ಕಾಲಾತೀತ

ಬಿಸಿಲಬೇಗೆಗೆ ನಿನ್ನ ಹೋಲಿಸಲೇ?
ನೀನು ಬಲು ಚಂದ!
ಗಡಸು ಗಾಳಿ,
ಚೈತ್ರದ ಹೂ ಚಿಗುರುಗಳ ಮೇಲೆಯೇ ಕಣ್ಣು!
ಎಚ್ಚರ ತಪ್ಪಿದರೆ ಅಯೋಮಯ,
ಬೇಸಿಗೆಯ ಬಿಸಿ ಅಸಹನೀಯ;
ಸುಂದರವಾದುದೆಲ್ಲಾ ಬಳಲುವುದು
ಕ್ಷಣಿಕವಾದರೂ ತೆವಳಬೇಕು
ಒಳ ಸೌಂದರ್ಯವ ಕಾಯ್ದಿರಿಸಿಕೋ
ಅದಕ್ಕೆ ಸಾವಿಲ್ಲ;
ಏಕಾಂಗಿತನಕ್ಕೆ ಬಳಲುವುದಿಲ್ಲ;
ಸಾವು ಬಂದರೂ ಸೌಂದರ್ಯಕ್ಕೆ ಸಾವಿಲ್ಲ;
ಕಾಲಾತೀತವೂ, ಸೌಂದರ್ಯವೂ ಒಂದಾದರೆ
ಅದೇ ಸಾರ್ಥಕತೆಯೂ.....
ಹೆದರದಿರು ಸಾವಿಗೆ,
ಅಹಂಕಾರಪಡದಿರು ನಿನ್ನ ಸೌಂದರ್ಯಕೆ;
ಒಳ ಮನದ ಕದವ ತೆರೆದು
ಪ್ರಕೃತಿಯ ಸೌಂದರ್ಯವ ಆಸ್ವಾದಿಸು//

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...