ಕೇಳಿಸದೆ ಹಕ್ಕಿಗಳಿಂಚರ.?

ಕೇಳಿಸದೆ ಹಕ್ಕಿಗಳಿಂಚರ
ಬೆಳಗಾಯಿತೆಂದುಲಿಯುತಿದೆ:
ಕತ್ತಲೆ ಕಳೆದು ಬೆಳಕನೆ ಚೆಲ್ಲಿ,
ಅವ್ಯಕ್ತಭಾವ ಅನುಭವಿಸೆಂದುಲಿಯುತಿದೆ:

ಮಂಜಿನ ತೆರೆಯೇರುತಿದೆ 
ಹೋಮದ ಹೊಗೆಯಂತೆ:
ಚೆೃತನ್ಯ ಹೊಮ್ಮುತಿದೆ ಬೆಳಗಾಯಿತೆಂದು:
ಹೃದಯದ ಬಾಗಿಲ ತಟ್ಟಿದೆ
ಸಾಕು ನಿದಿರೆಯ ಸಹವಾಸ
ಕಾಯಕದ ಕೆೃಹಿಡಿಯೆಂದು:
ತಿಮಿರವ ದಾಟಿ ಮುನ್ನಡೆಯೆಂದು:
ಅತೀಂದ್ರಿಯ ಶಬ್ದತರಂಗಗಳ ಹೊಮ್ಮಿಸಿ ಎಚ್ಚರಿಸುತಿದೆ :
ಬಂಗಾರದ ಬೆಳಗಾಯಿತೆಂದು:
ಜೀವನವ ಬಂಗಾರಗೊಳಿಸಿಕೋಯೆಂದು:

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...