Monday, November 19, 2018

ತೀರದ ಭರವಸೆ

ಬೆಳಗೆಂದರೆ ಅಚ್ಚರಿ
ಅಮೋಘ ಅನುಭವದ ರಸಸಮಯ
ಹಾರುವ ಹಕ್ಕಿಗಳ ಕಂಡಾಗ
ಮನಸ್ಸು ಹಗುರ,ಅತ್ಯುತ್ಸಾಹ
ಕಾಯುತ್ತಿದುವ ರಣಹದ್ದುಗಳ ಕಂಡಾಗ
ಮನಸ್ಸು ಅಯೋಮಯ,ಭಯದ ಕೂಪ
ಪಾರಾಗುವುದೆಂತೋ?......
ಪ್ರಕೃತಿ ನಿಯಮ ಮೀರಿದವರಾರು?
ಇಂದೇನೋ ಶಕ್ತಿಯಿಂದ ಪಾರಾಗಬಹುದು
ಆದರೆ ನಾಳೆ, ನಾಳೆಗಳ ನಂತರ
ನಿಶಕ್ತಿಯು ಕಾಡದೇ?...
ಬಲಿಯಾಗುವುದು ನಿಶ್ಚಿತವೇ!
ದಾರಿಯಾವುದು?
ರಕ್ಷಿಸುವವರಾರು?
ಆದರೂ ಬೆಳಗೆಂದರೆ ಅಚ್ಚರಿ
ನಾಳೆ,ನಾಳೆಗಳ ತೀರದ ಭರವಸೆ//

No comments:

Post a Comment

ಅಣುವಿನಿಂದ ಅನಂತದವರೆಗೆ

ಅದೇನೋ ನಾ ತಿಳಿಯೇ ! ಕಡಲ ಸೇರುವಾಗ ಹೃದಯ ಭಯದಿಂದ ಚಡಪಡಿಸುವುದು ! ನಾನು ಹರಿದು ಬಂದ ದಾರಿಯ ಹಿಂತಿರುಗಿ ನೋಡುವೆ , ಪರ್ವತಗಳ ಶಿಖರದ ತುದಿಯಿಂದ ಮೊದ...