ಹೇಳದೆ ಏಕೆ ಬರುವೆ?
ಬಾ ಎಂದು ಆಹ್ವಾನಿಸಿಲ್ಲ
ಕಾಡಿಸಿ ಬರುವೆ , ಮನವ ಕೆಡಿಸಿಹೋಗುವೆಯೇಕೆ?
ಅದೇ ರಾಗ,ಅದೇ ಹಾಡು
ಕೇಳಲಾರೆ ನಿನ್ನ ಮಾತು
ಮನವು ಮುರಿದ ಕನ್ನಡಿ
ನೋಡಲಾರೆ ನನ್ನದೇ ಮುಖವಾಡ
ನೆನಪೇ ಏಕೆ ಕಾಡುವೆ?
ಅಂಡಲೆದು ಸಾಕಾಗಿ ತಣಿದಿರುವೆ
ಮತ್ತೆ ನೆನಪಾಗಿ ಕಾಡಬೇಡ
ನೆಮ್ಮದಿಯ ಬಯಸಿ ಕಾದಿರುವೆ
ಎಲ್ಲವನೂ ಮರೆತು ಹಾಯಾಗಿ
ಬದುಕ ಬಯಸಿ ಬಂದವನು
ಕಳೆದುಹೋದುದೆಲ್ಲಾ ಮತ್ತೆ ನೆನಪಾಗಿ
ಮನದ ಮೇಲೆ ದಾಳಿಮಾಡಿ ಹಗೆ ತೀರಿಸಿಕೊಳ್ಳುತ್ತಿಹರೇನು?
No comments:
Post a Comment