ಮನವು ಕೊರಗಿದೆ
ಒಳ ಭಾವಗಳ ತೊಳಲಾಟಕೆ
ಆರ್ತನಾದ ನಿಲ್ಲದಾಗಿದೆ
ಒಳತೋಟಿಗಳ ಸಂಚಿಗೆ
ನೋವು ಹೆಚ್ಚಾಗಿದೆ
ನಿಲ್ಲದ ಪ್ರಹಾರಗಳಿಗೆ
ದಿಕ್ಕುಗೆಟ್ಟು ಓಡುತಿದೆ
ತಲ್ಲಣ ಸುನಾಮಿಯಂತಾಗಿದೆ
ನಿನ್ನ ಆಟ ಬಲವಾಗಿದೆ
"ನಾನು" ಎಂಬಾಟ ಸವಕಲಾಗಿದೆ
ಅರಿವಿನ ಬೆಳಕು ತೆರೆಕಂಡಿದೆ
"ನಾನು" ಎಂಬ ಭಾವ ಶರಣಾಗಿದೆ
No comments:
Post a Comment