Friday, December 15, 2017

ಇದೇ ಸು-ಸಮಯ

ಇದೇ ಸು-ಸಮಯ ವ್ಯರ್ಥ ಮಾಡದಿರು
ಚೆೃತನ್ಯವನೇ ತರುತಿರುವವನ ಆರಾದಿಸು
ಅನುದಿನವು ಬಿಡದೇ ಹೊತ್ತು ತರುತಿಹನು
ಚಿನ್ನದ ಕಿರಣಗಳ,ಸಾವಿರ ಸಾವಿರ ಮೆೃಲಿಗಳಾಚೆಯಿಂದ,
ಮನದೊಳಡಗಿ ನಿದಿರೆಯ ಸೆರೆಯಾಗಿರುವ,
ನಿನ್ನೊಳಂತರಂಗದ ನೂರು ಸೂರ್ಯರ ಪ್ರಚೋದಿಸು
ಆರಾದಿಸು,ಅನುಭವಿಸು,ಪ್ರಚೋದಿಸು
ಲೋಕದೊಳು,ಅಂತರಂಗದೊಳು
ಶಾಂತಿಯ ನೆಲೆಸು

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...