Saturday, November 24, 2018

ಏಕೆ ನೆನಪಾಗುತಿಹೆ ?

ಏಕೆ ನೆನಪಾಗುತಿಹೆ ಇಂದು
ಇಷ್ಟು ದಿನವೂ ಇಲ್ಲದ ನೆನಪು
ಇಂದೇಕೆ ಕಾಡುತಿದೆ ಬಿಡದೆ ನನ್ನನು;

ಕಣ್ಣುಗಳು ತವಕಿಸುತಿದೆ
ನಿನ್ನ ಕಾಣುವ ಬಯಕೆಯಿಂದೆ
ಹೃದಯ ಬಾಯಾರಿದೆ
ನಿನ್ನ ಒಲವ ವಿರಹದಿಂದೆ;

ಹೋದವನು ಹೋದೆ ಕಣ್ಣು ತಪ್ಪಿಸಿ
ವಿಷಯಗಳ ಸುಳಿವಿಲ್ಲ ಬಾರದೆ
ವಿರಹದಿ ಕೋಪಾಗ್ನಿಗೆ ಬಲಿಯಾದೆ
ಮುರುಟಿದ ಬಯಕೆಗಳ ಸಮಾಧಿ ಮಾಡಿದೆ;

ಇಂದೇಕೆ ಕಾಡುತಿಹೆ ಬಿಡದೆ?
ಬದುಕಿಹ ಸುಳಿವಿಲ್ಲ
ಬರುವ ಮುನ್ಸೂಚನೆಯೂ ಇಲ್ಲ
ಸುಖಾಸುಮ್ಮನೆ ಮನದಲಿ ಬಂದು ನೆಮ್ಮದಿ ಕೆಡಿಸಿಹೆ:

ಏಕೆ ನೆನಪಾಗುತಿಹೆ ಇಂದು
ಇಷ್ಟು ದಿನವೂ ಇಲ್ಲದ ನೆನಪು
ಇಂದೇಕೆ ಕಾಡುತಿದೆ ಬಿಡದೆ ನನ್ನನು

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...