Tuesday, December 26, 2017

ನೆಮ್ಮದಿ ಜಗದಲಿ ಆವರಿಸಲಿ

ಆಗಸದೆಲ್ಲಡೆ ಧೂಳು ತುಂಬಿದೆ:
ರಥವನೇರಿ ಹೊರಟಿಹನು ರವಿ
ಕುದುರೆಗಳ ನಾಗಾಲೋಟಕ್ಕೆ ಬೆದರಿ ಬೆವೆತಿದೆ ಮಂಜು:
ಹನಿ ಹನಿಯಾಗಿ ಜಾರುತಿದೆ ಇಳೆಗೆ,
ಹೊನ್ನಬೆಳಕಿಗೆ ಇಳೆಯು ನಾಚಿದೆ:
ಹಕ್ಕಿಗಳ ಚಿಲಿಪಿಲಿ ಗಾಯನ ಹೊಮ್ಮಿದೆ:
ಮನದ ತುಂಬೆಲ್ಲಾ ಚೆೃತನ್ಯ ತುಂಬಿದೆ:
ಸೂರ್ಯೋದಯದ ರಸಾನುಭವಕೆ ಮೆೃನವಿರೇಳುತಿದೆ:
ಹೊಸ ಹೊಸ ದರ್ಶನಕೆ ಮನವು ತೆರೆದಿದೆ:
ಒಳ್ಳೆಯ ವಿಚಾರಗಳು ದಶದಕ್ಕುಗಳಿಂದಲೂ ಮನವ ತಲುಪಲಿ:
ಜೀವನ ಪ್ರೀತಿ ಹೆಚ್ಚಾಗಲಿ,
ಧ್ವೇಷಭಾವಗಳು ತೊಲಗಲಿ,
ಶಾಂತಿ,ನೆಮ್ಮದಿ ಜಗದಲಿ ಆವರಿಸಲಿ:

No comments:

Post a Comment

ಮೌನ ನೃತ್ಯ

ಎತ್ತ ಹೋದರೂ ಮತ್ತೆ ಮತ್ತೆ ಆವರಿಸುತ್ತಿದೆ ; ಬೇಡ ಬೇಡವೆಂದರೂ ಪ್ರೀತಿಯಿಂದಲೇ ಬಳಸುತ್ತಿದೆ ; ಕಣ್ಣ ತೆರೆದರೂ ಅದೇ ! ಕಣ್ಣು ಮುಚ್ಚಿದರೂ ಅದೇ ! ರು...