ಬಾಲ್ಯದ ಕಾಲವೊಂದಿತ್ತು,
ಅದರಲ್ಲಿ ಖುಷಿಯೆಂಬ
ಸಂಪ್ಪತ್ತಡಗಿತ್ತು:
ಚಂದಮಾಮನ ಹಿಡಿಯುವ
ಆಕಾಂಕ್ಷೆಯಿತ್ತು,
ಹೃದಯವೊ ಚಿಟ್ಟೆಗಳಿಗೆ
ಮನಸೊತಿತ್ತು:
ಬೆಳಗಾಗುವುದರ
ಪರಿವೆಯೇ ಇರಲಿಲ್ಲ:
ಸಂಜೆಯಲ್ಲಿ ಆಡದ
ಜಾಗಗಳಿಲ್ಲ:
ದಣಿದು, ಆತುರದಿಂದ ಶಾಲೆಯಿಂದ ಬಂದು,
ಆಟ ಆಡಲು ಹೋಗಬೇಕಿತ್ತು
ಅಮ್ಮನ ಕಥೆಗಳು,
ಸಂತಸದ ಮಾಯಾಲೋಕವದು:
ಮಳೆಯಲ್ಲಿ ಕಾಗದದ ಹಡುಗುಗಳಿದ್ದವು,
ಎಲ್ಲಾ ಕಾಲವೂ ಸಂತಸದ ಕ್ಷಣಗಳು:
ಪ್ರತಿ ಆಟಗಳಲ್ಲೂ ಗೆಳೆಯರಿದ್ದರು,
ಎಲ್ಲಾ ಸಂಬಂದಗಳನ್ನೂ ನಿಭಾಯಿಸಬೇಕಿತ್ತು:
ಆಟದಲ್ಲಾದ ನೋವಿಗೆ ನಾಲಗೆಯಿಲ್ಲ,
ಗಾಯಗಳಿಗೂ ಲೆಕ್ಕವಿಲ್ಲ:
ಅಳುವುದಕ್ಕೆ ಕಾರಣಗಳೇ ಇರಲಿಲ್ಲ,
ನಗುವುದಕ್ಕೆ ಕಾರಣಗಳೇ ಬೇಕಿರಲಿಲ್ಲ:
ಏಕಾದರೂ ಇಷ್ಟು ದೊಡ್ಡವರಾದೆವೊ,
ಇಂದಿನಕ್ಕಿಂತ ಬಾಲ್ಯದ ಕಾಲವೇ ಸೊಗಸಾಗಿತ್ತು.........😀
ಪ್ರೇರಣೆ: ಹಿಂದಿ ಕವಿತೆ
ಕವಿ:ಅನಾಮಿಕ
No comments:
Post a Comment