Wednesday, December 20, 2017

ಏಳು,ಎದ್ದೇಳು

ಏಳು,ಎದ್ದೇಳು ಬೆಳಗಾಯಿತೆಂದುಲಿಯುತಿದೆ 
ಹಕ್ಕಿಗಳು:
ಮೂಡಣದಲ್ಲಿ ಕೆಂಪುಚೆಲ್ಲಿ ಉದಯವಾಯಿತೆಂದುಲಿಯುತಿದೆ 
ಹಕ್ಕಿಗಳು:
ಮಂಜು ತುಂಬಿದಾಗಸದಲ್ಲಿ
ಬೆಂಕಿಯ ಚೆಂಡು ಮೇಲೆರುತಿರೆ
ಸೃಷ್ಟಿಯ ಸೊಬಗಿಗೆ ಬೆರಗಾಗಿ
ಹಾಡುತಿದೆ ಹಕ್ಕಿಗಳು:
ಲೋಕಯಾತ್ರೆಯ ಪಥಿಕ ಮೋಡಗಳ 
ಮೇಲೆ ಸೂರ್ಯರಶ್ಮಿಯು ಬಿದ್ದು 
ಕಾಮನಬಿಲ್ಲು ಮೂಡಿ ಬೆಳಗಾಯಿತೆಂದು ಸ್ವಾಗತಿಸಿದೆ:
ಹಸಿರು ಎಲೆಗಳ ಮೇಲೆ ಸಲಿಲ ನರ್ತನ ಮಾಡಿ 
ಬೆಳಗಿನ ಕಿರಣಗಳಿಂದ ಮುತ್ತಾಗಿ ರೋಮಾಂಚನ 
ಮೂಡಿಸಿ ಬೆಳಗಾಯಿತೆಂದು ಸ್ವಾಗತಿಸಿದೆ:

No comments:

Post a Comment

ಮೌನ ನೃತ್ಯ

ಎತ್ತ ಹೋದರೂ ಮತ್ತೆ ಮತ್ತೆ ಆವರಿಸುತ್ತಿದೆ ; ಬೇಡ ಬೇಡವೆಂದರೂ ಪ್ರೀತಿಯಿಂದಲೇ ಬಳಸುತ್ತಿದೆ ; ಕಣ್ಣ ತೆರೆದರೂ ಅದೇ ! ಕಣ್ಣು ಮುಚ್ಚಿದರೂ ಅದೇ ! ರು...