ಲೋಕವ ಬೆಳಗಲು ದೀಪವೊಂದು
ಪ್ರತಿದಿನವೂ ತನ್ನೆತಾನುರಿಯುತಿದೆ
ಆವ ಪ್ರಶಸ್ತಿ,ಬಿರಿದು ಬಾವಲಿಗೂ
ಆಸೆ ಪಡದೆ ಕರ್ಮಯೋಗಿ ತಾನೆಂದು
ಜಗಕೆ ಶೃತಪಡಿಸುತಿದೆ
ಯಾರಪ್ಪಣೆಗೂ ಕಾಯದೆ
ನಡೆಯುತಿದೆ ನಿತ್ಯಕಾಯಕ
ಜಗದ ಚೆೃತನ್ಯ,ಜೀವನ ಪ್ರೀತಿ ನೀನೇ
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
No comments:
Post a Comment