ನಿನ್ನ ನೋಡದ ಕಣ್ಣು ಏಕೆ ಕೃಷ್ಣಾ
ಬಾ ಬಾಳಿಗೆ ಚೈತನ್ಯವಾಗು ಕೃಷ್ಣಾ\\
ನನ್ನ ಕಣ್ಣಿನ ಬೆಳಕು ನೀನು;
ನನ್ನ ಜೀವನದ ಗುರಿಯು ನೀನು;
ನಿನ್ನ ನೋಡದೆ ನೊಂದಿಹೆನು ಕೊರಗಿ ಕೊರಗಿ
ಚೈತನ್ಯವಿಲ್ಲದೆ ಕಳೆಗುಂದಿದೆ ಬಾಳು ಕೊರಗಿ\\
ನಿದ್ದೆ ಬಾರದು,ಅನ್ನ ಸೇರದು;
ಮನ ಬಯಸಿದೆ ಕೃಷ್ಣ...ಕೃಷ್ಣಾ ಎಂದು;
ಯಾರಿಲ್ಲ ಇಲ್ಲಿ ನನ್ನ ಸಂತೈಸುವವರು
ಒರೆಸುವವರೂ ಇಲ್ಲ ಇಲ್ಲಿ ನನ್ನ ಬೆವರು\\
ಒಳಗಿರುವ ಆತ್ಮಶಕ್ತಿಯೇ ನೀನು;
ಹೊರಬಂದು ನನ್ನ ಸಂತೈಸು ನೀನು;
ದಾರಿ ತೋರು ಈ ಬದುಕಿಗೆ
ದಾರಿ ದೀಪವಾಗು ಬಾ ನನ್ನ ಬದುಕ ಹಾದಿಗೆ\\
Subscribe to:
Post Comments (Atom)
ಅಪರಿಚಿತ ಅತಿಥಿ
ಬಾ , ಓ ಅಪರಿಚಿತ ಅತಿಥಿ ಭಯಬೇಡ ಅಪಾಯವಿಲ್ಲಿಲ್ಲ, ಸಂತಸವೆನೆಗೆ ನಿನ್ನನ್ನಿಲ್ಲಿ ಕಂಡು ಬಾ, ಹಾಡು ಬಾ ವಸಂತಗೀತೆ ।। ಚಳಿಗಾಳಿ ಹೆದರಿ ಓಡಿಹೋ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment