ಬದುಕು ಬಾರವಾಗಬಾರದು
ಬಾಳಬಂಡಿಯ ಚಕ್ರ ಮುರಿಯಬಾರದು\
ಬದುಕು ಸಾಗಲಿ
ಕಾಲಚಕ್ರ ಉರುಳಲಿ\\
ಮತ್ತೆ ವಸಂತ ಬರುವ
ಪ್ರಕೃತಿಯಲಿ ಚೈತನ್ಯ ತುಂಬುವ\
ಮರಳಿ ತಂದ ಜೀವಕೆ ಹರುಷ
ನಮಗಂದೇ ಹೊಸ ವರುಷ\\
ಮುಪ್ಪು ನಮಗೆ
ಎಲ್ಲಿಂದಲೋ ಬಂದವರು ಇಲ್ಲಿಗೆ\
ನೂರು ದಾರಿ ಹರಿವ ನೀರು
ಸೇರುವ ಗುರಿ ಒಂದೇ\\
ನಾವು-ನೀವು ಭೇದ ಹೆಚ್ಚು
ನಮ್ಮ ನಿಲುವು ದೇವರಿಗೇ ಮೆಚ್ಚು\
ಅರಿವು ಮಾತ್ರ ದೂರ
ಎಂದು ಸೇರುವೆವೋ ಜ್ಣಾನದ ತೀರ\\
Tuesday, January 25, 2011
Friday, January 21, 2011
||ಗುರು||
ಲೋಕದೊಳು ಬಹುಮಂದಿ
ಜೀವನದಲಿ ಬೆಂದು
ಹದವಾಗಿ ಬೆಳೆದು
ಮಿತವಾಗಿ ಮಣಿದು
ಶ್ರೀವಾಣಿ ಸಂಗದಲಿ ಬಲುಬಂಧಿ
ನಿತ್ಯವೂ ಸಾಧನೆಯ ತಪವು
ಚೈತನ್ಯದ ಒಲವು
ಬರಲೆಮಗೆ ಎದುರಿಸುವ ಬಲವು
ಸಾಧಿಸುವ ಛಲವು
ದಾರಿತೋರು ಜಗದೊಳಗೆ ಪರಮ ಗುರುವೇ
ಬಾಳಿನಲಿ ಜ್ಜಾನ ಜ್ಯೋತಿಯ ಹಚ್ಚಿ
ಯೋಗ ಜ್ಜಾನದ ರೆಕ್ಕೆಯ ಬಿಚ್ಚಿ
ಕನಿಕರಿಸು ಕಾರುಣ್ಯವಾ ಚುಚ್ಚಿ
ಕ್ರಾಂತಿಯ ಕಹಳೆಯ ಊದು ಬಾ ಸಚ್ಚಿ-
ದಾನಂದ ಸ್ವರೂಪನೇ ಎಚ್ಚ-
ರಿಸು ಬಾ ಪರಮ ಗುರುವೇ
ಹುಟ್ಟಿದಾ ಜೀವ
ಎತ್ತ ಹೋಗದು ಇಲ್ಲಿ
ಬೆಳೆಬೆಳೆದು ಏರುವುದು ದಿಗಂತಕ್ಕೆ
ನಿಮ್ಮ ಯೋಗದಾ ಫಲವ
ಜೀವದಾ ಮೇಲಿಟ್ಟು ಹರಸಿ
ಜೀವನವ ಉದ್ಧರಿಸೋ ಪರಮಗುರುವೇ
ಜೀವನದಲಿ ಬೆಂದು
ಹದವಾಗಿ ಬೆಳೆದು
ಮಿತವಾಗಿ ಮಣಿದು
ಶ್ರೀವಾಣಿ ಸಂಗದಲಿ ಬಲುಬಂಧಿ
ನಿತ್ಯವೂ ಸಾಧನೆಯ ತಪವು
ಚೈತನ್ಯದ ಒಲವು
ಬರಲೆಮಗೆ ಎದುರಿಸುವ ಬಲವು
ಸಾಧಿಸುವ ಛಲವು
ದಾರಿತೋರು ಜಗದೊಳಗೆ ಪರಮ ಗುರುವೇ
ಬಾಳಿನಲಿ ಜ್ಜಾನ ಜ್ಯೋತಿಯ ಹಚ್ಚಿ
ಯೋಗ ಜ್ಜಾನದ ರೆಕ್ಕೆಯ ಬಿಚ್ಚಿ
ಕನಿಕರಿಸು ಕಾರುಣ್ಯವಾ ಚುಚ್ಚಿ
ಕ್ರಾಂತಿಯ ಕಹಳೆಯ ಊದು ಬಾ ಸಚ್ಚಿ-
ದಾನಂದ ಸ್ವರೂಪನೇ ಎಚ್ಚ-
ರಿಸು ಬಾ ಪರಮ ಗುರುವೇ
ಹುಟ್ಟಿದಾ ಜೀವ
ಎತ್ತ ಹೋಗದು ಇಲ್ಲಿ
ಬೆಳೆಬೆಳೆದು ಏರುವುದು ದಿಗಂತಕ್ಕೆ
ನಿಮ್ಮ ಯೋಗದಾ ಫಲವ
ಜೀವದಾ ಮೇಲಿಟ್ಟು ಹರಸಿ
ಜೀವನವ ಉದ್ಧರಿಸೋ ಪರಮಗುರುವೇ
Subscribe to:
Posts (Atom)
ಮೂರು ದಿನದ ಸಂತೆ
ಹಲವು ವರ್ಷಗಳ ಕಠಿಣ ಪರಿಶ್ರಮ , ಸಾಧಿಸಿದೆನೆಂಬ ಹುಸಿನಗೆಯ ಭ್ರಮೆ , ನೀಲಿ ಆಕಾಶದಲ್ಲಿ ನೆಟ್ಟ ಕಣ್ಣುಗಳು , ಹಿಂದೆ ಬಿಟ್ಟುಬಂದ ಅನೇಕ ನೆನಹುಗಳು . ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ನಡೆದಷ್ಟೂ ದೂರ ಹೋಗುತಿಹುದು ಎಂದು ಸೇರುವೆನೋ ಗುರಿಯನು? ದೂರ ದೂರ ಸರಿಯುತಿಹುದು ಕನಸು ಎಂದು ನೋಡುವೆನೋ ನಿನ್ನನು// ಭ್ರಮೆಯ ಬೆನ್ನ ಹತ್ತಿಹೆನೇನೋ? ನಿದ್ದೆ ಜಾರಿಹ...