Sunday, December 31, 2017

ಮರೆತು ಎಲ್ಲೋ ಬಿಟ್ಟಿದ್ದೇವೆ

ಮರೆತು ಎಲ್ಲೋ ಬಿಟ್ಟಿದ್ದೇವೆ
ಆ ವಸ್ತುವನ್ನು ಹೃದಯವೆನ್ನುತ್ತಾರೆ
ಭರವಸೆಯೂ ಅಪರಿಚಿತವಾಗಿದೆ
ನೋವೂ ಕೂಡ ಪರಕೀಯವಾಗಿದೆ
ಕನ್ನಡಿಯಲ್ಲಿ ಕಂಡ ಮುಖವೂ
ಕಳಚಿದ ಪೊರೆಯಂತೆ ತೋರಿದೆ
ಎಲ್ಲಿ ಬಿಟ್ಟೆವೋ ಜ್ಞಾಪಕ ಬರುತ್ತಿಲ್ಲ 
ನಮಗೆ ತಿಳಿದ ಅ ವ್ಯಕ್ತಿಯ ಮುಖ
ಎಲ್ಲೋ ಬಿಟ್ಟು ಮರೆತ್ತಿದ್ದೇವೆ
ಆ ವಸ್ತುವನ್ನು ಹೃದಯವೆನ್ನುತ್ತಾರೆ

ಪ್ರೇರಣೆ: ಹಿಂದಿ ಕವಿತೆ

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...