Wednesday, November 21, 2018

ಗೆಳೆತನ

ಓ ಗೆಳೆಯನೇ! ನೀ ನನ್ನ ಪ್ರೀತಿಯ ಗುರುತು
ನಿನಗಾಗಿಯೇ ಈ ನನ್ನ ಗೆಳೆತನವ ಮುಡಿಪಾಗಿಟ್ಟಿರುವೆ
ನನ್ನ ಹೃದಯದೊಳಗಡಗಿರುವ ಪ್ರೀತಿಯೆಲ್ಲವನ್ನೂ
ಈ ಕವಿತೆಯೊಳಡಗಿಸಿರುವೆ ನಿನಗಾಗಿ;
ಇದು ಗೆಳೆತನದ ಧ್ಯೋತಕವಾಗಿ, ತೋರಿಕೆಗಾಗಿಯಲ್ಲ ನೀ ತಿಳಿ;
ಹೃದಯ ಚಡಪಡಿಸುತಿಹುದು, ಪದಗಳಿಗಾಗಿ ತಡಕಾಡಿದಾಗ;
ನಿನಗೆ ಒಪ್ಪಿಗೆಯೇ ಈ ನನ್ನ ಕವಿತೆ?
ನನ್ನ ವಿಧಿಲಿಖಿತದೊಳಗೇನು ಬರೆದಿದೆಯೋ?
ನಕ್ಷತ್ರಗಳ ಗುಣಿಸಿ ಹೇಳುವವರಿಲ್ಲ
ಲೆಕ್ಕ ತಪ್ಪಾದರೆ ನನ್ನದೇನು ತಪ್ಪು?
ಎಲ್ಲವನ್ನೂ ಬಲ್ಲ ನೀನು ನನ್ನ ಗೆಳೆತನ ಒಪ್ಪಿಕೋ
ಈ ಪ್ರೀತಿಯ ಕವನವ ಸರ್ಮಪಿಸಿಕೋ!/

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...