Thursday, November 11, 2010

-ಕೋಗಿಲೆಯೇ ಹಾಡು ಬಾ-

ಯಾವ ಕೋಗಿಲೆಯ ಕರೆಯಲಿ
ಎನ್ನೆದೆಯ ಹಾಡು ಹಾಡಲೆಂದು
ನೋವಿನ ನೂರು ರಾಗಕ್ಕೆ
ಎದೆಯ ತಂತಿ ಮೀಟುವುದೆಂತು

ಅಳುವ ರಾಗಕೆ ತಾಳ ಹಾಕುವರಾರು?
ಶುದ್ಧ ಶೃತಿಯ ಹಿಡಿದು ಹಾಡುವರಾರು?
ಶೃತಿ ಹಿಡಿದ ಮಳೆಯ ರಾಗಕ್ಕೆ
ನೂರು ಮರಗಳು ಮಾಧುರ್ಯ್ಯ ತುಂಬಿವೆ

ನನ್ನೆದೆಯ ತುಂಬೆಲ್ಲಾ
ನೂರುಭಾವಗಳು ಹೊರಬರಲಾರದೆ ಚಡಪಡಿಸುತ್ತಿದೆ
ಯಾವ ನೋವಿಗೆ ಯಾವ ರಾಗವ ಕಟ್ಟಲಿ?
ಯಾವ ಕೋಗಿಲೆಗೆ ಯಾವ ಹಾಡು ಹಾಡಲೆಂದು ಹೇಳಲಿ?

ನನ್ನೆದೆಯ ಭಾವಗಳೆಲ್ಲಾ
ಬತ್ತಿಹೋಗುವ ಮುನ್ನ
ಕಾಣದ ಕೋಗಿಲೆಯೇ ಬಾ
ಎನ್ನೆದೆಯೊಳಗೆ ನುಗ್ಗಿ ರಾಗರತಿಯ ಹಾಡು ಬಾ

No comments:

Post a Comment

ಅಪರಿಚಿತ ಅತಿಥಿ

  ಬಾ , ಓ   ಅಪರಿಚಿತ ಅತಿಥಿ ಭಯಬೇಡ ಅಪಾಯವಿಲ್ಲಿಲ್ಲ, ಸಂತಸವೆನೆಗೆ ನಿನ್ನನ್ನಿಲ್ಲಿ ಕಂಡು ಬಾ, ಹಾಡು ಬಾ ವಸಂತಗೀತೆ ।।   ಚಳಿಗಾಳಿ ಹೆದರಿ ಓಡಿಹೋ...