Tuesday, December 12, 2017

ಅಂಧಕಾರವೇಕಿದೆ?

ಲೋಕದ ಕಣ್ಣು ತೆರೆಯುತಿದೆ
ಮೆೃಮನಗಳು ಅರಳುತಿದೆ
ಸೃಷ್ಟಿಯ ಸೊಬಗಿಗೆ ಏನೆನ್ನಲಿ?
ಅದ್ಭುತವೆನ್ನಲೋ?ಚಮತ್ಕಾರವೆನ್ನಲೋ?
ಜಗವ ಬೆಳಗಲು ನೀನಿರಲು
ಈ ಜಗದಲ್ಲಿನ್ನೂ ಅಂಧಕಾರವೇಕಿದೆ?
ವಿಚಿತ್ರ ಆದರೂ ನಿಗೂಢ
ದ್ವೇಷ,ಮತ್ಸರ,ಸ್ವಾರ್ಥಗಳು ನಲಿದಿವೆ
ಒಳಗಣ್ಣಿಗೆ ಭ್ರಮೆಯಾವರಿಸಿದೆ
ಕಂಡದ್ದೇ ಸತ್ಯ,ವಿವೇಚನಾರಹಿತ
ಬತ್ತಿಯಿಡಲನೇಕರು ಸರದಿಯಲ್ಲಿದ್ದಾರೆ
ಒಳಗಣ್ಣಿದೆಯೆಂಬುದೇ ಮರೆತಿದೆ
ಒಳಗಣ್ಣ ತೆರೆಯಲದಾವ 
ಸೂರ್ಯನುದಯಿಸಬೇಕೋ?

No comments:

Post a Comment

ಮೌನ ನೃತ್ಯ

ಎತ್ತ ಹೋದರೂ ಮತ್ತೆ ಮತ್ತೆ ಆವರಿಸುತ್ತಿದೆ ; ಬೇಡ ಬೇಡವೆಂದರೂ ಪ್ರೀತಿಯಿಂದಲೇ ಬಳಸುತ್ತಿದೆ ; ಕಣ್ಣ ತೆರೆದರೂ ಅದೇ ! ಕಣ್ಣು ಮುಚ್ಚಿದರೂ ಅದೇ ! ರು...