ಬನ್ನಿ ಮತ್ತೆ ದೀಪ ಬೆಳಗೋಣ
ಗಾಳಿ ಬೀಸಿ ಉರಿವ ದೀಪ ಆರಿದೆ
ಕತ್ತಲು ಕವಿದು ಭಯವನೆ ಬಿತ್ತಿದೆ
ಕತ್ತಲು ನುಂಗುವ ಮುನ್ನ ,
ದಾರಿ ಕಾಣದೆ ಬೀಳುವ ಮುನ್ನ,
ಕೃೆಹಿಡಿದು ಬಾ,ಬೆಳಕ ತಾ
ಮನದಲಿ ಕಿಡಿಯ ಹೊತ್ತಿಸು
ಲೋಕವೆಲ್ಲಾ ಬೆಳಗಲಿ
ಮನ ಮನಗಳು ಬೆಳಗಲಿ
ಗಾಳಿ ಬೀಸಿ ಉರಿವ ದೀಪ ಆರಿದೆ
ಬನ್ನಿ ಮತ್ತೆ ದೀಪ ಬೆಳಗೋಣ//
No comments:
Post a Comment