Saturday, October 23, 2010

-ಕಾಯುವ ಭಾಗ್ಯ-

ಇಂದೇಕೆ ಹೃದಯ ವೀಣೆ ಮಿಡಿಯುತಿದೆ
ಯಾವ ರಾಗಕೆ ಮನಸೋತು ನರಳುತಿದೆ
ಮನಕರಗಿ,ಹೃದಯ ಮರುಗಿ ತೊಳಲುತಿದೆ
ಭಾವಗಳು ಮನದೊಳಗೆ ತಿರುತಿರುಗಿ ಮೇಲೇರುತಿದೆ

ನಿನ್ನ ಕಂಡಾಗಲೇ ಮನದಲ್ಲೇನೋ ಹೊಸತನ
ಆ ಮಾತು, ಆ ನೋಟ ಕಾಣಬೇಕೆಂಬ ಕಾತರ
ನಿಂತಲ್ಲೇ ನಿಂತು ಕಾಯುವುದು ನಿನಗಾಗಿಯೇ
ಯಾರೇ ಕಂಡರೂ ನೀನ್ನೆಂದೇ ತಿಳಿಯುವ ಭ್ರಮೆ

ಬೇಸರವಿಲ್ಲ ನೀನು ಬರಲಿಲ್ಲವೆಂದು
ಪ್ರತಿದಿನ ಕಾಯುವೆ ನಿನಗಾಗಿ ಬೇಕೆಂದೇ
ನೀನು ಬರುವೆಯೆಂಬ ನೆವಸಾಕು ನನಗೆ ಜೀವಿಸಲು
ವಿರಹ ನೂರು ಬರಲಿ, ಕಾಯುವ ಭಾಗ್ಯ ನನಗೇ ಸಿಗಲಿ

ಪ್ರತಿಯೊಂದು ಕ್ಷಣವೂ ನಿನ್ನ ಜೊತೆಯಲ್ಲಿರುವೆ
ಕತ್ತಲಲ್ಲೂ, ಬೆಳಕಲ್ಲೂ,ದುಃಖ,ನೆತ್ತರಲ್ಲೂ ನೀನೆ ಕಾಣುವೆ
ನೀನಿಲ್ಲದ ಜಾಗವಾವುದೆಂದು ಹುಡುಕಬೇಕಿದೆ
ಎಲ್ಲೋ ಇರುವ ನಿನ್ನಲ್ಲೂ ನಾನೇ ಇರುವೆ

No comments:

Post a Comment

ಅವನು, ನಾನು – ಸಂಗೀತ

  ನಾನು ವೀಣೆ, ಅವನು ವೈಣಿಕ, ಸಂಗೀತವೇ ನಮ್ಮ ಜೀವನ ||   ನಾನು ಜೀವ, ಅವನು ದೈವ , ಹೊಮ್ಮಲಿ ಗಂಧರ್ವ ಗಾನ।।   ನಾನು ದಾರಿ, ಅವನೇ ಗ...