ಬಾ ರವಿ, ಬಾ ಉದಯಿಸು ಬಾ
ನಿನಗಾಗಿಯೇ ಕಾಯುತಿಹೆನು,
ಧ್ಯಾನಾಸಕ್ತನಾಗಿ ಆಹ್ವಾನಿಸುವೆ
ಬಾ ಮನಸಿಗೆ,ಬಾ ಹೃದಯಕೆ
ದಿನವೂ ಮನವ ತೊಳೆಯುತಿಹೆನು
ಧ್ಯಾನದಿಂದಲಿ ಜನ್ಮಗಳ ಪಾಪಕೊಳೆ,
ಕರಗದು ಇಂದು ಅಂಟಿದೆ ಬಲವಾಗಿ
ನಿನ್ನ ಕರುಣೆಯಿರೆ ಅಸಾಧ್ಯವದಾವುದು
ಮನಕೆ ತಾಳ್ಮೆಯ ನೀಡು
ಸತತ ಪ್ರಯತ್ನದ ಕಡೆ ಗಮನವೀಯುವಂತೆ ಮಾಡು
ಸೋಲೋ,ಗೆಲುವೋ ಸದಾ ಕಾಯಕದಲ್ಲಿಡು
ಮರತೆಯೆನ್ನದಿರು ಆಸರೆ ನೀಡು
No comments:
Post a Comment