||ಆಹ್ವಾನ||

ಧರ್ಮ-ಅರ್ಥ-ಕಾಮ- ಪ್ರೇಮ ಒಲವುಗಳ
ನವಜೀವನದ ಸುಂದರ ಭವಿತವ್ಯಕ್ಕೆ
ನಾವು ಹೆಜ್ಜೆಯನ್ನಿಡುವ ಈ ಶುಭ ಸಂದರ್ಭದಲ್ಲಿ
ಹಿರಿಯ-ಕಿರಿಯ ಸಮಾನ ವಯಸ್ಸಿನ
ತಮ್ಮೆಲ್ಲರ ಸಮ್ಮುಖದಲ್ಲಿ ಭಾವುಕರಾಗಿ ಪ್ರಾರ್ಥಿಸುವೆವು.........


ನಮ್ಮಲ್ಲಿ ಚಿರಂತನ ಹುಮ್ಮಸ್ಸು,
ಕಷ್ಟ-ದುಃಖವನ್ನೆದಿರಿಸುವ ಆತ್ಮಸ್ಥೈರ್ಯ,
ಸತ್ಯವನ್ನರಸುವ ತಾಳ್ಮೆ, ವಿವೇಕ,
ಅಮೃತತ್ವದೆಡೆಗೆ ಒಯ್ಯುವ ಬೆಳೆಕಿನ ಜ್ಜಾನ,
ಶಾಂತಿ ನೆಮ್ಮದಿ ಆಯುರಾರೋಗ್ಯ
ಸಕಲೈಶ್ವರ್ಯಗಳ ಸಹ ಜೀವನದಲ್ಲಿ ಸಾಧಿಸುವ ಛಲ,
ಜೀವನ ವಿಕಾಸ ಬದುಕು ಬಂಗಾರಗೊಳಿಸಿಕೊಳ್ಳುವ ಏಕಾಗ್ರತೆ-ಶಕ್ತಿ ಪ್ರಾಪ್ತವಾಗಲಿಯೆಂದು ಹೃದಯಪೂರ್ವಕವಾಗಿ ಹರಸ ಬನ್ನಿರೆಂದು ಆತ್ಮೀಯವಾಗಿ ಆಹ್ವಾನಿಸುವ...........

2 comments:

  1. ಪ್ರಾರ್ಥನಾಪೂರ್ವಕವಾಗಿ ಆತ್ಮೀಯತೆಯ ಆಹ್ವಾನದ ಸಾಲುಗಳನ್ನು
    ಚೆನ್ನಾಗಿ ಬರೆದಿದ್ದೀರಿ..

    ReplyDelete
  2. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.ಇದನ್ನು ಬರೆದದ್ದು ನನ್ನ ಮದುವೆಯ ಆಮಂತ್ರಣ ಪತ್ರಕ್ಕಾಗಿ.

    ReplyDelete

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...