಟು ಕಾಯೋ ನಿಸರ್ಗಪ್ರಿಯ ೧೬


ಹೀಗೇಯೇ ಕಾಲವು ಕಳೆಯೆ
ಸವಕಲಾಗುವಳು ಧಾತ್ರಿ
ಪ್ರಳಯವೂ ಖಾತ್ರಿ
ಮನುಜಗೆ ಮತಿ ಬೀಜವ ಬಿತ್ತು ನಿಸರ್ಗಪ್ರಿಯ ೧೭


ಈ ಮಾತು ಸುಳ್ಳಲ್ಲ
ಕಾಗೆಯು ಬಿಳಿಯಲ್ಲ
ಈ ಪರಿ ಕಾಗೆಯು ಬಿಳಿಯಹುದು
ಸತ್ಯವ ಕಾಯೋ ನಿಸರ್ಗಪ್ರಿಯ ೧೮


ಬಳಕುತ್ತಿದ್ದ ಧಾತ್ರಿ
ಕುಂಟುತ್ತಿಹಳೀಗ
ರೋದಿಸುತ್ತಿರುವ ಜೀವಕೋಟಿಯ
ಕೈ ಹಿಡಿದು ಉದ್ಧರಿಸು ನಿಸರ್ಗಪ್ರಿಯ ೧೯


ಮೇಲ್ಮಾತು ಸುಳ್ಳಾಗಲಿ
ಕುಂಟಿಯಲ್ಲ ವೀ ಧಾತ್ರಿ
ಬಳುಕುವ ಜವ್ವನದ ಭಾಲ
ನಿಜವಾಗಲಿ ಮಾತು ಸಜ್ಜನಕೆ ಧಾತ್ರಿ ನಿಸರ್ಗಪ್ರಿಯ ೨೦
--------------------------------------

||ಸಾಧನೆಯ ಹೆಜ್ಜೆ||

ನಾವೇನೋ.......ನಾವು
ನಡೆದಂತೆ ದಿನಂಪ್ರತಿ
ನಾವೇ ನಾವು ಪ್ರತಿಕ್ಷಣ....ಯೋಚಿಸಿದಂತೆ
ಉತ್ತಮತ್ವದ ಶ್ರೇಣಿ
ಹೆಜ್ಜೆ ಹೆಜ್ಜೆ ಇಟ್ಟಂತೆ
ಸಾಧನೆಗೆ ಕೊನೆಯಿಲ್ಲ
ಹವ್ಯಾಸಕ್ಕೆ ಎಣೆಯಿಲ್ಲ
ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ ಮುಂದೆ ಸಾಗು........
__________________________________

||ಮನಸಿನ ಆಳ||

ಅಲ್ಲೇನು?..... ಇಲ್ಲೇನು?....
ಅದು ದೊಡ್ದದು!
ಇದು ದೊಡ್ದದು!
ಯಾವುದು ದೊಡ್ದದು?...
ಹಿಮಾಲಯದ ಎತ್ತರ!
ಸಮುದ್ರದ ಆಳ!.......
ಯಾವುದು ಚಿಕ್ಕದು?
ಇರುವೆ?.. ರಕ್ತದ ಕಣ?
ಪರಮಾಣುವಿನ ಅಣು.......ಯಾವುದು?
ಅಕಾಶಕ್ಕೂ ಎತ್ತರ..
ಸಮುದ್ರಕ್ಕೂ ಆಳ...
ನಮ್ಮೋಳಗಿನ ಮನದ ಹರವಿನ ಮುಂದೆ ಎಲ್ಲವೂ ಚಿಕ್ಕದು.
ನಿನ್ನೋಳಗಿನ ಅರಿವು ನಿನಗಾಗಲಿ
ಅದೇ ಈ ಜಗತ್ತಿನ ಮಹೋನ್ನತ ಜ್ಜಾನ
_______________

ಚುನಾವಣೆ

ಚುನಾವಣೆ ಬಂತು
ಚಿತಾವಣೆ ಬಂದೇ ಬಂತು
ಹೆಂಡ,ಹಣದ ಹೊಳೆ ಹರಿಯಲು ಶುರುವಾಯಿತು
ಆಕಾಶದಲ್ಲಿ ಕರಿ ಮೋಡಗಳಿಲ್ಲ
ಮಳೆಬರುವ ಲಕ್ಷಣಗಳಿಲ್ಲ
ಮೋಹದ ಬಲೆ ಎಲ್ಲೆಲ್ಲೂ ಹರಡಿದೆ
ಕೈಕಟ್ಟಿ ಕುಳಿತರೆ ಮತ್ತೈದು ವರ್ಷಕಾಯಬೇಕಿದೆ


ರಾಜಕಾರಣೀಗಳು ಸಿದ್ದರಾಗಿದ್ದಾರೆ ಹಣ,ಹೆಂಡ ಹಂಚಲು
ಮತ್ತೊಮ್ಮೆ ಜನ ಸಿದ್ದರಾಗಿದ್ದಾರೆ ಪಂಗನಾಮ ಹಾಕಿಸಿಕೊಳ್ಳಲು
ಮಾತಿಗೆ ತಲೆದೂಗುತ್ತಾರೆ
ಹೆಂಡಕ್ಕೆ ಮೈಮರೆಯುತ್ತಾರೆ
ಮತದ ಹಕ್ಕನ್ನು ಮಾರಾಟ ಮಾಡಿಕೊಳ್ಳುತ್ತಾರೆ
ನಶೆ ಇಳಿದಮೇಲೆ ಕೈ ಕೈ ಹಿಸುಕಿಕೊಳ್ಳುತ್ತಾರೆ
ಮತದಾರ ಪ್ರಭು ಮತ್ತೆ ಮತ್ತೆ ಮೋಸಹೋಗುತ್ತಾನೆ


ಉಪಯೋಗವಿಲ್ಲದ ಪಕ್ಷವೆಂದು
ಅಭ್ಯರ್ಥಿಗಳೆಲ್ಲಾ ಅಯೋಗ್ಯರೆಂದು
ಜನರ ಒಳಿತು ಯಾವ ಪಕ್ಷಕ್ಕೂ ಬೇಡವೆಂದು
ಅರಚುತ್ತಾ, ಕೆಸರೆರಚುತ್ತಾ ನೊಂದುಕೊಳ್ಳುತ್ತಾನೆ ಪ್ರಜೆ
ಕದ್ದು ಮುಚ್ಚಿ ಹಂಚುವ ಪಕ್ಷಗಳು
ಎಲ್ಲವೂ ಸಭ್ಯ ಪಕ್ಷಗಳೇ!
೧೨೫ ವರ್ಷದ ಪಕ್ಷ,ಕೋಮುವಾದಿ, ಜಾತ್ಯಾತೀತ ಪಕ್ಷ
ಹರುಕು ಮುರುಕು ಪಕ್ಷಗಳಿಗೆ ಗೊತ್ತಿದೆ ಜನರನ್ನು ಹೇಗೆ
ಕೊಂಡುಕೊಳ್ಳುವುದೆಂದು

ಸ್ವಾರ್ಥ ಸಾಧನೆ


ಮನದಲಿ ಏನೂ ಇಲ್ಲ
ಎಲ್ಲವೂ ಖಾಲಿ ಖಾಲಿ
ಕಣ್ಣು ಮುಚ್ಚಿದರೆ ಕತ್ತಲು
ಕಟ್ಟಿ ಹಾಕಿದೆ ಮುಂದೆ ಹೋಗದಿರಲು


ನೂರು ದಾರಿಗಳಿವೆ ಮುಂದೆ
ಯಾವುದನ್ನು ಆರಿಸಿಕೊಳ್ಳಲಿ ಪ್ರಶ್ನೆ ಮೊದಲಿದೆ
ನೂರು ಜನರು ಹೋಗುತಿಹರು ಮುಂದೆ
ಯಾರನ್ನು ಕರೆಯಲಿ ಕೈಹಿಡಿದು ನಡೆಸಿರೆಂದು


ನಾಮುಂದು ತಾಮುಂದು ಗೊಡವೆ ಇಲ್ಲಿ ತುಂಬಿದೆ
ಒಬ್ಬರ ಕಾಲು ಒಬ್ಬರು ಹಿಡಿದಿದ್ದಾರೆ ಮೇಲೇರುವನ ಕಾಲೆಳೆಯಲು
ಮತ್ತೇ ಕೆಲವರು ಕೆಸರೆರಚುತ್ತಿದ್ದಾರೆ ಮುಂದೆ ಹೋಗದಂತೆ
ಎಲ್ಲರೂ ನಿಂತಲ್ಲೇ ನಿಂತಿದ್ದೇವೆ ಅಧೋಗತಿಯ ಕಡೆಗೆ ಮುಖಮಾಡಿ


ರುದ್ರನರ್ತನ,ಅಟ್ಟಹಾಸ ಕಣ್ಣಮುಂದೆ ನಲಿದಿದೆ
ಏನು ಮಾಡಬೇಕೆಂದು ತೋಚದಾಗಿದೆ
ಕಾಲೆಳೆಯಬೇಕೆ?,ಕಾಲುಕೀಳಬೇಕೇ? ಮನದಲ್ಲಿ ಶೂನ್ಯ
ಗುಂಪಿನಲ್ಲ್ಲಿ ಗೋವಿಂದ-ಗುಂಪು ಹೋದ ಕಡೆ ನಾವು
-ಕುರಿಗಳು ನಾವು ಕುರಿಗಳು


ಎಲ್ಲವೂ ಸರಿಯಿಲ್ಲ, ಎಲ್ಲರೂ ಸರಿಯಲ್ಲ
ನಮ್ಮ ಮೂಗಿನ ನೇರಕ್ಕೆ
ನಾನು ಸರಿ, ನೀನು ಸರಿಯಿಲ್ಲ
ಎಲ್ಲವೂ ನಮ್ಮ ಸ್ವಾರ್ಥ ಸಾಧನೆಗೆ

ಗರಗಸ

ಗರಗಸ.. .. .. .. ಗರಗಸ
ಇವನು ನಮ್ಮ ಗರಗಸ
ಸನಿದಪ.. ಮಗರಿಸ
ಇವನು ನಮ್ಮ ಗರಗಸ


ಇವನು ನಮ್ಮ ಗರಗಸ
ಇವನ ಕೈಗೆ ನಾವು ಸಿಕ್ಕರೆ ಮಗರಿಸ
ಮಗರಿಸ ಗರಗಸ
ಗರಗಸ ಮಗರಿಸ


ಬಾಯಿಬಿಟ್ಟರೆ ನಮಗೆಲ್ಲಾ ಭಯ ಭಯ
ಎದುರುಗಿದ್ದವ ಹರೋಹರ
ಮೆಧುಳಿಗೇ ಕೈ ಹಾಕುವ
ಮಾತಿನಲ್ಲೇ ಭೋರುಗೊಳಿಸುವ

ಗರಗಸ.. .. ಗರಗಸ
ಇವನು ನಮ್ಮ ಗರಗಸ
ಸನಿದಪ ಮಗರಿಸ
ನಿನ್ನ ಜುಟ್ಟು ಎಗರಿಸ

ಕನಸು


ಕನಸಿಲ್ಲದೆ ಏನೂ ಆಗೋದಿಲ್ಲ್ಲಾ
ಕನಸೇ ಜೀವನದ ಮೊದಲ ಹೆಜ್ಜೆಯೆಲ್ಲಾ
ಕನಸಿಲ್ಲದ ಜೀವಕ್ಕೆ ಎಲ್ಲಿದೆ ಸುಖ?
ಕನಸು ತುಂಬಿದ ಜೀವಕ್ಕೆ ಇಲ್ಲಿಲ್ಲ ದುಃಖ


ಕನಸು ಯಾವುದೆಂದು ಹೇಳು ಗೆಳೆಯ?
ಕತ್ತಲಾದ ಮೇಲೆ ಮಧುರ ನಿದ್ದೆ ತರಿಸುವ ಆ ಭ್ರಮೆಯೇ?!
ನಾಳೆ ನಾಳೆ ಎಂದು ಸಿಗದ ಉತ್ತರವೇನು?
ಕೈಯಲ್ಲಿ ಶಕ್ತಿಯಿದ್ದರೂ ಯಾರೋ ದಯಪಾಲಿಸುವರೆಂದು
ಕಾಯುವುದು ಕನಸೇ?


ನಾಳೆ ನಾನು ಹೀಗಾಗಬೇಕು
ನಾಳೆ ನನ್ನ ಬಳಿ ಮನೆ-ಕಾರು-ಬಂಗಲೆ ಇರಬೇಕೆಂಬುದು ಕನಸೇ?
ರಾತ್ರಿ ಮಲಗಿದರೆ ತಂಪು ನಿದ್ದೆ ತರಿಸುವ ತಂಗಾಳಿಯೇ?
ವಾಸ್ತವತೆಗೆ ಎಟುಕದ ಗಗನ ಕುಸುಮವೇ ಕನಸು?


ಕಾಯುವುದು ಬೇಕೇ ಬೇಕು
ಕಾಯದೇ ಬರುವುದು ಈ ಜಗದಲಿ ಯಾವುದು?
ಕಾಯುವಿಕೆಯ ಕಾತುರತೆಯೇ ಸ್ವರ್ಗ ತಿಳಿದಿದೆಯೇ?
ಕನಸಿಗಾಗಿ ಕಾತರಿಸಬೇಕು, ಕನಸಿಗಾಗಿ ನಿದ್ದೆಗೆಡಬೇಕು

ಕನಸು ಕನಸೆಂದು ಕನಸು ಕಾಣುತ್ತಿದ್ದೇನೆ
ಕನಸು ನನಸಾಗಿಸುವ ನನ್ನ ದುಡಿಮೆಯೇನು?
ಪ್ರಯತ್ನದ ದಾರಿ ಮರೆತುಹೋಗಿದೆ
ದಾರಿ ಕಾಣದೆ ಕನಸು ಕನಸೆಂದು ಪರಿತಪಿಸುತ್ತಿದ್ದೇನೆ!

ಕನಸು ಯಾವುದು?
ಕನಸು ಯಾವುದು?
ನಿದ್ದೆಗೆ ಜಾರದಂತೆ ಮಾಡಿ ಕಾರ್ಯತತ್ಪರನ್ನನ್ನಾಗಿಸುವ
ಆ ಚೈತನ್ಯವೇ ಕನಸು

ನಿರಾಸೆ

ನೂರು ಕನಸಿದೆ
ಒಂದು ಮನಸಿದೆ
ಕನಸು ಒಡೆಯುವುದಕ್ಕೆ ಕಾರಣವಿದೆ
ಚಿಗುರಿದ ಕನಸು ಬೆಳೆಯುವಮುನ್ನವೇ ಮುರುಟಿದೆ


ಆಸೆಯಿದೆ
ಸಾಧಿಸುವ ಛಲವಿದೆ
ಆಸೆಯು ನುಚ್ಚುನೂರಾಗುವುದಕ್ಕೆ ಸಂಚುನಡೆದಿದೆ
ಚಿಗುರಿದ ಆಸೆ ಬತ್ತುವುದಕ್ಕೆ ಮನದಲ್ಲಿ ಗೊಂದಲವಿದೆ


ಹಲವು ದಾರಿಯಿದೆ
ಸರಿಯಾವುದೆಂದು ತಿಳಿದಿದೆ
ಮುಂದೆಹೋಗುವ ಇರಾದೆ ಖಂಡಿತವಾಗಿಯೂ ಉಳಿದಿದೆ
ಮನದಲ್ಲಿ ದ್ವಂದ್ವದ ಘರ್ಷಣೆ ಹೆಚ್ಚಾಗುವ ಸೂಚನೆ ದೊರೆತಿದೆ


ಯೋಚನೆಯಿದೆ
ಮನಸ್ಸಿನ ಶಕ್ತಿ ತಿನ್ನುತ್ತಿದೆ
ಇಂದು-ನಾಳೆ ತೂಗುಯ್ಯಾಲೆಯಲ್ಲಿ ತೊಳಲುತ್ತಿದೆ
ಕಾರ್ಯಪ್ರವೃತ್ತನಾಗದೆ ಕೆಲಸವಾಗದೆಂದು ಅರ್ಥವಾಗಿದೆ


ಇಂದಾಗಬೇಕು
ತೊಂದರೆಯಿಲ್ಲ ನಾಳೆಯಾದರೂ..
ಮರೆತು ನಾಳೆ..ನಾಳೆ ಮುಂದೆ ಮುಂದೆ ಹೋಗಬಾರದು
ಹೋಗುತಲಿರಲು ಸುಮ್ಮನೆ ನೋಡುತ್ತಾ ಕುಳಿತರೆ ಕಾದಿದೆ ನಿರಾಸೆ

ಅವನ ಹೆಸರು


ನಿದ್ದೆ ಆವರಿಸಿದೆ
ನಿದ್ರಾದೇವತೆ ಅವನ ಬಿಟ್ಟು ಹೋಗಳು
ಮುಗ್ದತೆಯೆ ಮೈ ತುಂಬಾ ಹೊಕ್ಕಿದೆ
ಕಣ್ಣು ಬಿಟ್ಟರೆ ನಗುವೇ ಆವರಿಸುತ್ತೆ
ಹಸಿವಾದರೇ ಅಳುವಿನ ಗಣಗಳು ರುದ್ರನರ್ತನ
ಹೊಟ್ಟೆ ತುಂಬಿದರೆ ಯಾವ ಚಿಂತೆಯೂ ಇಲ್ಲ
ಮಾತಿಲ್ಲ ಆದರೇ ಮೌನದಲೇ ಶಬ್ದ ತರಂಗಗಳು
ಸಂಗೀತದ ಅಲೆಗಳು ತೇಲುತ್ತಿವೆ
ಸಾವಿರ ಕಣ್ಣುಗಳ ಗಮನ ಅವನ ಮೇಲೆ
ನಿದ್ದೆಯಿಂದ ಏಳಬಾರದೇ
ಎಲ್ಲ ಮನಗಳ ಆಶಯ
ಅಳುವು ಶುರುವಾದರೆ ಎಲ್ಲರೂ ಮಾಯ
ನಗುವು ತೇಲಿ ಬಂದರೆ ಎಲ್ಲರೂ ಹಾರಿಬರುವರು
ಎಲ್ಲರ ಬಾಯಲ್ಲೂ ಅವನೇ
ಎಲ್ಲರಲ್ಲೂ ಯೋಚನೆ ಅವನ ಹೆಸರೇನೆಂದು?
ಅ-ಅಸಾಮಾನ್ಯ
ನೀ-ನಿಧಾನವೇ ಪ್ರಧಾನವೆನ್ನುವವ
ಶ್-ಶಕ್ತ- ಎಲ್ಲವನ್ನೂ ಸಾಧಿಸುವ ಶಕ್ತಿಯುಳ್ಳವ
ಮುದ್ದು ಮುಖದವ
ನಮ್ಮ ಸುಖವನ್ನು ತನ್ನ ನಗುವಿನಿಂದಲೇ ತರುವವ
ನಮ್ಮ ನಿಮ್ಮವ ಅನೀಶ್.

ಅವಳ ಕಣ್ಣೋಟ

ಬೆಳಿಗ್ಗೆ ಕೆಲಸವಿತ್ತು,
ಬ್ಯಾಂಕಿಗೆ ಹೋದೆ ಹಣ ಕಟ್ಟಲು,ಡಿ.ಡಿ ತರಲು.
ಬ್ಯಾಂಕ್ ಅಂದರೆ ಒಂದು ತರಾ ಅಲರ್ಜಿಯಾಗುತ್ತೆ
ಅಲ್ಲಿನ ಜನ ನಮ್ಮ ಸಮಯವನ್ನು ತಿಂದುಬಿಡುತ್ತಾರೆ
ಕಮೀಷನ್ ಕೊಟ್ಟು ನಮ್ಮ ಸಮಯವನ್ನು ವ್ಯರ್ಥಮಾಡಿಕೊಳ್ಳಬೇಕಲ್ಲಿ
ಜನರೂ ಹಾಗೆಯೇ ಇದ್ದಾರೆ ಬಿಡಿ!
ಅಲ್ಲಿನ Sಟiಠಿ ನಲ್ಲಿ ಎಲ್ಲವನ್ನೂ ಬರೆದು ಡಿ.ಡಿಗೆ ಕಮೀಷನ್
ಕೇಳಲು ಅಲ್ಲಿದ್ದ ವನಿತೆಯನ್ನು ಕೇಳಿದೆ
ಬೊಗಸೆ ಕಂಗಳ ಯುವತೆ ನಗುತ್ತಾ ‘ಏನು ಬೇಕು ಸಾರ್’
ಎಂದಳು ಆಕೆಯ ಕಣ್ಣುಗಳು ಬಲು ಸುಂದರವಾಗಿತ್ತು ಹಾಗೇ ಕಣ್ಣುಗಳ ಮಿಂಚು, ತುಟಿಯಲ್ಲಿ ನಗು ಖುಷಿಕೊಟ್ಟಿತು.
ಸದಾ ಮುಖಗಂಟಿಕ್ಕಿ, ತಮ್ಮ account ನಿಂದಲೇ ದುಡ್ಡು
ಕೊಡುತ್ತಿದ್ದೇವೆಂಬ ನಂಬಿಕೆಯಿಂದ ,ಕೊಡಬೇಕಲ್ಲಾ ಎಂದು
ಕೊಡುತ್ತಾ ದುಡ್ಡು ತೆಗೆದುಕೊಳ್ಳುವವರಲ್ಲೂ ಅದೇ ವಾತಾವರಣವನ್ನು ಬಿತ್ತುತ್ತಿದ್ದರು.
ಇಂದು ವಾತಾವರಣೆವೇ ಬೇರೆ ಎನಿಸಿತು
ಅವಳ ಕಣ್ಣೋಟ, ಮುಗುಳು ನಗು ಅಲ್ಲಿನ ವಾತಾವರಣವೇ ಬದಲಾಯಿಸಿತ್ತು, ಹೆಣ್ಣಿನ ಮುಗುಳು ನಗೆಗೆ ಎಷ್ಟು ಶಕ್ತಿಯಿದೆಯವೇ! ಅದಕ್ಕೆ ಹೇಳುವುದು ‘ಹೆಣ್ಣು ಮನೆಯ ಬೆಳಕು’
ಎಂದು ಸತ್ಯದ ಅರಿವು ನನಗಂತೂ ಅಯಿತು.
ನನ್ನ ಕೆಲಸವೂ ಅಷ್ಟೇ ಸಲೀಸಾಗಿ ಆಯಿತು.
ಆದರೂ ಬ್ಯಾಂಕಿನ ಜನ ‘commission’ ತೆಗೆದುಕೊಂಡು
ನಮ್ಮ ಸಮಯವನ್ನು ತಿನ್ನುತ್ತಾರೆ.
ಅವಳ ಕಣ್ಣೋಟಕ್ಕೆ, ಮುಗುಳು ನಗೆಗೆ ‘ಧನ್ಯವಾದಗಳು’

ನೆಮ್ಮದಿ ಕಾಣಿಸದ ಹಣ

ನೆಮ್ಮದಿ ಕೊಡದ ಆಸ್ತಿ ಏಕೆ?
ಎಂದಾದರೂ ಪ್ರಶ್ನಿಸಿಕೊಂಡಿದ್ದೀರ?
ಕೈಗೆಟುಕುವಷ್ಟೇ ನಿಮಗೆ ದಕ್ಕುವುದು
ಅತಿಯಾದದ್ದು ಕಸವೇ ಅಲ್ಲವೇ?


ನೂರು-ಸಾವಿರ ಜನರ ದಂಡು ಹೋಗುತಿದೆ
ಹಣದ ದಾರಿಯಲ್ಲಿ ಹಣದ ಹಿಂದೆ
ಹಣವೆಂಬ ಮೋಹಿನಿ ವೈಯ್ಯಾರದಿ ಬಳುಕುತ್ತಾ ಸಾಗಿದೆ
ಎಲ್ಲರನ್ನೂ ಮರುಳುಗೊಳಿಸಿ


ಮಾತಿಲ್ಲ, ಕತೆಯಿಲ್ಲ ಹಣವಿದ್ದರೆ ಹತ್ತಿರ
ನಿಮ್ಮ ನೀವು ಮರೆತು ದುಡಿದು ಕೂಡಿಡುವಿರಿ ಹಣ
ಚಂಚಲೆ ಹಣ ಇವತ್ತು ನಿಮ್ಮ ಹತ್ತಿರ ನಾಳೆ ಯಾರೋ!
ಗೊತ್ತಿದೆ ಜನಕ್ಕೆ ಹಣ ಇರುವುದಿಲ್ಲ ಹತ್ತಿರ ಆದರೂ ಬೇಕು


ಕೈಕೊಟ್ಟ ಪ್ರೇಯಸಿಯಂತೆ ಹಣ
ಕೈ ಜಾರಿ ಹೋದಾಗ ಆಗುವುದು ಚಿಂತೆ
ಮತ್ತೆ ಹುಡುಕಾಟ ಹಣವ ಪಡೆಯಲು
ಈ ಲೋಕಕ್ಕೆ ಹಣದ ಹುಚ್ಚು ಹಿಡಿದಿದೆ


ಏನೂ ಬೇಡ ಹಣವನ್ನು ಪಡೆದರಷ್ಟೇ ಸಾಕು
ಹಣ ಹಣವೆಂದು ಬಡಿದಾಡಿ ಸಾಯುವರು ಏಕೋ?
ಹಣದ ವ್ಯಾಮೋಹ ಯಾರನೂ ಬಿಟ್ಟಿಲ್ಲ
ಹಣ ಹಣವೆಂದು ಹೆಣವಾಗುವರೆಗೂ ಬಿಡರು

ಅವನ ಪತ್ರ

ಅವನ ಪತ್ರ ನನ್ನ ಮುಂದಿದೆ
ಹೃದಯ ಭಾರವಾಗಿದೆ ಮಾತು ಹೊರಡದೆ\

ಕಣ್ಣಲ್ಲಿ ನೀರು ಸುರಿಯುತಿದೆ
ಅವನ ಧೈರ್ಯವ ಮನದಲ್ಲೇ ನೆನೆಯುತಿದೆ\\

ನಾವು ಇಲ್ಲಿ ಹಬ್ಬ,ರಜೆಯೆಂದು ಕಾಲಕಳೆಯುತ್ತೇವೆ
ನಮ್ಮ ಸ್ವಾತಂತ್ರವೆಂದು ದೇಶವನ್ನು ಜರಿಯುತ್ತೇವೆ
ತೆರಿಗೆ ಕಟ್ಟದೆ ವಂಚಿಸುತ್ತೇವೆ
ದೇಶ ನಮಗೇನು ಮಾಡಿದೆಯೆಂದು ಪ್ರಶ್ನಿಸುತ್ತೇವೆ\\


ನೀನು ಅಲ್ಲಿ ಕೊರೆಯುವ ಚಳಿಯಲ್ಲಿ ಏಕಾಂಗಿ
ರಾತ್ರಿಯ ನಿದ್ದೆಯನ್ನೂ ಲೆಕ್ಕಿಸದೆ ಕಾಯುತ್ತಿದ್ದೀಯ
ಕಣ್ಣ ಮುಂದೆ ಬಿಳಿಯ ಹಿಮಾಲಯ ಪರ್ವತ
ಮನಸಿನಲ್ಲಿ ವಜ್ರದಂತ ಕಠಿಣ ದೇಶಪ್ರೇಮ\\


ಸದಾ ಮೆಟ್ಟಿನಿಲ್ಲು ಎಂದು ಸಾರುವ ಹಿಮಾಲಯ
ಧೈರ್ಯಕ್ಕೆ ಸವಾಲೆಸೆದು ನಮಗೆಲ್ಲರಿಗೂ
ಮಾಹಾಗೊಡೆಯಂತಿರುವ ನಮ್ಮ ಸೈನಿಕರು
ಆದರೆ ನಮಗೆ ಇರುವೆಯಷ್ಟೂ ದೇಶಪ್ರೇಮವಿಲ್ಲವೇಕೋ?\\


ಕೈಲಾಗದವರಿಗೆ ಸಹಾಯಮಾಡಲಾರದವರು
ದೇಶಕ್ಕಾಗಿ ಒಂದು ನಿಮಿಷವೂ ವ್ಯಯಮಾಡದವರು
ಸ್ವಾತಂತ್ರದ ಸ್ವೇಚ್ಛೆಯನ್ನು ಅನುಭವಿಸುತ್ತಿರುವ ಜಡರು
ನಿಮಗಾಗಿ ನಮ್ಮ ಹೃದಯವನ್ನು ಕಲ್ಲಾಗಿಸಿಕೊಂಡವರು\\


ಈಗಲೂ ಹೃದಯ ಜರ್ಝರಿತಗೊಳ್ಳುತ್ತೆ
ಯಾವುದೇ ಯೋಧ ದೇಶಕ್ಕಾಗಿ ಪ್ರಾಣತೆತ್ತರೆ
ನೋವಾಗುತ್ತೆ ನಾನು ಯಾವಾಗ ಹೀಗೆ ತ್ಯಾಗಮಾಡುವುದು
ಹೀನಾಯ ಸಾವುಬೇಡವೆನಗೆ ದೇಶಕ್ಕಾಗಿ ಈ ಪ್ರಾಣ ಮುಡಿಪು\\


ಅವನ ಪತ್ರ ಹೃದಯದಲ್ಲಿ ನಾಟ್ಟಿತ್ತು
ಪ್ರೀತಿ-ಪ್ರೇಮವೆಂದು ನಾವಿಲ್ಲಿ ಹೃದಯ ಶ್ಯೂನರಾಗುತ್ತಿದ್ದೇವೆ
ನಮಗಾಗಿ ಆ ಜೀವಗಳು ಹಗಲು-ರಾತ್ರಿಯೆನ್ನದೆ
ಶತೃಗಳ ಗುಂಡಿಗೆ ಎದೆಗೊಟ್ಟು ನಿಂತಿವೆ ಗಡಿಯಲ್ಲಿ\\


ಎಂಟುಗಂಟೆಯ ಕೆಲಸಕ್ಕೇ ನಮಗೆ ತಲೆನೋವು
ಇಪ್ಪತ್ನಾಕು ಗಂಟೆಯ ನಿನ್ನ ಕೆಲಸಕ್ಕೆ ಏನೆನ್ನಬೇಕು ಗೆಳೆಯ
ಕಿವಿಗೊಂದು ಮೊಬೈಲು,ಬೇಕು ಬೇಕಾದಾಗಲೆಲ್ಲಾ ಕಾಫಿ ನಮಗೆ
ಹೆಗಲಿಗೆ ರೈಫಲ್ಲು,ಬೇಕೆಂದಾಗ ಸಿಗದ ಕಾಫಿ ಎಂಥ ತ್ಯಾಗ ನಿನ್ನದು\\


ಗುಂಡಿನ ಸದ್ದೇ ನಿಮಗೆ ಸುಪ್ರಭಾತ
ಶತೃವಿನ ರಕ್ತವೇ ಮಹಾ ಮಜ್ಜನ
ಆರ್ಭಟವೇ ಗುಡುಗು ಮಿಂಚು
ಎದೆಯೊಳಗೆ ಗುಂಡುಹೊಕ್ಕಾಗಲೇ ವೀರ ಸ್ವರ್ಗ\\


ಪ್ರೀತಿಸಲು ಹೆಂಡತಿ, ಮಕ್ಕಳು, ತಂದೆ-ತಾಯಿ
ಎಲ್ಲರೂ ಇದ್ದರೂ ನೀನು ಅಕ್ಷರಸಹ ಸಂನ್ಯಾಸಿ
ವೀರ ಸಂನ್ಯಾಸಿ ದೇಶ ಸೇವಕ ನೀನು
ನಮಗೆ ದೇಶ ನೆನಪಿಗೆ ಬರುವುದೇ ಅಪರೂಪ\\


ನಮ್ಮ ಮೆರವಣಿಗೆ ಹೆಣಗಳ ನಡುವೆ ನಡೆಯುವುದು
ಮುಂದೆ ನಾವೂ ಹೆಣವಾಗುವರೇ ಅಲ್ಲವೇ!
ಆಕ್ರಂದನವೇ ನಮಗೆ ಇಲ್ಲಿ ಜೋಗುಳ
ದೇಶ ಮೆಟ್ಟುವ ಶತೃವ ಸಿಗಿಯುವ ತೋಳಗಳು\\


ನಿನ್ನ ಪತ್ರ ಎದುರಿಗಿದೆ
ಅಸಹಾಯಕನಾಗಿದ್ದೇನೆ ನಿನ್ನ ಬಿಂಬ ಮನದಲ್ಲಿದೆ
ನೀನು ಗೆಳೆಯನೆಂಬುದೇ ನನ್ನ ಹೆಗ್ಗಳಿಕೆ
ಇಂದೇ ಪ್ರತಿಜ್ಣೆ ಮಾಡಿದ್ದೇನೆ ನಿನಗಾಗಿಯೇ ನಾನಿದ್ದೇನೆ\\


ಹಬ್ಬದ ಸಡಗರ ಇಲ್ಲೆಲ್ಲಾ ತುಂಬಿದೆ
ನೀನು ಮಾತ್ರ ಅದೇ ವಸ್ತ್ರ,ಮಾಸಿದೆ
ನಿದ್ದೆ ಕಾಣದ ಕಣ್ಣುಗಳು
ನಿನಗಾಗಿ ಈ ಪತ್ರ ನನ್ನ ಹೃದಯದಿಂದ\\


ದೇವರ ಮನೆಯಲ್ಲಿ ದೇವರ ಚಿತ್ರವಿಲ್ಲ
ನಿನ್ನದೇ ಚಿತ್ರ ಮನೆಯಲ್ಲಿ, ಮನದಲ್ಲಿ
ನಿನ್ನದೇ ಹೆಸರಿನಲ್ಲಿ ಒಂದು ಆಶ್ರಮ
ಅಸಹಾಯಕರಿಗೆ ಒಂದು ನೆಲೆ ಕಲ್ಪಿಸಿದೆ\\


ನಿನ್ನ ಹುಟ್ಟು ಹಬ್ಬದ ದಿನ ನನಗೆ ಹಬ್ಬ
ರಾಜಕೀಯ ಪುಡಾರಿಗಳು ದೊಡ್ಡದಾಗಿ ಆಚರಿಸಿಕೊಳ್ಳುತ್ತಾರೆ
ದೇಶ ಸೇವೆಯ ಹೆಸರಿನಲ್ಲಿ ದೇಶ ಸೂರೆಗೈಯ್ಯುತ್ತಾರೆ
ಕೇಳುವವರಿಲ್ಲ ಅದೇ ಇಂದಿನ ಆದರ್ಶ\\


ನಿನ್ನ ತ್ಯಾಗ ಯಾರಿಗೂ ಬೇಡ ಇಲ್ಲಿ
ಗುಂಡಿನಿಂದ ತುಂಬಿದ ನಿನ್ನ ದೇಹ ಬಂದಾಗ
ನಾಟಕೀಯ ರಂಗವೇ ನೆರೆದಿತ್ತು
ಮರೆಯಾಗಿತ್ತು ದೇಶ ಪ್ರೇಮ ಚಿತೆಯ ಹೊಗೆಯಾರುವ ಮುನ್ನ\\

ಅಮ್ಮಾ ಕಾದಿಹೆನು

ಅಮ್ಮಾ ನಿನ್ನ ಕರುಣೆಗೆ ಕಾದಿಹೆನು
ಕರುಣದಿ ಬಂದು ಸಲಹಬಾರದೆ?
ಕಾಣುವೆ ಕಾಣುವೆನೆಂದು ಶಬರಿಯಂತೆ ಕಾದಿಹೆನು
ಕರುಣೆಯ ತೋರಬಾರದೆ?\\


ನೀನೇ ನನ್ನ ದೈವವೆಂದು
ಮನದಲಿ ನಿನ್ನ ಬಿಂಬವನೇ ನಿಲ್ಲಿಸಿಹೆನು
ನೀ ಬಾರದೆ, ಮನ ಕತ್ತಲಲ್ಲಿ ನಿಂದಿದೆ
ನಿನಗಾಗಿ ಕಾಯುತಿಹೆನು ಪೂಜೆಗೆ ಸಿದ್ದಗೊಳಿಸಿ\\


ನಿನ್ನ ಆಜ್ಣೆಗೆ ಕಾಯುತಿಹೆನು
ಸೇವೆಯ ಮಾಡುವ ತೆರದಲಿ
ಎಷ್ಟು ದಿವಸ ಕಾಯಬೇಕು ತಾಯೇ!
ವಯಸು ಮಾಗುತಿದೆ, ಶಕ್ತಿ ಕ್ಷೀಣಿಸುತಿದೆ\\


ನನ್ನ ಕೈಲಾಗುವ ಸೇವೆಗೆ ಸಿದ್ದನಿದ್ದೇನೆ
ಯೋಗ್ಯತೆಯಿಲ್ಲವೆಂದು ಕಾಲದೂಡುತ್ತಿರುವೆಯೋ?
ಮನವನ್ನು, ದೇಹವನ್ನು ಜಡತ್ವ ತಿನ್ನುವಮುನ್ನ
ನಿನಗರ್ಪಿಸುವೆ ಈ ಜೀವವ ಕಾಯದೆ ಮತ್ತೆ!\\


ನಿನ್ನ ಪ್ರೀತಿ,ಆಶೀರ್ವಾದ ಏಳಿಗೆಗೆ ಬೇಕಮ್ಮ
ನಿನಗಾಗಿಯೇ ಈ ಜೀವ ಕಾದಿದೆ
ನೀ ಕೊಟ್ಟ ಈ ಪ್ರಾಣ,ನಿನಗೇ ಮುಡಿಪಮ್ಮ
ಅಮ್ಮಾ ನನ್ನ ಬೆಳಕು ನೀನೇ, ಅಮ್ಮಾ ನಿನಗಾಗಿ ಕಾದಿಹೆನು\\

ಯಾರಲೂ ಹೇಳಿಲ್ಲ

ಯಾರಲೂ ಹೇಳಿಲ್ಲ ಮನದ ನೋವನು
ನೋವು ಯಾಕೋ ತಿಳಿದಿಲ್ಲ
ಪ್ರಶ್ನೆಗೆ ಉತ್ತರವಿನ್ನೂ ಸಿಕ್ಕಿಲ್ಲ\\


ಹಕ್ಕಿ ಹಾರುವಾಗ ಕುತೂಹಲ ಏನೋ!
ಹಾರಲಾರೆನೆಂದು ಮನಸಿನಲ್ಲಿ ಖಿನ್ನತೆ ಏಕೋ?
ನಾನು ಅವರಂತಲ್ಲವೆಂಬ ಬಿನ್ನತೆ ಏಕೋ?\\


ಹೃದಯದಲ್ಲಿ ನೋವಿದೆ ಏನೋ?
ಏನೆಂದು ತಿಳಿಯೆನು ಏಕೋ?
ಏನನ್ನೋ ಹುಡುಕುವ ತವಕವಿಂದೇಕೋ?\\


ನಾನು ಏನೆಂದು ಅರಿವಿಲ್ಲವೇಕೋ?
ಕಾಣದ ಶಕ್ತಿಯು ಸತಾಯಿಸುತಿದೇಕೋ?
ನಾನು ಕಾಣದ ಚೈತನ್ಯವೆಲ್ಲೋ?\\


ಮನಸು ದುಃಖಿಸುತಿದೆ ಕಾರಣ ತಿಳಿಯದೆ
ಉತ್ತರ ಸಿಗದೆ ದಾರಿ ಕಾಣದಾಗಿದೆ
ಪ್ರಶ್ನೆಗಳು ಕಾಡಿದೆ ನಿದ್ದೆಮಾಡದೆ\\


ಇಂದು ನಾಳೆ ವರುಷಗಳು ಉರುಳಿದೆ
ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ
ಮನಸಿನ ನೋವು ಉತ್ತರ ಕಾಣದೆ ಬತ್ತಿದೆ\\

ಬಯಕೆಯೆಂಬ ತೊರೆ

ನಾನಿಲ್ಲದೆ ಜಗವಿಲ್ಲ
ನಾನಿಲ್ಲದೆ ಚೈತನ್ಯವಿಲ್ಲ
ಎಲ್ಲರಲ್ಲೂ ಹರಿವೆ ಕಣ್ಣಿಗೆ ಕಾಣದೆ
ನನ್ನದೇ ಮಸಲತ್ತು ಯಾರನ್ನೂ ಬಿಡದೆ\\


ನನ್ನ ಅಣತಿಯಂತೆ ಎಲ್ಲವೂ
ನಾನೇ ಕಾರಣ ಎಲ್ಲಕೂ
ನಿದ್ದೆಯಲ್ಲಾ, ಎಚ್ಚರದಲ್ಲೂ
ಕಾಡುವೆ ಗುರಿಯ ತಲುಪುವರೆಗೂ\\


ಸಣ್ಣ ಸಣ್ಣ ತೊರೆಯು ನಾ
ಭೋರ್ಗರೆಯುವ ನದಿಯು ನಾ
ಕಣ್ಣ ಬೆಳಕು ನಾ
ನಡೆದಾಡಿಸುವ ಶಕ್ತಿಯು ನಾ\\


ನಾನಿಲ್ಲದೆ ನೀನಿಲ್ಲ
ನಿನ್ನೊಳು ಹರಿವ ಪ್ರೇಮಧಾರೆಯು ನಾ
ನಿನ್ನೊಳು ಹರಿವ ಕರುಣೆಯು ನಾ
ಜಂಗಮ ನಾನು\\


ಕಣ್ಣಲಿ ಹರಿಯುವ ನೀರು ನಾ
ನರನರಗಳಲಿ ಹರಿಯುವ ಚೈತನ್ಯ ನಾ
ನಿನ್ನಲಿ ಕಾಣುವ ಅರಿವು ನಾ
ನಿನ್ನಲಿರುವ ಆಶಾಕಿರಣ ನಾ\\

ಬತ್ತದ ತೊರೆಯು ನಾ
ಕಾಣದೆ ಹರಿಯುವ ಬಯಕೆಯು ನಾ
ಮೋಡವಾಗಿಸುವ ಶಕ್ತಿಯು ನಾ
ಮಳೆಯಾಗಿ ಹರಿಯುವ ತೊರೆಯು ನಾ\\


ಚಿಗುರೊಡೆಯುವ ಮೊಳಕೆಯು ನಾ
ಹೂವಾಗಿ ಹಣ್ಣಾಗುವ ಬಯಕೆಯು ನಾ
ಹೃದಯ ಹೃದಯಗಳಲಿ ಹರಿಯುವ ಪ್ರೇಮರಾಗವು ನಾ
ಕಾಲವ ಓಡಿಸುವ ಚಕ್ರವು ನಾ\\

ಪಾರ್ಕಿನ ಮರ

ನಾನು ಬೆಂಗಳೂರಿನ ಮೂಲೆಯೊಂದರ ಬಡಾವಣೆಯ
ಬಡ ಮರ, ನನ್ನ ಹೆಸರು ಅಶೋಕ
ಉದ್ದುದ್ದಕ್ಕೆ ಬೆಳೆದು ಮುಗಿಲಿಗೇರಿ ಮೋಡಗಳೊಡನೆ
ಸರಸವಾಡಿ ಮಳೆಯ ತರುವುದು ನನ್ನ ಕಾಯಕ
ಸದಾ ಜನರ ಸೇವಕ
ನಾನು ಹೆಚ್ಚಾಗಿ ಕಾಣಿಸಿಕೊಳ್ಳುವುದು ನಗರದ
ಸರ್ಕಾರಿ ಕಟ್ಟಡಗಳ ಬಳಿ ಇಲ್ಲವೇ ಇಂತಹ ಪಾರ್ಕಿನಲ್ಲಿ,
ಬಡಾವಣೆಯ ರಸ್ತೆ ಪಕ್ಕಗಳಲ್ಲಿ ಬೆಳೆಯುವುದಕ್ಕೂ ಜಾಗ
ಕೊಟ್ಟಿದ್ದಾರೆ ಬಿ.ಬಿ.ಎಂ.ಪಾಲಿಕೆಯವರು.
ನನ್ನದು ಅದೃಷ್ಟವೋ, ದುರಾದೃಷ್ಟವೋ ತಿಳಿಯೆ!
ನನಗೆ ವಯಸ್ಸು ಇಷ್ಟೇ ಎಂದು ಹೇಳಲು ಬರದು
ಏಕೆಂದರೆ ಬೆಳೆಸಿದವರೇ ಯಾವಾಗ ಕೊಡಲಿ ಪೆಟ್ಟು ನೀಡುತ್ತಾರೋ ತಿಳಿಯೆ? ಅಭಿವೃದ್ದಿಯ ನೆಪ ಸಾಕು ನನ್ನ ಕೊಲ್ಲಲು.
ನನಗೆ ಹಲವಾರು ಶತೃಗಳಿದ್ದಾರೆ,
ಕೆ.ಪಿ.ಟಿ.ಸಿ.ಎಲ್ ನವರು ನನಗೆ ಬಹು ತೊಂದರೆ ಕೊಡುತ್ತಾರೆ
ಎತ್ತರಕ್ಕೆ ಬೆಳೆದು ಮೋಡಗಳ ನಡುವೆ ಸರಸವಾಡುವದರೊಳಗೆ
ಬಂದು ನನ್ನನ್ನು ಕತ್ತರಿಸುತ್ತಾರೆ, ಅವರಿಂದ ನಾನಾಗಿಹೆನು ವಿರಹಿ.
ಈ ಪಾಲಿಕೆಯವರಿಗೆ ನಾನೇನು ಮಾಡಿರುವೆನೋ ತಿಳಿಯೆ ನನ್ನನ್ನು ವಿಧ್ಯುತ್ ತಂತಿಯ ಕೆಳಗೇ ಬೆಳೆಸುತ್ತಾರೆ. ಅವರ ಅವರ ದ್ವೇಷಕ್ಕೆ ಬಲಿಯಾಗುವವನು
ನಾನು ಹೇಗಿದೆ ವಿಚಿತ್ರ ನೋಡಿ!
ಮತ್ತೊಬ್ಬ ಶತೃವೆಂದರೆ ಬಡಾವಣೆಯ ಜನ ಹಾಗೂ ಬೀದಿ ನಾಯಿಗಳು
ನನ್ನ ಕಷ್ಟ ಯಾರಬಳಿ ಹೇಳಬೇಕು ನೀವೇ ಹೇಳಿ?
ಜನ ತಾವು ತಿಂದು ರಾತ್ರಿ ಕತ್ತಲಾದ ಮೇಲೆ ತಿಂದ ಕಸವೆಲ್ಲವನ್ನೂ ನನ್ನ ಮಡಿಲಿಗೆ ತಂದು ಸುರಿಯುತ್ತಾರೆ ಗಬ್ಬು ವಾಸನೆ ರಾತ್ರಿಯೆಲ್ಲಾ ನನಗೆ ನಿದ್ದೇ ಬರುವುದೇ ಇಲ್ಲ. ಇನ್ನೂ ಬೀದಿ ನಾಯಿಗಳ ಹಾವಳಿ ಅಪಾರ- ಅದೆಷ್ಟು ನಾಯಿಗಳು ಇಲ್ಲಿ ಜನರಿಗಿಂತ ನಾಯಿಗಳೇ ಹೆಚ್ಚು, ಪಾಲಿಕೆಯವರು ಕ್ಷಮಿಸಿ
ಇನ್ಫೋಸಿಸ್ ನವರು ನಿರ್ಮಲ ಬೆಂಗಳೂರು ಶೌಚಾಲಯವನ್ನು ಇಲ್ಲಿ ಕಟ್ಟಿಸಿಲ್ಲ ಹೀಗಾಗಿ ಜನ, ಬೀದಿ ನಾಯಿಗಳಿಗೆ ನನ್ನ ಬುಡವೇ ಶೌಚಾಲಯವಾಗಿದೆ.
ಇನ್ನು ಸರ್ಕಾರಿ ಕಟ್ಟಡಗಳ ಬಳಿಯ ನನ್ನ ಗೋಳು ಅಪಾರ, ಸ್ವಾಮಿ ಅಲ್ಲಿಗೆ ಬರುವರೆಲ್ಲಾ ಅಲ್ಲಿನ ಅಧಿಕಾರಿಗಳಿಗೆ ಬಯ್ಯಲಾಗದೆ, ಅವರಿಗೆ ಇವರು ಲಂಚಕೊಟ್ಟು ನನಗೆ ಉಗಿದು ಹೋಗುತ್ತಾರೆ ನೋಡಿ ಹೇಗಿದ್ದಾರೆ? ಈ ಜನ!. ಆ ಸರ್ಕಾರಿ ಜನಗಳನ್ನು, ರಾಜಕಾರಣಿಗಳನ್ನು ನೋಡಿದರೆ ನನಗೆ ಮಯ್ಯೆಲ್ಲಾ ಉರಿಯುತ್ತೆ, ಪಕ್ಕದಲ್ಲಿ ಬಂದು ನಿಂತಾಗ ಹಾಗೆ ಮುರಿದು ಅವರ ಮೇಲೆ ಬಿದ್ದು ಘಾಸಿಗೊಳಿಸ ಬೇಕೆಂಬ ಹಂಬಲವಿದೆ. ಈ ದೇಶಕ್ಕೆ ಎರಡು ಬಗೆಯುವುದನ್ನು ನೋಡಿದರೆ ಭಯೋತ್ಪಾದಕರಂತೆ ಸುಟ್ಟು ಬಿಡೋಣವೆನಿಸುತ್ತೆ- ಇಂತಹ ಜನರ ನಡುವೆ ನೀವೆಲ್ಲಾ ಅದು ಹೇಗೆ ಜೀವನ ಮಾಡುತ್ತಿರುವಿರೋ ನನಗಂತೂ ಆಶ್ಚರ್ಯವಾಗುತ್ತಿದೆ.
ಇನ್ನು ಪಾರ್ಕಿಗೆ ಬರುವ ಜನರ ಬಗ್ಗೆ ಹೇಳುತ್ತೇನೆ ಅವರ ಪರಿಸ್ಥಿತಿ ಕಂಡು ಮರುಗಿದ್ದೇನೆ, ಕಷ್ಟಕ್ಕೆ ಸ್ಪಂದಿಸುವಂತೆ ತಣ್ಣನೆ ಗಾಳಿ ಬೀಸಿ ಸಂತೈಸಿದ್ದೇನೆ.
ಯಾಂತ್ರಿಕ ಬಧುಕಿನ ಜನಗಳ ನೋಡಿ ಅಯ್ಯೋ ಎನಿಸುತ್ತದೆ. ದಡೂತಿ ದೇಹ,
ಮಧುಮೇಹ ರೋಗ ಅದ್ಯಾವ ರೋಗಗಳೊ ತಿಳಿಯೇ? ಬರುವ ಶೇ.೮೫ ರಷ್ಟು ಮಂದಿ ರೋಗಿಗಳೇ, ನಾನು ಹಾಗು ನನ್ನ ಇತರ ಮರಗಳು ಅವರನ್ನು ಸಾಧ್ಯವಾದಷ್ಟು ನೆಮ್ಮದಿ ಕೊಡುವ ಪ್ರಯತ್ನವನ್ನು ಮುಂದುವರಿಸಿದ್ದೇವೆ.
ಧ್ಯಾನ ಮಾಡುವವರು, ವೇಗವಾಗಿ ನಡೆದಾಡುವವರು, ಮನೆಯಲ್ಲಿ ನಿದ್ದೆ ಮಾಡಲಾಗದವರು, ಸೌಂದರ್ಯ ಪ್ರಜ್ನೆಯಿರುವವರು, ಹದಿಹರೆಯದ ಹಕ್ಕಿಗಳು,
ವಿಚಿತ್ರವಾಗಿ ನಗುವವರು. ಚಿತ್ರ ವಿಚಿತ್ರ ಕಪಿಚೇಷ್ಟೆ, ಅಂಗಚೇಷ್ಟೆ ಮಾಡುವವರು,
ಮಾತಾನಾಡುವುದಕ್ಕೇ ಬರುವವರು ಪಟ್ಟಿ ಇನ್ನೂ ಉದ್ದ ಬೆಳೆಯುತ್ತೆ.
ಎಲ್ಲರೂ ನಮ್ಮಿಂದ ದಿನಕ್ಕಾಗುವ ಹೊಸ ಚೈತನ್ಯವನ್ನು ಪಡೆದುಹೋಗುತ್ತಾರೆ.
ನಾವು ಚೈತನ್ಯದ ATM ಎಂದರೆ ತಪ್ಪಲ್ಲ. ನೀವೂ ಬನ್ನಿ, ನಿಮ್ಮ ಸ್ನೇಹಿತ,ಬಂಧು-ಬಾಂಧವರನ್ನೂ ಕರೆ ತನ್ನಿ ಚೈತನ್ಯದ ಕಲ್ಪವೃಕ್ಷವೆಂದರೆ ನಾವುಗಳೇ! ಬನ್ನಿ ಬನ್ನಿ....

ನಿರ್ಜೀವ ಜಂತು

"Life sucks"
ಜೀವ ಹೀರುತ್ತೆ-ಯಾಂತ್ರಿಕ ಬದುಕು
ಜನರ ಜೀವ ಹಿಂಡುತ್ತೆ,
ನಾವು ನಾವಾಗದೆ
ನಾವು ಬೇರೆಯಾಗಬೇಕೆಂಬ ಹಂಬಲ ಇದಕ್ಕೆ ಕಾರಣ
ನಮ್ಮದು, ನಮ್ಮವರು ಮರೆತು ಹೋದರೆ ಹೀಗಾಗುತ್ತೆ
ಬದಲಾಗಬೇಕು ನಿಜ!
ನಮ್ಮನ್ನು ಮರೆಯುವಂತಹ ಬದಲಾವಣೆಯಲ್ಲ
ನಾವು ಬಂದ ದಾರಿ ಮರೆಯುವುದಲ್ಲ
ನಮ್ಮ ಭಾಷೆ, ದೇಶ, ಸಂಬಂಧಗಳನ್ನು ತೊರೆಯುವುದಲ್ಲ
ನಾವು ನಾವಾಗಬೇಕು ಅನುಕರಣೆಯಿಂದಲ್ಲ
ನಾವು ಬದಲಾಗಬೇಕು ಸೃಜನಶೀಲತೆಯಲ್ಲಿ
ನಾವು ಬದಲಾಗಬೇಕು ಕ್ರೀಯಾಶೀಲತೆಯಲ್ಲಿ
ನಾವು ಬದಲಾಗಬೇಕು ಮಾನವೀಯತೆಯಲ್ಲಿ
ನಾವು ಬದಲಾಗಬೇಕು ದೇಶಕಟ್ಟುವಿಕೆಯಲ್ಲಿ
ದೇಶವೆಂದರೆ ಬರಿ ಕಲ್ಲು,ಮಣ್ಣು, ಬಂಡೆಯಲ್ಲ
ದೇಶವೆಂದರೆ ಜೀವಂತ ಬದುಕು
ಅದು ಜೀವ ರಾಶಿಯ ಬಲಿತೆಗೆಯುವ ಜ್ವಾಲೆಯಲ್ಲ
ಅದು ಬೆಳಕು ಕೊಟ್ಟು ದಾರಿ ತೋರುವ ದೀಪ
ಅದು ಜೀವವಿರುವ ಚೈತನ್ಯದ ಚಿಲುಮೆ
ಅದು ಜಡತ್ವದ ನಿರ್ಜೀವ ಜಂತುವಲ್ಲ

ಕಾಡಿದ ನೆನಪು

ನೀನಿರದ ಸಮಯದಲ್ಲಿ
ನಿನ್ನ ನೆನಪು ಕಾಡಿದೆ ಹೃದಯದಲ್ಲಿ
ಮನಸ್ಸಿಗೆ ಕಾಣದ ನೋವು ಆವರಿಸಿದೆ
ಹೃದಯ ಭಾರವಾಗಿ ನನ್ನ ಮಾತು ಕೇಳದಾಗಿದೆ\\


ಈ ಸಂಜೆ ನಿನ್ನ ನೆನೆಪು ಕಾಡಿತು
ಹಳೆಯ ಮಧುರ ಕ್ಷಣಗಳು ಕಣ್ಣ ಮುಂದೆ ಹಾಯಿತು
ಹಾಂ! ಎಂಥ ಮಧುರ ಎಂಥ ಮಧುರ
ಮತ್ತೆ ಮತ್ತೆ ಬರಲಿ ಎಂದು ಚಿತ್ತ ಬೇಡಿತು\\


ಆ ಸಂಜೆ ಏಕಾಂಗಿಯಾಗಿ ಚಿತ್ತ ನೆಟ್ಟಿತ್ತು ಆಕಾಶದತ್ತ
ಹಾದು ಹೋಗುವ ಪ್ರತಿ ಹಕ್ಕಿಯೂ ಪ್ರಶ್ನೆ ಹಾಕಿತು
ಗೆಳತಿ ಎಲ್ಲಿ? ಏಕೆ ಒಂಟಿಯಾಗಿಹೆ?
ಕಪ್ಪು ಮೋಡಗಳು ದುಃಖದ ಮಡುಗಟ್ಟಿ ಕಣ್ಣೀರು ಸುರಿಸಿತು\\


ನಿನ್ನ ಸ್ಮರಿಸಲು ಅದೆಷ್ಟು ಖುಷಿ ಮನಸಿಗೆ
ಆದರೂ ನಿನ್ನ ಚಿಂತೆ ಮನಸಿಗೆ ಕಾಡಿದೆ
ನೀನೆಂಬ ಚಿಂತೆ ಗುಣವಾಗದ ಖಾಯಿಲೆಯಾಗಿದೆ
ನೀನೇ ಚುಚ್ಚುಮದ್ದು ಜೀವನದ ಹಾದಿಗೆ\\

ಉಷಾ

ಇಲ್ಲಿ ನನ್ನದೊಂದು ಜೀವ ನರಳುತಿದೆ
ಬಿಡುಗಡೆಯ ಬಯಸಿ
ಸುಖ-ಸಂತೋಷ ಕಾಣದೆ
ಹೊರಟಿದೆ ಕಾಣದ ಸುಖವ ಅರಸಿ\\


ಹಲವು ವರುಷಗಳ ಹಿಂದೆ
ಹುಟ್ಟು ಬಯಸದೆ ಧರೆಗಿಳಿದು ಬಂದೆ
ತಾಯಿ-ತಂದೆಯರ ಸಂತೋಷಗೊಳಿಸಿ
ಕಾಡಿದ ಮನೋವ್ಯಥೆ ಅಭಿವೃದ್ದಿಯ ಕಡೆಗಣಿಸಿ\\


ನೋವೇ ಜೀವನದ ಪ್ರತಿ ಕ್ಷಣಗಳು
ನೋವನ್ನು ಅನುಭವಿಸಲೇ ಬಂದವಳು
ಯಾರನ್ನು ಜರಿದು ಫಲವೇನು?
ನಾನು ಪಡೆದ ಭಾಗ್ಯವಲ್ಲದೆ ಮತ್ತೇನು?\\


ರೋಗ-ರುಜಿನಗಳು ಬಂದು ಮುಗಿಬೀಳಲು
ಶಕ್ತಿ ಯುಕ್ತಿಗಳೆಲ್ಲಾ ಮೂಲೆ ಸೇರಲು
ಅನುಭವಿಸದೇ ವಿಧಿಯಿಲ್ಲ
ಅನಾಮಿಕಳಾಗಿ ನೊಂದೆನಲ್ಲಾ\\


ಜೀವದ ಗೆಳೆಯನಲ್ಲಿ ಗೆಲುವಿಲ್ಲ
ಕಟ್ಟಿಕೊಂಡ ಕರ್ಮಕ್ಕೆ ಅನುಭವಿಸಬೇಕಿದೆಲ್ಲಾ
ಕೂಡಿಟ್ಟ ಹಣವೆಲ್ಲಾ ಗುಡಿಸಿದ್ದಾಯಿತು
ನನ್ನೇ ನಾನು ನಕ್ಕೆ ಇಂದು ನಾನು ಮುಕ್ತ
ಆಯಿತು ಲೆಕ್ಕಾ ಚುಕ್ತ\\

ಹೃದಯ ಚಿತ್ರ

ಎಲ್ಲಿ ಬರೆಯಲಿ ಹೇಳು
ನನ್ನ ಹೃದಯದ ಮಾತನ್ನು
ನಿನ್ನ ಹೃದಯದ ಪುಟಗಳಲ್ಲೋ
ಆಕಾಶದ ಬೆಳ್ಳಿ ತಾರೆಯರ ನಡುವೆಯೋ\\


ಬರೆಯದಿರಲಾರೆ ಹೊಮ್ಮಿಬರುತ್ತಿದೆ ಕೇಳು
ಹೃದಯದ ಪಿಸುಮಾತು ಕೇಳಿಸಿಕೋ
ತಂಗಾಳಿಯ ಕಲರವದಲ್ಲಿ
ಹರಿಯುವ ನದಿಯ ಮಂಜುಳನಾದದಲ್ಲಿ
ಹಕ್ಕಿಗಳ ಚಿಲಿಪಿಲಿಗಾನದಲ್ಲಿ
ನನ್ನ ಒಲವ ಸುಧೆಯು ಹರಿಯುತಿದೆ ನೋಡು\\


ತೋರಿಸಿ ತೋರಿಸಿರೆಂದು ಕೇಳಬೇಡ
ಕಣ್ಣನೋಟದಲ್ಲೇ ಕಂಡುಕೊಳ್ಳಬೇಕು
ತುಟಿಯ ಮೇಲೆ ಹೊಮ್ಮುತಿದೆ
ಕೆನ್ನೆಯಲ್ಲಾ ಕೆಂಪಗಾಗಿದೆ
ಕಣ್ಣು ನಾಚುತಿದೆ
ಏಕೆಂದು ಹೃದಯವನ್ನೇ ಕೇಳು\\


ಹೃದಯ ಡಬ್ ಡಬ್ ಎಂದು ಮಿಡಿಯುತಿದೆ
ಅದು ಬರಿಯ ಶಬ್ದವಲ್ಲ ಕೇಳು ಗೆಳತಿ
ಅದು ನಿನ್ನಯ ಧ್ಯಾನ
ಎಂದು ನಿನ್ನ ಕಾಣುವೆಯೆಂಬ ಹಂಬಲದ ಬಡಿತವದು
ಬಂದು ಬಿಡು ಗೆಳತಿ ನಿನಗಾಗಿ ಕಾಯುತಿಹೆ
ಈ ಜೀವ ಹಿಡಿದುಕೊಂಡು ಕಾಯುತಿಹೆ ನನ್ನ ಹೃದಯದಲಿ
ನಿನ್ನದೆ ಚಿತ್ರವ ಬಿಡಿಸಿ\\

ಕೊಳಲ ದನಿ

ಕಾಡಿನ ಮೊಲೆ ಬೆಳೆದ ಬಿದಿರು ನಾನು
ಕಿಚ್ಚು ಹಚ್ಚುವವನೆಂದು ಜರೆಯುವರು ನನ್ನನು
ಬೇಸಿಗೆ ಬಂತೆಂದರೆ ಪ್ರಾಣಕ್ಕೆ ಸಂಚಕಾರ
ಚರ್ಮ ಸುಲಿದ ನೋವಿನ ಹಾಡು ಹಾಡುವ ಹಾಡುಗಾರ\\


ಯಾರ ದನಿಯೋ ನಾನು ತಿಳಿಯೆ
ನನ್ನ ಕೊರಳ ದನಿಯು ಯಾರೋ ಅರಿಯೆ
ಸುಯ್ ಗುಡುವ ಗಾಳಿಯಲ್ಲೂ ಗಾನಸುಧೆ
ಬಿಸಿಲಿನ ಬೇಗೆಯಲ್ಲಿ ಎಂದಾಗುವುದೋ ನನ್ನ ವಧೆ\\


ಅವನಾರೋ ಗೊಲ್ಲನಂತೆ
ನನ್ನ ಮಧುರದಿ ಬಳಸುವನಂತೆ
ಹಿತವಾದ ಗಾನ ತೇಲಿಬಂದು
ಎದೆಯಲ್ಲಿ ಪ್ರೀತಿ ಚಿಗುರಿಬಂತು\\


ಬಿದಿರು ಹೋಗಿ ಕೊಳಲಾದೆ
ಅವರ ಕೊರಳ ಕೊಳಲ ದನಿಯಾದೆ
ಹೃದಯ ಹಿಗ್ಗಿಸಿ, ಗಾನ ಹೊಮ್ಮಿಸಿ
ನನ್ನೆ ನಾನು ಹಾಡಿದಂತೆ ಅವರ ಹಾಡ ಹಾಡುವೆ\\

ಅವಳಿಲ್ಲದ ಮನೆ




ಎಲ್ಲಿ ನೋಡಿದರಲ್ಲಿ ಕಸವಿದೆ

ಧೂಳು-ಕಸ ಸ್ವಾಗತಕ್ಕೆ ನಿಂತಿವೆ

ನೀನಿಲ್ಲದಾ ಮನೆ ಹೀಗಿದೆ ನೋಡು\\

ಪಾತ್ರೆ ಪಡಿಗಗಳು ನಿದ್ದೆ ಮಾಡುತ್ತಿವೆ

ಬಿಸಿಯಾಗದ ಒಲೆ ಕಣ್ಣೀರಿಡುತ್ತಿದೆ

ಅಕ್ಕಿಯ ಕಾಳುಗಳು ನಿನ್ನ ಬೆರಳುಗಳ ಸ್ಪರ್ಶಕ್ಕೆ ಹಾತೊರೆಯುತ್ತಿವೆ

ನೀನಿಲ್ಲದಾ ಮನೆ ಹೀಗಿದೆ ನೋಡು\\

ದೇವರಿಲ್ಲದ ಮನೆ ಬೆಳಕಿಲ್ಲದ ಗೂಡಾಗಿದೆ

ಕಂಡಾಗಲೆಲ್ಲಾ ದೀಪ ಕೇಳುವುದು ನಿನ್ನನು

ಪುಸ್ತಕಗಳ ರಾಶಿ ರಾಶಿ ನಿನ್ನ ಅಂಜಿಕೆಯಿಲ್ಲದೆ ಹೊರಬಂದಿವೆ

ನೀನಿಲ್ಲದಾ ಮನೆ ಹೀಗಿದೆ ನೋಡು\\

ಲಂಗು ಲಗಾಮಿಲ್ಲದೆ ಬಟ್ಟೆಗಳು ಹರಡಿಕೊಂಡಿವೆ

ಕನ್ನಡಿಯಂತಿದ್ದ ನೆಲ ನಿನ್ನ ನೆನಪಲ್ಲಿ ಕಪ್ಪುಗಟ್ಟಿದೆ

ಕನ್ನಡಿ ನಿನ್ನ ಕಾಣದೆ ಮೌನವಾಗಿದೆ

ನೀನಿಲ್ಲದಾ ಮನೆ ಹೀಗಿದೆ ನೋಡು\\

ಆಸ್ಪತ್ರೆಯ ಗೋಡೆ

ಮುವತ್ತು ವರ್ಷದ ನಿರ್ಜೀವ ಗೋಡೆ ನಾನು

ಹುಟ್ಟು,ಸಾವು,ಬದುಕು,ನೋವು ಕಂಡವ ನಾನು\\

ವೇಳೆಯ ಪರಿವೇ ಇಲ್ಲ

ಕ್ಷಣಕ್ಕೊಂದು ಹುಟ್ಟು-ಸಾವು

ಸಂತೋಷದ ಗಳಿಗೆಗಳು ಕ್ಷಣಿಕ

ನೋವಿನ ಚೀರಾಟ ಇಲ್ಲಿ ಅಮರ\\

ಎಷ್ಟು ಜನ ಇಲ್ಲಿ ನಕ್ಕವರಿದ್ದಾರೆ?

ನಾ ಬಲ್ಲೆ -ನೆಮ್ಮದಿಯ ಉಸಿರು ಬಿಟ್ಟವರು ಕೆಲವರೇ!

ಹುಟ್ಟು-ಸಾವು ಎರಡರಲ್ಲೂ ನೋವಿದೆ

ಜೀವನ ಅಳುವಿನಿಂದ ಆರಂಭಗೊಂಡು ಅಳುವಿನಿಂದ ಕೊನೆಗೊಳುವುದಿದೆ\\

ನೋವು -ಅಳುವನ್ನು ಮೀರಿದ್ದು ಯಾವುದಿದೆ?

ತಪ್ಪು ಯಾರದ್ದೋ ಏನೋ?

ನಾ ಮಾತ್ರ ನೋವಿನ ಹೃದಯಕ್ಕೆ ಮಿಡಿಯಲಾರದೆ

ಕ್ಷಣ ಕ್ಷಣವೂ ನೋವಿನ ನಲಿವಿನಲ್ಲಿ ಪಕ್ವಗೊಳುತ್ತಿದ್ದೇನೆ \\

ರಾಧೇ-ಕೃಷ್ಣ

ಅವನೇ ಕೃಷ್ಣ!
ಅವಳೇ ರಾಧೇ!
ಪ್ರೀತಿ-ಪ್ರೇಮವೆಂದರೆ ಅವರೇನೇ\\

ಹಾರಿಬರುತಿರುವ ಕರಿ ಮೋಡವೇ ಕೃಷ್ಣ
ಕ್ಷಣ ಮಾತ್ರದಲಿ ಮಿಂಚಿ ಮರೆಯಾದ ಕಣ್ಣ ಮಿಂಚು ರಾಧೇ
ಧರೆಗಿಳಿಯುತಿರುವ ಹೊನ್ನ ಮಳೆ -ಪ್ರಣಯ\\

ಬಳುಕುತ್ತಾ ಹರಿದಾಡುವ ನದಿ ರಾಧೇ
ಕಡಲ ಕಡೆಗೆ ಓಡಿಸುವ ಚೈತನ್ಯ ಕೃಷ್ಣ
ಒಳುಮೆಯಿಂದಲಿ ಬಳುಕುತ ಕಡಲಸೇರುವುದು- ಮಿಲನ\\

ಪ್ರೇಮದ ಒಡಲು ಕಡಲು ರಾಧೇ
ಹನಿ-ಹನಿ ನೀರು ಅವಿಯಾಗಿಸುವ ಶಕ್ತಿ ಕೃಷ್ಣ
ಗಗನಕ್ಕೇರಿ ಮುಗಿಲುಗಳಾಗುವುದೇ-ಪ್ರೀತಿ\\

ಹೂ ಮನಸ್ಸು ರಾಧೇ
ಭಾವನೆಗಳ ತುಡಿತ ಕೃಷ್ಣ
ಮನಸು -ಭಾವನೆ ಕ್ರೀಯಾಶೀಲತೆಯೇ-ಅನುರಾಗ\\

ವರ್ಷದ ಕೊಳೆ

ಮನವನ್ನೊಮ್ಮೆ ಜಾಡಿಸಿಬಿಡು
ವರ್ಷ ಕುಳಿತ ಮೋಹ -ತಾಪವೆಲ್ಲಾ ತೊಳೆದುಬಿಡು
ಒಮ್ಮೆ ಯೋಚಿಸಿ ನೋಡು
ಜಾರಿಬಿದ್ದ ಕನಸಿನ ಆಗಸಕ್ಕೆ ವ್ಯಥೆಯ ಬಿಟ್ಟುಬಿಡು\\

ನೆನಪಿಡು ನಾಳೆ ನಮಗಾಗಿಯೇ ಇದೆ
ಮನಸ್ಸನ್ನು ಬೇಸರಿಸಬೇಡ-ಗೆಲುವು ನಮಗಾಗಿಯೇ ಕಾದಿದೆ
ಗೆಲುವು ನಿನ್ನದಾಗದಿದ್ದರೇನಂತೆ
ನೀನು ಏಕಾಂಗಿಯಲ್ಲ ಸೋಲಂತೂ ನಿನ್ನಜೊತೆಗೆ ಇದ್ದೇ ಇದೆ\\

ಗೆಲುವನೆಂದು ಪ್ರೀತಿಸಬೇಡ ತಿಳಿ
ಪ್ರೀತಿಸು ಸೋಲನ್ನು
ಏಕೆಂದರೆ ಗಾದೆಯಿದೆ
ಸೋಲೇ ಗೆಲುವಿನ ಮೆಟ್ಟಿಲು\\

ಕಹಿ ಆರೋಗ್ಯಕ್ಕೆ ಒಳ್ಳೆಯದಂತೆ
ತಿಳಿ ಸೋಲು ಬದುಕಿಗೆ ಒಳ್ಳೆಯದು
ನೆನೆಪಿರಲಿ ಕ್ಷಣಿಕ ಸಿಹಿಗಿಂತ
ದೀರ್ಘ ಕಹಿಯೇ ಮೇಲು \\





ನನ್ನವ ಚೆಲುವ

ಎಂಥ ಚೆಲುವ
ಎಂಥ ಚೆಲುವ
ನನ್ನ ಮನವ ಸೆಳೆದವ\\

ಎಂಥ ರೂಪ
ಎಂಥ ಭೂಪ
ನನ್ನ ಕನಸಲ್ಲಿ ಬರುವ\\

ಎಂಥ ಮಾತು
ಎಂಥ ಗತ್ತು
ನನ್ನ ಹೃದಯದಲ್ಲಿ ನಿಂದವ\\

ಎಂಥ ಬಣ್ಣ
ಎಂಥ ಕಣ್ಣು
ನನ್ನ ಬದುಕ ಬಾಂಧವ\\

ಯಾರು ಏನೇ ಹೇಳಿದರೂ
ಎಂದೆಂದಿಗೂ ಅವನು ನನ್ನವ
ಎಂದೆಂದಿಗೂ ಅವನು ನನ್ನವ\\

ವಿರಹ

ಹೊರಟು ನಿಂತೆ ಬರುವೆನೆಂದು
ಅವಳ ಕಣ್ಣಲ್ಲಿ ಕಂಬನಿ
ಮಾತು ಕ್ಷೀಣಿಸಿತ್ತು
ಮೌನ ಆವರಿಸಿತ್ತು
ಕೈ ಹಿಡಿದೆ
ತಲೆಯ ಸವರಿದೆ
ಒಂದು ಕ್ಷಣ ಕಣ್ಣು-ಕಣ್ಣು ಸೇರಿತು
"ಅಳ ಬಾರದು ಹುಚ್ಚು ಹುಡುಗಿ" ಎಂದಿತು ಹೃದಯ
ಮುಂದಿನ ವಾರ ಬರುವೆನೆಂದಿತು ಮನಸ್ಸು
ಕಣ್ಣಲ್ಲಿ ಕಂಬನಿ ಮರೆಯಾದರೂ
ಮಾತು ಹೊರಡದೆ
ಮೊಕ ಭಾಷೆ ಕೈ ಮೇಲಾಯಿತು
ಬಸ್ಸಿನಲ್ಲಿ ಕುಳಿತರೂ ಅವಳದೇ ಯೋಚನೆ
ಮೌನವಾದ ಹೃದಯ ಯಾಚನೆ
ಮನದಲೇನೋ ಕಾಣದ ಯಾತನೆ\\

ಕೆಣಕು

ಏನು ಹೇಳಲಿ ಹೇಳು?
ಸುಮ್ಮನೆ ನಗುವೆ ಏಕೆ?
ನಗುವು ಉತ್ತರವಲ್ಲ
ಕಣ್ಣು-ಕಣ್ಣು ಬಿಡುವುದು ತರವಲ್ಲ\\

ನಿನಗೇನೋ ಬೇಕು?
ಸುಮ್ಮನೇ ನನ್ನ ಪರೀಕ್ಷಿಸಬೇಕು
ನನ್ನ ತಳಮಳ ನಿನಗೆ ಖುಷಿ
ನಿನ್ನ ಮುಂದೆ ನಾನಾಗಬೇಕು ಮೌನ ಋಷಿ\\

ಮತ್ತೆ ಮತ್ತೆ ಕೆದಕುವುದು
ನನ್ನ ಬಾಯ ಬಿಡಿಸುವುದು
ನಿಜ ತಿಳಿದ ಮೇಲೆ ಹುಸಿ ಕೋಪ
ಲಲ್ಲೆಗೆರೆಯಬೇಕು ಇಳಿಯುವ ತನಕ ತಾಪ\\

ಕಾಡಿಸುವುದು ನಿನಗೆ ಗೊತ್ತು
ಕಾಯಿಸುವುದು ನನಗೆ ಗೊತ್ತು
ಕಾಡಿಸಿ,ಕಾಯಿಸುವ ಈ ಪರಿ
ಪ್ರೀತಿ-ಪ್ರಣಯ ಲೋಕದಲ್ಲಿ ಎಲ್ಲವೂ ಸರಿ\\

ಬಂಧನ

ಕನಸಿದೆ ಸೆಳೆತವಿದೆ
ಪ್ರೀತಿ ಹೃದಯಗಳೆರಡರ ಸೇತುವೆಯಾಗಿದೆ
ಯೌವ್ವನವಿದೆ,ಚಲುವಿದೆ
ಪ್ರಣಯ ಪಕ್ಷಿಗಳಾಗಲು ಮದುವೆಯಾಗಿದೆ\\

ಪಾರ್ಕು,ಬೀದಿ ಬೀದಿ ಸುತ್ತಿದ್ದಾಗಿದೆ
ಕಂಡ ಕಂಡದೆಲ್ಲವೂ ಕೈಗೆಟುಕಿಸಿಕೊಂಡದ್ದಾಗಿದೆ
ಕಣ್ಣು ಕಣ್ಣುಗಳಲ್ಲೇ ಮಾತನಾಡುತ್ತಾ,ಮಾತಿಗೆ ನಾಚುತ್ತಾ
ಮೈ ಕೈ ಸೋಕಿಸುತ್ತಾ ರೋಮಾಂಚನಗೊಂಡಿದ್ದಾಗಿದೆ\\

ಯಾರಾದರೂ ನೋಡಿಯಾರೇನೋ!
ಭಯದಲ್ಲಿ ಕಳ್ಳ ಬೆಕ್ಕಿನಂತೆ ಸವಿಯುಂಡಿದ್ದಾಗಿದೆ
ಲೋಕಕ್ಕೆಲ್ಲಾ ತಿಳಿದಿದೆ ನಡುವೆ ಏನೋ ನಡೆದಿದೆಯೆಂದು
ಆದರೂ ಭಿಗುಮಾನ ಏನೂ ಆಗಿಲ್ಲವೆಂಬ ತೋರಿಕೆ ಏಕೋ?\\

ಕಾಮದ ಸೊಕ್ಕು ಮುರಿದಿದ್ದಾಗಿದೆ
ಪ್ರೇಮಕ್ಕೆ ಮಣಿದಿದ್ದಾಗಿದೆ
ಪ್ರೀತಿಗೆ ಶರಣೆಂದು ಬಂದಿಯಾಗಿದ್ದಾಗಿದೆ
ವಾತ್ಸಲ್ಯದ ಚಿಗುರಿಗೆ ನೀರೆರೆದದ್ದಾಗಿದೆ\\

ಬಾಯಾರಿದೆ!

ರವಿ ಜಾರಿದ ಕೆಲಸವಾಯ್ತೆಂದು
ಲೋಕರೂಡಿ ಹಕ್ಕಿಗಳು ಗೂಡು ಸೇರಿದವು
ಕತ್ತಲಾವರಿಸಿ,ನೀರವತೆ ಪಸರಿಸಿ
ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ.....
ಹೊನ್ನ ಚಂದ್ರಿಕೆಗೆ ಈಗ ಬೆಳಕಾಯಿತು
ಹಾಲಿ ಚೆಲ್ಲಿ ತಾರಾಲೋಕದಲ್ಲಿ ಒಂದು ಪಯಣ
ಕಾಮದ ರಥವನೇರಿ ಹೊರಡುವನು
ರತಿಯ ಸೊಕ್ಕಡಗಿಸಲು
ಸ್ಪರ್ಶ, ಪಿಸುಮಾತು, ಬಾಹುಬಂದನ, ಚುಂಬನ, ಮರ್ಧನ, ಸಿಹಿಮುತ್ತು, ಬಿಸಿಯುಸಿರು....ಕಾಲ ಕಳೆಯಿತು
ಕಾಮದ ಹುಟ್ಟಡಗಿಸಿ ದಣಿವಾಯಿತು ದೇಹಕ್ಕೆ
ಕ್ಷಣಮಾತ್ರದಲ್ಲಿ ನಿದ್ದೆಗೆ ಪರವಶ
ಚಂದ್ರಿಕೆಯ ಪಯಣ ಮುಗಿದಿಲ್ಲ
ವಿರಹಿಗಳ ವಿಹ್ವಲ ಪ್ರೇಮಜ್ವರ
ಮಗ್ಗುಲು ಮಲಗಿದರೂ ಹತ್ತದ ನಿದ್ದೆ
ಕೊನೆಗೆ ಶಪಿಸಬೇಕು
" ಏಕೆ ಬರುವೆ ಚಂದ್ರಿಕೆ?
ಸುಡಬೇಡ ತೊಲಗು ಸಾಕಾಗಿದೆ ವಿರಹ,
ಇಲ್ಲಾ ಹೆಣ್ಣಾಗಿ ಬಾ ಮಧುಮಂಚಕ್ಕೆ
ಜೊನ್ನ ಜೇನಿಗೆ ಬಾಯಾರಿದೆ ತಣಿಸು ಬಾ"

ಅಮೃತ

ಏಕೆ ನಿಂತೆ ನಾನು?
ಯಾವ ಪ್ರೀತಿಯ ಹೊಂಗನಸ ಬಯಸಿದೆ ನಾನು?
ಕಣ್ಣು ತವಕಿಸುತ್ತಿದೆ
ಹೃದಯ ತಲ್ಲಣಗೊಂಡಿದೆ
ಈ ಹೃದಯದ ಲಹರಿಗೆ ಸ್ಪಂದಿಸುವ
ಹೆಣ್ಣು ಹೃದಯಕ್ಕೆ ಕಾಯುತಿಹೆನು\\

ಕೆಂಪು ಗುಲಾಬಿ ಕೈಯಲ್ಲಿ
ನಡೆಯದ ದಾರಿ ಯಾವುದೂ ಇಲ್ಲ ಇಲ್ಲಿ
ಕಂಡ ಕಂಡ ದೇವರಿಗೆ ಕಟ್ಟು ಬಿದ್ದು
ಮುಡಿಪು ಕಟ್ಟಿಟ್ಟು ಸಾಕಾಗಿದೆ ಜಿದ್ದಿಗೆ ಬಿದ್ದು
ಈ ಹುಡುಗಿ,ಆ ಹುಡುಗಿ ಬಂದವರೆಲ್ಲಾ ತಿರಸ್ಕರಿಸಿದವರೇ!
ಕಣ್ಣೆತ್ತಿ ನೋಡದೇ ಹೋದರಲ್ಲಾ
ಸಾಕಾಗಿದೆ ಈ ಜೀವನ ಜೊತೆಗಾತಿ ಇಲ್ಲದೆ\\

ಕಣ್ಣ ಮುಂದೆ ಎಷ್ಟೋ ಅಪ್ಸರೆಯರ ಚಿತ್ರ
ಜೊತೆಯಾಗಿ ಕೈಹಿಡಿಯುವರು ಯಾರೂ ಇಲ್ಲ
ಕಂಡ ಕನಸೆಲ್ಲವೂ ನೀರ ಮೇಲಿನ ಬರಹದಂತೆ
ಜಾರಿ ಹೋಗುತ್ತಿದೆ-ಕಳಚಿ ಹೋಗುತ್ತಿದೆ\\

ತವಕಿಸುವ ಹೃದಯಕ್ಕೆ ಕಾದು ಸಾಕಾಗಿದೆ
ಇಂದು ಬದುಕಿಹೆನು ನಾನು ನಾನಾಗಿಲ್ಲದೆ
ಪ್ರೀತಿಯ ಅಮೃತ ಹನಿಗಾಗಿ ಹೃದಯ ಬಾಯಾರಿದೆ\\

ನನ್ನ ಕವಿತೆಗಳು

ನನ್ನ ಕವಿತೆಗಳು
ನನ್ನ ಮನದ ಮಾತುಗಳು
ಯಾರಿಗೂ ಕಾಣದ
ಯಾರೊಂದಿಗೂ ಮಾತನಾಡದ
ನನ್ನೊಳು ಸದಾ ಹರಿವ ಚೈತನ್ಯ
ನನ್ನ ಶಕ್ತಿ
ನನ್ನ ದಾರಿ
ಮುನ್ನಡೆಸುವ ಸಾಧನ
ಯಾರು ಏನು ಹೇಳಿದರೇನು?
ನನ್ನ ಹಾಡು ನನ್ನದು!
ನನ್ನ ದಾರಿ ನನ್ನದು!

ಮುಂಜಾನೆ ರಾಗ

ಒಂದು ಮುಂಜಾನೆಯಲ್ಲಿ ರವಿ ಕಣ್ಣ ಬಿಡುವ ಮುನ್ನ
ಕೋಗಿಲೆ ಮರಿಯೊಂದು ಮಾವಿನ ಮರದಲ್ಲಿ ಕುಳಿತಿತ್ತು
ಮಧುರ ಕಂಠದಿ ಹಾಡ ಹಾಡುತಿತ್ತು
ಕುಹೂ....ಕುಹೂ... ಗಾನ ಮುಂಜಾನೆಯ ಆವರಿಸಿತ್ತು\\

ಆಹಾ! ಎಂಥ ಮಾಧುರತೆ
ನೀರವತೆಯ ಮರಗಳಲ್ಲಿ ಮಾಧುರ್ಯದ ಮರ್ಮರ
ಗಂಧರ್ವ ಗಾನದ ಲಹರಿಯೇ ಹೊಮ್ಮುತಿತ್ತು
ಬಾನೆತ್ತರಕೆ ಹಾರಿತು ಇಳೆಯ ಗಾನ\\

ಮೈಮನಗಳಲ್ಲಿ ಎಬ್ಬಿಸಿತು ಚೈತನ್ಯದ ಗಾನ
ತೇಲಿ ತೇಲಿ ದೇವಲೋಕದ ರವಿಯ ಸ್ತುತಿಸುತ್ತಿತ್ತು
ಕೋಗಿಲೆಯ ಗಾನಕೆ ಮನಸೋತ ಮುಗಿಲುಗಳು
ಭಾವುಕತೆಯ ಪನ್ನೀರ ಸುರಿಸುತ್ತಿತ್ತು\\

ಕಣ್ಣ ಹೊರಳಿಸಿ ರವಿಯು ಜಗದ ಕಡೆಗೆ ಬಣ್ಣವೆರಚಿ ಬಾನಿಗೆ
ಓಕುಳಿಯಾಟಕ್ಕೆ ಮುನ್ನುಡಿಯ ಬರೆಯುತ್ತಿತ್ತು
ಸುಯ್! ಗಾಳಿ ಆನಂದದಿ ನಲಿದಾಡಿ ಮರಗಿಡಗಂಟಿಗಳಲ್ಲಿ
ದೇವಲೋಕದ ಗಾನವ ಇಳೆಗೆ ಪರಿಚಯಿಸುತ್ತಿತ್ತು\\

ಕೊಳಲ ದನಿ

ಕಾಡಿನ ಮೊಲೆಯಲ್ಲಿ ಬೆಳೆದ ಬಿದಿರು ನಾನು
ಕಿಚ್ಚು ಹಚ್ಚುವವನೆಂದು ಜರೆಯುವರು ನನ್ನನ್ನು
ಬೇಸಿಗೆ ಬಂತೆಂದರೆ ಪ್ರಾಣಕ್ಕೇ ಸಂಚಕಾರ
ಚರ್ಮ ಸುಲಿದ ನೋವಿನ ಹಾಡು ಹಾಡುವ ಹಾಡುಗಾರ\\

ಯಾರ ದನಿಯೋ ನಾನು ತಿಳಿಯೆ?
ನನ್ನ ಕೊರಳ ದನಿಯು ಯಾರದೋ ಅರಿಯೆ?
ಸುಯ್! ಗುಡುವ ಗಾಳಿಯಲ್ಲೂ ಗಾನಸುಧೆ
ಬಿಸಿಲಿನ ಬೇಗೆಯಲ್ಲಿ ಎಂದಾಗುವುದೋ ನನ್ನ ವಧೆ\\

ಅವನಾರೋ ಗೊಲ್ಲನಂತೆ
ನನ್ನ ಮಧುರದಿ ಬಳಸುವನಂತೆ
ಹಿತವಾದ ಗಾನ ತೇಲಿಬಂದು
ಎದೆಯಲ್ಲಿ ಪ್ರೀತಿ ಚಿಗುರಿ ಬಂತು\\

ಬಿದಿರು ಹೋಗಿ ಕೊಳಲಾದೆ
ಅವರ ಕೊರಳ ಕೊಳಲ ದನಿಯಾದೆ
ಹೃದಯ ಹಿಗ್ಗಿಸಿ,ಗಾನ ಹೊಮ್ಮಿಸಿ
ನನ್ನೇ ನಾನು ಹಾಡಿದಂತೆ ಅವರ ಹಾಡ ಹಾಡುವೆ\\

ನನ್ನ ಬೆಳಕು

ಇವರು ನಮ್ಮವರು

ಇವರು ನಮ್ಮವರು

ನನ್ನ ಮನಸ್ಸಿಗೆ ಶಕ್ತಿ ಕೊಟ್ಟವರು\\

ನಾವಿಲ್ಲಿ ಏನು?

ನಾವೇಕೆ ಇಲ್ಲಿ?

ಅರಿವು ಮೊಡಿಸಿದ ಗುರು ಅವರು\\

ನನ್ನ ಮನದ ಕೊಳಕು

ನನ್ನ ನಡತೆಯ ಬಳುಕು

ತೊಳೆದು ಪುಟವಿಟ್ಟ ಬೆಳಕು ಅವರು\\

ನಿಂತ ನಿರಾಗಿದ್ದ ಚೈತನ್ಯ

ಹರಿಯುವನ್ತಾಗಿಸಿದ ಧೈತ್ಯ ಶಕ್ತಿ

ನನ್ನೊಳಗೆ ಶಕ್ತಿ ತುಂಬಿದ ಶಕ್ತಿಯವರು\\

ನಾಳೆ ಹೇಗೋ ಏನೋ?

ಇಂದು ಸಂತೋಷದಿ

ಮುಂದೆ ಸಾಗುವಂತೆ ದಾರಿ ತೋರಿದ ದೀಪ ಅವರು\\

ಜೀವನ ಪಾಠ

ಹೆದರದಿರು
ಬೆದರದಿರು
ಮುನ್ನಡೆಯ ಹೆಜ್ಜೆಯನ್ನೆಂದೂ ಹಿಂತೆಗೆಯದಿರು
ಇದುವೆ ಛಲದ ತಂತ್ರ
ಇದುವೆ ಗೆಲುವಿನ ಮಂತ್ರ\\

ಕೊರಗದಿರು
ಮರುಗದಿರು
ಜೀವನವೇ ಒಂದು ನೋವಿನ ಸಂತೆ
ನಗುವ ಪಡೆದು ನೋವ ಕೊಡುವ ವ್ಯಾಪಾರಿಗಳು ಇಲ್ಲಿ ಬಹಳ
ನೋವ ಪಡೆದು ನಗುವ ಕೊಡುವವರು ಇಲ್ಲಿ ಬಹಳ ವಿರಳ ವಿರಳ\\

ನಮ್ಮ ಶಕ್ತಿ

ಯಾವುದದು? ಯಾವುದದು ?
ಯಾವ ಶಕ್ತಿ ಯಾವುದದು?\
ನಮ್ಮ ಸೆಳೆಯುವ,ಪೋಷಿಸುವ ಶಕ್ತಿ ಯಾವುದದು?\\

ಯಾವ ತುಡಿತವದು? ಯಾವುದು?
ಬರೆಯುವಂತೆ ಪ್ರೇರೇಪಿಸುವ ಶಕ್ತಿ ಯಾವುದದು?\
ಅಮ್ಮಾ ನೀನಿತ್ತ ವಾತ್ಸಲ್ಯದ ಶಕ್ತಿಯೇ?
ನೀ ಪ್ರೀತಿಯಿಂದ ಕೊಟ್ಟ ಮುತ್ತಿನ ಶಕ್ತಿಯೇ?\\

ಜೀವನಾಡಿಯ ಅಣು ಅಣುವಿನಲಿ
ಹರಿದಾಡಿ ಬಡಿದೆಬ್ಬಿಸುವ ಚೈತನ್ಯವದಾವುದು?\
ಅಮ್ಮಾ ನೀ ಅಕ್ಕರೆಯಿಂದಲಿ ಕಳಿಸಿದ
ಕನ್ನಡದ ತೊದಲು ನುಡಿಯೇ?\\

ಸರ್ವವ್ಯಾಪಿ ನಿರಾಕಾರ ಶಕ್ತಿಯೇ
ಅರುಣ ಕರಣ ಮಂಗಲಾಮ್ಬರ ಸ್ಥಿತೆಯೇ?\
ಅಮ್ಮಾ ಅಮ್ಮಾ ಎಂಬೆರಡಕ್ಷರದಲಿ
ಮಂತ್ರರೂಪದಲಿ ನೆಲೆಸಿರುವ ಶಕ್ತಿಯೇ ನೀನು\\

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...