ಮಂಜಿನ ತೆರೆ ಸರಿಯುತ್ತಿದೆ
ದೂರ ದೂರದಿಂದ ಹರಿದು ಬರುತ್ತಿದೆ
ಬೆಳಕೆಂಬ ಅದ್ಭುತ:
ಬೆಳಕೆಂಬ ಬೆಡಗು:
ಇಳೆಯು ಆ ಬೆಡಗಿಗೆ ಮೋಹಗೊಂಡಿದೆ
ಮಂಜಿನ ಹೊದಿಕೆ ಮಾಯವಾಗಿ
ಹಸಿರ ಸೊಬಗು ಅನಾವರಣಗೊಂಡಿದೆ
ಹಕ್ಕಿಗಳೆಲ್ಲಾ ಮೋಡಿಗೊಳಗಾಗಿ ಕಲರವ ಮಾಡಿವೆ
ಇದು ಬರಿ ಬೆಳಗಲ್ಲೋ ಅಣ್ಣ
ಸೃಷ್ಟಿಯ ಸೊಬಗ ತುಂಬಿಕೊಳ್ಳೋಕಣ್ಣಾ:
No comments:
Post a Comment