Monday, December 25, 2017

ಭರವಸೆ

ಆಗಸವೆಲ್ಲಾ ಶುಭ್ರವಾಗಿದೆ
ಮನಸುಗಳಲ್ಲಿ ಗೊಂದಲ ತುಂಬಿದೆ
ದಾರಿ ದೂರ ಸವೆಸಬೇಕಿದೆ:

ಪ್ರಜಾ ಸೇವಕರು ದಾರಿ ತಪ್ಪಿದ್ದಾರೆ:
ಗುರುಗಳು ಯೋಗ್ಯತೆ ಕಳೆದುಕೊಂಡಿದ್ದಾರೆ:
ಜನರು ಸ್ವಾರ್ಥಿಗಳಾಗಿದ್ದಾರೆ:
ಗುರಿಯಿಲ್ಲ,ದಾರಿಯುೂ ಕಾಣುತ್ತಿಲ್ಲ:

ಅಗಸದ ಅಂಚಿಗೆ ಕಣ್ಣು ನೆಟ್ಟಿದೆ:
ಭರವಸೆಯಿದೆ ನಾಳೆ ರವಿ ಮೂಡುವನೆಂದು:
ಬದಲಾವಣೆಯ ಗಾಳಿ ಬರುವುದಿದೆ
ಪೂರ್ವದಿಂದಲೋ?
ಉತ್ತರದಿಂದಲೋ?
ಬದಲಾವಣೆಯ ಹರಿಕಾರ ಬರುವನು
ಎಲ್ಲರ ಮನದಲ್ಲೂ ಚೆೃತನ್ಯಬಿತ್ತುವನು
ನಾಳೆ,ನಾಳೆ ನಮ್ಮವು
ಅದೊಂದೇ ಭರವಸೆ ಇಂದು ನಿದ್ರಿಸಲು

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...