ಏನ ಬೇಡಲಿ ನಿನ್ನ ದೇವ?
ಬಿನ್ನಹಗಳಿವೆ ಅನಂತ
ಕೇಳಿದ ವರಗಳ ಕೊಡುವ
ಕಲ್ಪವೃಕ್ಷ ನೀನು,ನಾ ಬಲ್ಲೆ
ಅಪರಿಮಿತ ಸುಖಗಳು ಬೇಕೆನ್ನಲೇ!
ಅಗಣಿತ ಸಂಪತ್ತಿಗೆ ಆಸೆ ಪಡಲೇ!
ಮನವು ಗೊಂದಲದಲ್ಲಿದೆ
ಆಯ್ಕೆಯೇ ಇಲ್ಲಿ ಕಠಿಣ
ನಾ ಬಲ್ಲೆ ,ಅವುಗಳಲ್ಲಿ ನೀನಿಲ್ಲ
ಈ ಲೋಕದಷ್ಟೃೆಶ್ವರ್ಯಗಳೂ ಬೇಡ
ಈ ಲೋಕದ ಯಾವ ಸುಖಗಳೂ ಬೇಡ
ಇಲ್ಲಿ ಎಲ್ಲವೂ ತಾತ್ಕಾಲಿಕ
ನೀ ಮನದೊಳು ನಿಲ್ಲು
ನಿನ್ನದೇ ಧ್ಯಾನವಿರಲಿ ಮನದಲ್ಲಿ
ಅನವರತ ನೀ ನನ್ನ ಉಸಿರಾಗು ,
ಶರಣಾಗಿಹೆನು ಸಲಹೆನ್ನನು ತಂದೆ//
No comments:
Post a Comment