ತುಂತುರು ಮಳೆ
ಝುಳು ಝುಳು ಹರಿವ ನೀರ ಮಂಜುಳ ಗಾನ
ಮುದಗೊಂಡು ತೇಲುವ ಮನ
ನೀರವ ಬೆಳಗು
ಚುಮು ಚುಮು ಕೊರವ ಚಳಿ
ಹಸಿರು ಹೊದ್ದು ಮಲಗಿಹ ಇಳೆ
ಸುಯ್ ಗುಟ್ಟುವ ಗಾಳಿ
ಹಕ್ಕಿಗಳ ಕಲರವದ ಸುಪ್ರಭಾತ
ಆಗಸದಂಚಲ್ಲಿ ಚಿನ್ನದ ಕಿರಣಗಳು
ಹೃದಯಲ್ಲಿ ಗುರಿಯ ಮುಟ್ಟುವ ಆಸೆ
ದಿನದ ಅವಕಾಶಗಳ ಹೆದ್ದಾರಿಯ ತೆರೆಯುವ ಓ ದಿನಕರ ನಿನಗೆ ನಮನ
Super
ReplyDelete