ಇದೆಂಥ ಬೆಳಗು ನೋಡು
ಮಂಜಿನ ತೆರೆ ಮೇಲೇಳುತಿರೆ
ಮೆೃ-ಮನ ನವಿರೇಳುವುದು
ಪೂರ್ವದ ದಿಗಂತದ ಸೂರ್ಯೋದಯ
ರಕ್ತವರ್ಣ ಮನದಿ ಚೆೃತನ್ಯವ ಬಿತ್ತಿಹುದು
ಹೊಸ ಹೊಸ ಆಸೆಯ ಬಿತ್ತಿ
ತೆರೆಯ ಮರೆಯಲ್ಲಿ ಅವಿತಿಹ
ಉದಯ ರವಿ ಏನು ಅರಿಯದ
ಬಾಲಕನಂತೆ ಆಟವನ್ನಾಡುತಿಹನು
ಸೋಲಿನ ಭಾವದಲೇ ಒದ್ದಾಡುವ ನಮಗೆ
ಸೂರ್ಯೋದಯ ಪ್ರತಿ ದಿನದ ಗೋಳಿನ ವ್ಯಥೆ
ಏನಾದರೂ ಸಾಧಿಸೋ ಅವಕಾಶದ ಹೆದ್ದಾರಿಯಾಗಿರದೆ
ಕಾಲ ಕಳೆದು ನೋವ ಮೆಲುಕು ಹಾಕುವ ಇಳಿ ಸಂಜೆಯಾಗಿದೆ
ಒಂದಕ್ಕೂಂದು ತಾಳೆಯಾಗದ
ಬೇಡದ ಸಮಸ್ಯೆಗಳನ್ನೇ ಉಸಿರಾಗಿಸಿ
ಎಲ್ಲೋ ಏನನ್ನೋ ಹುಡುಕುತಾ
ನಮ್ಮ ನಾವೇ ಹಳಿಯುವ ಸಂತೆಯಾಗಿದೆ
ಇದೆಂಥ ಬೆಳಗು ನೋಡು
"ಸುಪ್ರಭಾತ" ಮನವ ಮುದಗೊಳಿಪ ಹಾಡು
"ಸ್ವರ್ಗ" ಅನುಭವಿಪಗೇ ಗೊತ್ತು
ಸಾವಿರ ಸಂದೇಶಗಳ ಅರಿವ ಹೊತ್ತು
No comments:
Post a Comment