ಓ ಮನವೇ ವ್ಯಥೆಯ ಪಡದಿರು
ಇಂದು ಸಿಗದಿದ್ದರೇನಂತೆ
ಇಂದೇ ಕೊನೆಯಲ್ಲ
ನಾಳೆ ನಿನ್ನದೇ,
ಕೊರಗದಿರು,ಮರುಗದಿರು
ಅಗಾಧ ಶಕ್ತಿಯ ಕೊರಗಿ
ವ್ಯಯಿಸದಿರು
ಇದೊಂದು ಸತ್ವ ಪರೀಕ್ಷೆಯಷ್ಟೇ
ಕೊರಗಿ ಸೋಲದಿರು
ಏನು ಆಗಿಲ್ಲವೆಂದು ತಾಳ್ಮೆಯಿಂದಿರು
ತಾಳುವಿಕೆಗಿಂತ ತಪವು ಇಲ್ಲ
ತಿಳಿದವರ ನುಡಿಯ ಕೇಳು
ಮುಂದೆ ಗೆಲುವು ನಿನ್ನದೇ
ಪ್ರಯತ್ನ ನಿನ್ನದಾಗಿರಲಿ
ಫಲಾಫಲಗಳ ಅಪೇಕ್ಷೆ ಬೇಡ
ಲವಲೇಶವೂ ಲೋಪವಿರದ
ಪ್ರಾಮಾಣಿಕ ಪ್ರಯತ್ನ ಮಾತ್ರ ನಿನ್ನದಾಗಲಿ
No comments:
Post a Comment