ನನ್ನ ತಪ್ಪೇನು?
ನಾನೇಕೆ ಬಲಿಯಾದೆ?
ನಾನೊಂದು ಸಣ್ಣ ಗಿಡವಾಗಿದ್ದಾಗ
ಎಲ್ಲಿಂದಲೋ ತಂದು ಜಾಗ ಕೊಟ್ಟವರು
ಬೆಳೆ ಆಗಸದೆತ್ತರಕೆ ಎಂದವರು,
ಕರುಣೆಯ ನೀರುಣಿಸಿ ಪೋಷಿಸಿದ
ಕರುಣಾಳು ನೀವೇ ಅಲ್ಲವೇ!
ನಿಮ್ಮ ಮುಂದೆ ಬೆಳೆದು ನಿಂತು
ಹೂವ ಸುರಿಸಿದೆ ಬರುವ ಹಾದಿಯಲ್ಲಿ:
ಉಸಿರಿಗೆ ಉಸಿರಾಗಿ ಪ್ರಾಣವಾಯುವನಿತ್ತೆ,
ಬೆವರಿ ಬಂದವರಿಗೆ ನೆರಳ ಕೊಟ್ಟೆ:
ಬಿಸಿಲ ಬೇಗುದಿಗೆ ಬೆಂದಾಗ ಮೋಡಗಳ
ತಡೆದು ಮಳೆಯ ಹನಿಸಿದೆ:
ಗಾಳಿ-ಶಬ್ದ ಮಾಲಿನ್ಯವನುಂಡು ಸಂರಕ್ಷಿಸಿದೆ:
ನನ್ನ ಉದ್ದೇಶಕ್ಕಾಗಿ ನೆಲೆ ನಿಂತಿದ್ದೆ:
ಸೋಮಾರಿಯಾಗಿರಲಿಲ್ಲ:
ಅನಾರೋಗ್ಯವಂತೂ ಕಾಡಿರಲಿಲ್ಲ:
ವಯಸ್ಸಿನ್ನೂ ಹದಿನಾರು
ಆದರೂ ನನ್ನ ಮೇಲೆ ಈ ಧಾಳಿ ಸರಿಯೇ?
ನನ್ನ ತಪ್ಪೇನು?
ನಾನೇಕೆ ಬಲಿಯಾದೆ?
No comments:
Post a Comment