Friday, December 29, 2017

ಬೆರಗಿನ ಬೆಳಕೆ

ಬೆರಗಿನ ಬೆಳಕೆ
ಏರಲಿ ದಿಗಂತಕೆ:
ಹೊತ್ತಿಸಿ ಹೊರಟಿ
ಸಾಲು ಸಾಲು  ಹಣತೆ
ಸಂತಸದ ಗಳಿಗೆ,
ಬೆಳಕ ಚೆಲ್ಲಬೇಕು ಇಳೆಗೆ
ಬೆಳಕ ಚೆಲ್ಲಿ ಪರಮಾರ್ಥದ ಗಳಿಕೆ:
ತಾನುರಿದು ಪರರಿಗೆ 
ಬದುಕುವುದು ಏಳಿಗೆ:
ಮುಂದೆ ಸಾಗಲಿ ,
ಹೆಜ್ಜೆ ಹೆಜ್ಜೆ ಸೇರಲಿ,
ಮನಕುಲ ಬೆಳಗಲಿ:
ಮಾನವತೆಯ ಕಕ್ಕುಲತೆ 
ದಿಗಂತಕ್ಕೇರಲಿ//

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...