Thursday, December 21, 2017

ಮೂಡಣದ ದೀಪ

ಇದೇನು?, ನೀನೇ ಹೇಳು ಗೆಳೆಯ
ಮೂಡಣದಲ್ಲಿ ದೀಪವೊಂದು
ಉರಿಯುತಿಹುದು,ಯಾರು ಹಚ್ಚಿದ ದೀಪವೊ?
ಬೆಳಕೆಷ್ಟೆಂದರೆ ಲೋಕವೆಲ್ಲಾ ಸ್ಪಷ್ಟವಾಗಿ ಕಾಣುತಿಹುದು
ಕತ್ತಲಿನಿಂದ ಆವರಿಸಿದ್ದ ಈ ಲೋಕ,
ಒಮ್ಮೆಲೆ ಚೆೃತನ್ಯ ಬಂದಂತಾಗಿದೆ
ಚಳಿ,ಗಾಳಿಗೆ ನಲುಗುತ್ತಿದೆವು
ಏನೂ ಕಾಣದಾಗಿ ದಿಕ್ಕೇ ತೋಚದಂತಾಗಿತ್ತು
ಬಹು ನಿರೀಕ್ಷೆಯಿಂದ ನೀ ಬರುವುದ ಕಾಯುತ್ತಿದ್ದೆ
ಯಾರು ಆ ದೀಪವ ಹೊತ್ತು ತಂದವರು?
ಈ ಕತ್ತಲ ಲೋಕವ ಬೆಳಗಿದವರಾರು?

No comments:

Post a Comment

ಅಜೇಯ

ಕಾಳ ರಾತ್ರಿಯ ಕತ್ತಲು ನನ್ನ ಆವರಿಸಿ ಕಾಡಿದೆ , ಕಪ್ಪು ಕತ್ತಲು ಅಡಿಯಿಂದ ಮುಡಿಯವರೆಗೂ ಕಟ್ಟಿಹಾಕಿ . ಎಲ್ಲಾ ದೇವರುಗಳಿಗೂ ನನ್ನ ಅನಂತಾನಂತ ಧನ್ಯವಾದಗ...