ಮುಕ್ತಿ ಯಾವುದರಿಂದ?
ಕೆಲವರೆಂದರು
"ಮುಸ್ಲಿಮನಾಗುವುದರಿಂದ"
ಮತ್ತೆ ಕೆಲವರೆಂದರು
"ಕ್ರಿಶ್ಚಿಯನ್ನಾಗುವುದರಿಂದ"
ನನ್ನ ಮಣ್ಣು ನುಡಿಯಿತು
"ಮೊದಲು ಮಾನವನಾಗುವುದರಿಂದ"
ಯಾರನ್ನು ಅನುಸರಿಸಲಿ?
ಕೆಲವರೆಂದರು
"ಪ್ರವಾದಿಯ ಅನುಯಾಯಿಯಾಗು"
ಮತ್ತೆ ಕೆಲವರೆಂದರು
"ಜೀಸಸ್ ನ ಅನುಯಾಯಿಯಾಗು"
ನನ್ನ ಮಣ್ಣು ನುಡಿಯಿತು
"ನಿನ್ನ ಅಂತರಾತ್ಮದ ದನಿಕೇಳು"
ದೇವನೆಲ್ಲಿಹನು?
ಕೆಲವರೆಂದರು
"7ನೇ ಅಂತರಿಕ್ಷದಲ್ಲಿ"
ಮತ್ತೆ ಕೆಲವರೆಂದರು
"4ನೇ ಅಂತರಿಕ್ಷದಲ್ಲಿ"
ನನ್ನ ಮಣ್ಣು ನುಡಿಯಿತು
"ನಿನ್ನಲ್ಲೇ,ನಿನ್ನ ಜೊತೆಯಲ್ಲೇ"
ದೇವರ ಕೆಲಸವೇನು?
ಕೆಲವರೆಂದರು
"ಪರೀಕ್ಷಿಸುವುದು"
ಮತ್ತೆ ಕೆಲವರೆಂದರು
"ಶಿಕ್ಷಿಸುವುದು"
ನನ್ನ ಮಣ್ಣು ನುಡಿಯಿತು
"ಬೆಂಬಲಿಸುವುದು"
No comments:
Post a Comment