ಎಂದು ಮೇಲೆರಗುವುವೋ ಕಾಣದ ವಿಧಿಯಾಲಾಪ
ಮುನ್ಸೂಚನೆ ಕಾಣದು, ಕಣ್ಣ ಮುಂದೆ ಬಚ್ಚಿಟ್ಟಹಾಗೆ
ಕಣ್ಣೇ ಕುರುಡೋ ಇಲ್ಲ,ಬುದ್ಧಿಯೇ ಕುರುಡೋ!
ಬಲ್ಲವರಾರು? ಕಂಡವರಾರು?
ಮನಸ್ಸು ಮಾತ್ರ ಜರ್ಝರಿತವಾಗಿದೆ
ಇರಲಾರದೇ! ಓಡಿಹೋಗಲಾಗದೆ!
ಬಂದದ್ದು ಬರಲೆಂಬ ನಿಲರ್ಿಪ್ತತೆ
ಮನದಲ್ಲಿ ಮನೆ ಮಾಡಿದೆ
ಹೆಜ್ಜೆ,ಹೆಜ್ಜೆಗೂ ಕಾತರತೆಯಿದೆ
ಆತಂಕ, ಆಶ್ಚರ್ಯ.....
ಬಿಸಿಲು-ಮಳೆಯ ರೀತಿ ಆಹ್ಲಾದಕರವಾಗಿದೆ/
No comments:
Post a Comment