Saturday, December 30, 2017

ವರುಷಗಳುರುತಿದೆ

ವರುಷಗಳುರುತಿದೆ 
ಕಾಲಚಕ್ರದಣತಿಯಂತೆ:
ಜೊತೆಜೊತೆಗೆ ಹೆಜ್ಜೆ ಹಾಕು
ಹಿಂದೆ ಬೀಳದಂತೆ:
ಏಳೋ,ಬೀಳೋ
ಮುಂದುವರಿಯಲಿ ಪಯಣ:
ನೋವೋ,ನಲಿವೋ
ಅನುಭವಿಸು ಜೀವನ:
ನೂರಿರಲಿ ಹಳೆಯ ವರುಷದ
ನೋವುಗಳು:
ಕಣ್ಣೀರಲಿ ಎಲ್ಲವೂ ಕರಗಲಿ:
ನಂಬಿದವರು ಕೆೃಕೊಟ್ಟರೂ
ಹೃದಯ ಕೊರಗದಿರಲಿ:
ಕ್ಷಣ-ಕ್ಣಣಗಳಲಿ ಜೀವಿಸು:
ಅಣು-ಅಣುವಿನಲಿ ಸಂತಸಬಡು:
ಮನ-ಮನಗಳ ಪ್ರೀತಿಸು:

No comments:

Post a Comment

ಶ್ಯಾಮನಿಲ್ಲದ ಗೋಕುಲ!

  ಅಕೋ ನೋಡೇ ಸಖಿ ಶ್ಯಾಮ ಬಹನು। ವಿರಹ ತುಂಬಿದ ಮನಕೆ ಸಂತಸ ತಂದನು।।   ಮೂರು ದಿನಗಳಾಯ್ತು ಕೇಳಿ ಶ್ಯಾಮನ ಕೊಳಲ ಆ ದನಿಯ। ಅವನ ಮುಖವ ಕಾ...