ಮುೂಡಣದ ಅಂಚಿನಲ್ಲಿ
ಮುೂಡುತಿದೆ ಚಿನ್ನದುಂಗುರ
ಆಗಸವೆಲ್ಲಾ ರಕ್ತವರ್ಣ
ಮನದ ತಿಮಿರವ ಗೖೆದ
ಗುರುತಿಗೆ ರಕ್ತಧೋಕುಳಿ
ದಿನಂಪ್ರತಿ ನಡೆಯಬೇಕು
ಈ ಕದನ ,ಹೋರಾಟ
ರವಿಯ ಕಿರಣಗಳು
ಹೊತ್ತು ತಂದಿವೆ ನೂರು ಸಂದೇಶ
ಅರಿಯದಾಗಿದೆ
ಅಜ್ಞಾನದ ಕತ್ತಲಲ್ಲಿ ಮುಳುಗಿದೆ
ಅರಿವಿಗಾಗಿ ಈ ಹೋರಾಟ
ಉಳಿವಿಗಾಗಿ ಈ ಹೋರಾಟ
ಉಸಿರಿರುವವರೆಗೆ ಈ ಹೋರಾಟ
ಉಸಿರುನಿಂತ ಮೇಲೆ ಮಣ್ಣಾಗುವುದೀ ಹಾರಾಟ
No comments:
Post a Comment