Sunday, September 5, 2010

ಅವಳಿಲ್ಲದ ಮನೆ




ಎಲ್ಲಿ ನೋಡಿದರಲ್ಲಿ ಕಸವಿದೆ

ಧೂಳು-ಕಸ ಸ್ವಾಗತಕ್ಕೆ ನಿಂತಿವೆ

ನೀನಿಲ್ಲದಾ ಮನೆ ಹೀಗಿದೆ ನೋಡು\\

ಪಾತ್ರೆ ಪಡಿಗಗಳು ನಿದ್ದೆ ಮಾಡುತ್ತಿವೆ

ಬಿಸಿಯಾಗದ ಒಲೆ ಕಣ್ಣೀರಿಡುತ್ತಿದೆ

ಅಕ್ಕಿಯ ಕಾಳುಗಳು ನಿನ್ನ ಬೆರಳುಗಳ ಸ್ಪರ್ಶಕ್ಕೆ ಹಾತೊರೆಯುತ್ತಿವೆ

ನೀನಿಲ್ಲದಾ ಮನೆ ಹೀಗಿದೆ ನೋಡು\\

ದೇವರಿಲ್ಲದ ಮನೆ ಬೆಳಕಿಲ್ಲದ ಗೂಡಾಗಿದೆ

ಕಂಡಾಗಲೆಲ್ಲಾ ದೀಪ ಕೇಳುವುದು ನಿನ್ನನು

ಪುಸ್ತಕಗಳ ರಾಶಿ ರಾಶಿ ನಿನ್ನ ಅಂಜಿಕೆಯಿಲ್ಲದೆ ಹೊರಬಂದಿವೆ

ನೀನಿಲ್ಲದಾ ಮನೆ ಹೀಗಿದೆ ನೋಡು\\

ಲಂಗು ಲಗಾಮಿಲ್ಲದೆ ಬಟ್ಟೆಗಳು ಹರಡಿಕೊಂಡಿವೆ

ಕನ್ನಡಿಯಂತಿದ್ದ ನೆಲ ನಿನ್ನ ನೆನಪಲ್ಲಿ ಕಪ್ಪುಗಟ್ಟಿದೆ

ಕನ್ನಡಿ ನಿನ್ನ ಕಾಣದೆ ಮೌನವಾಗಿದೆ

ನೀನಿಲ್ಲದಾ ಮನೆ ಹೀಗಿದೆ ನೋಡು\\

2 comments:

  1. ಚೆನ್ನಾಗಿ ಬಂದಿದೆ.
    ಕಾಗುಣಿತಗಳನ್ನು ಸರಿಮಾಡಿ.
    ೧) ಪರಡು => ಹರಡು, ಪಡಗ => ಅಗಲ ಬಾಯುಳ್ಳ ಪಾತ್ರೆ
    ೨) ಬಿಸಿಯಾಗದ ಓಲೆ => ಬಿಸಿಯಾಗದ ಒಲೆ
    ೩) ಅಕ್ಕಿಯ ಕಾಲುಗಳು => ಅಕ್ಕಿಯ ಕಾಳುಗಳು
    ೪) ಹಾತೊರೆಯುತ್ತಿದೆ => ಹಾತೊರೆಯುತ್ತಿವೆ
    ೫) ಕನ್ನಡಿಯನ್ತಿದ್ದ => ಕನ್ನಡಿಯಂತಿದ್ದ
    ೬) ನೆನೆಪಲ್ಲಿ => ನೆನಪಲ್ಲಿ

    ಪ್ರೀತಿಯಿಂದ

    ಆನಂದ್

    ReplyDelete
  2. ಅನಂದ್ ರವರೇ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ತಪ್ಪುಗಳಿಗೆ ಕ್ಷಮೆಯಿರಲಿ. ತಪ್ಪುಗಳನ್ನು ಸರಿಮಾಡಿದ್ದೇನೆ.

    ReplyDelete

ಅಣುವಿನಿಂದ ಅನಂತದವರೆಗೆ

ಅದೇನೋ ನಾ ತಿಳಿಯೇ ! ಕಡಲ ಸೇರುವಾಗ ಹೃದಯ ಭಯದಿಂದ ಚಡಪಡಿಸುವುದು ! ನಾನು ಹರಿದು ಬಂದ ದಾರಿಯ ಹಿಂತಿರುಗಿ ನೋಡುವೆ , ಪರ್ವತಗಳ ಶಿಖರದ ತುದಿಯಿಂದ ಮೊದ...