ಸೊಬಗ ಸವಿ

ಕಣ್ಣ ತೆರೆಯುತಿದೆ
ಪುಟ್ಟ ಮಗುವಿನ ತೆರದಿ
ಮಂದಹಾಸವ ಬೀರುತಾ
ಮತ್ತೆ ಬಂದಿಹೆನೆನ್ನುತ್ತಾ ಕೆೃಬೀಸಿದೆ
ಮಂಜು,ನೀರವತೆ,ಸೋಮಾರಿತನ
ಗಂಟು ಮೂಟೆ ಕಟ್ಟಿವೆ 
ಮೂಡಣವು ಕೆಂಪು ಸೂಸುತಿರೆ
ಬಿಟ್ಟುಹೋಗುವಾಗಿನ ತೀವ್ರಭಾವ
ಹೊದ್ದು ಮಲಗಲು ಪ್ರೇರೇಪಿಸಿದೆ
ಮುಗ್ದಮಗುವಿನ ಮಂದಹಾಸ
ಮುಂಜಾನೆಯ ಪ್ರಕೃತಿಲೀಲೆಯ
ಸೊಬಗ ಸವಿಯಲು ಸ್ವಾಗತಿಸಿದೆ

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...