Monday, December 18, 2017

ಲೋಕಯಾತ್ರೆಯಲಿ ನೀ ಮಿಯ್ದು

ಮಂತ್ರಘೋಷಗಳಿಲ್ಲ
ಛತ್ರ ಚಾಮರಗಳಿಲ್ಲ
ಫಲಪುಷ್ಪಗಳ ನೆೃವೇದ್ಯವಿಲ್ಲ
ಧೂಪ ಮಂಗಳಾರತಿಯಿಲ್ಲ
ರಂಗೋಲಿ ರಕ್ತದೋಕುಳಿ ಚೆಲ್ಲಿ
ಪೂರ್ವದಂಚಿನಲಿ ಮುಂಜಾವಿನ
ರಥೋತ್ಸವ ನಿಶಬ್ದವಾಗಿ ನೆರವೇರುತಿದೆ
ಕಂಡವರ ಕಣ್ಣುತುಂಬುವುದು
ಜೀವನ ಶುಭಯಾತ್ರೆಯ ಪಲ್ಲಕ್ಕಿ
ತೆರೆಳುತಿದೆ ಮೆಲ್ಲಗೆ ಸುಳಿವುಕೊಡದೆ
ಅನುಭವಿಪನೇಬಲ್ಲ ಅಮೃತದ ರುಚಿ
ಮಂದಭಾಗ್ಯರಿಗಿದು ಕಷ್ಟಸಾಧ್ಯ
ಲೋಕಯಾತ್ರೆಯಲಿ ನೀ ಮಿಯ್ದು
ಧನ್ಯತೆ ಪಡೆಯುವೆಯೋ ನೀ ಹೇಳು
ಕಣ್ಮರೆಯಾಗುವ ಮುನ್ನ ಅನುಭವಿಸು

No comments:

Post a Comment

ಈ ಸಾವು ನ್ಯಾಯವೇ?

ಈ ಸಾವು ನ್ಯಾಯವೇ ?, ಈ ಸಾವು ನ್ಯಾಯವೇ ? ನಮ್ಮಭಿಮಾನಕ್ಕೆ ಹದಿನೆಂಟರ ಹರೆಯವಂತೆ; ಹಪಹಪಿಸಿದೆವು ವಿಜಯಕ್ಕೆ ಬಕ ಪಕ್ಷಿಯಂತೆ ;    ಹದಿನೆಂಟು ವರ್ಷಗಳ ...