Saturday, December 30, 2017

ನೋವೇ ಬಾ ನೋವೇ

ನೋವೇ ಬಾ ನೋವೇ ನೀ ಬಂದಾಗಲೇ
ಆತ್ಮವಿಮರ್ಶೆ ಮಾಡಿಕೊಳ್ಳಲು ಸಾಧ್ಯ:
ಬಿಳಿಯಾಗಿ ಕಾಣುವುದೆಲ್ಲಾ ಹಾಲಲ್ಲ,
ಎಂಬುದಾಗಲೇ ತಿಳಿಯುವುದು:
ಜನರ ಮುಖವಾಡ ಕಳಚುವುದು:
ಗೋಮುಖ ವ್ಯಾಗ್ರತನ ಕಾಣುವುದು:
ಕಡೆಗಣಿಸುವವರು ನಮ್ಮವರೇ,
ನಮ್ಮ ನಂಬಿಕೆ ಸುಳ್ಳಾಗುವುದು:
ಮನವು ಕೊರಗುವುದು:
ಅವರ ಜೊತೆಯೇ ಹೆಜ್ಜೆ ಹಾಕಬೇಕು:
ಮುಳ್ಳುಗಳ ನಡುವಿನ ಪಯಣ
ನೋವುಗಳು ಸಹಜ:
ಅರಗಿಸಿಕೊಳ್ಳಬೇಕು,
ಗಟ್ಟಿಯಾಗಬೇಕು,
ಎದೆಗುಂದಬೇಡ,
ಮುನ್ನುಗ್ಗು:

No comments:

Post a Comment

ಮೌನ ನೃತ್ಯ

ಎತ್ತ ಹೋದರೂ ಮತ್ತೆ ಮತ್ತೆ ಆವರಿಸುತ್ತಿದೆ ; ಬೇಡ ಬೇಡವೆಂದರೂ ಪ್ರೀತಿಯಿಂದಲೇ ಬಳಸುತ್ತಿದೆ ; ಕಣ್ಣ ತೆರೆದರೂ ಅದೇ ! ಕಣ್ಣು ಮುಚ್ಚಿದರೂ ಅದೇ ! ರು...