Wednesday, November 21, 2018

ಕೆಲಸವಾದ ನಂತರ......

ನನ್ನ ಮನೆಯ ತೊರೆದಾಯಿತು
ತಿಂಗಳೇ ಕಳೆದಿರಬಹುದು
ಹೊಸ ಮನೆಯ ತುಂಬಿಯಾಯಿತು
ಪರಕೀಯತೆ ಕಾಡದಿರಬಹುದೇ?
ನನ್ನವರೆನಿಸಿಕೊಂಡವರಿಂದಲೇ ತಿರಸ್ಕಾರಕ್ಕೊಳಗಾದೆ
ಆಶ್ಚರ್ಯವೇನಿಲ್ಲ ಅದರಲಿ,
ಕೆಲಸವಾದ ನಂತರ ಬಡಗಿಗೇನು ಕೆಲಸ!
ಇವರು ಯಾರೋ?
ನನ್ನ ಅವರವನೆಂದು ಒಪ್ಪಿಕೊಂಡಾರೇ?
ಹೊಸತನ, ಹೊಸಹೆಜ್ಜೆ ಎಡವಬಹುದೆನ್ನಿ
ಅಂತರ ಜಾಸ್ತಿಯಾಗಲು ಕಾರಣಬೇಕೇ?
ಉಪ್ಪುತಿಂದ ಮೇಲೆ ಬಾಯಾರದೇ?
ತಪ್ಪು-ಒಪ್ಪುಗಳ ತಿಳಿದವರಾರು?
ಕಲ್ಲು-ಮುಳ್ಳು ಚುಚ್ಚಿಯಾಗಿದೆ
ನೋವ ನುಂಗಿಯಾಗಿದೆ;
ಹಿಂದೆ ಹೋಗುವ ಮಾತೇಯಿಲ್ಲ;
ಬಂದದ್ದು ಬರಲಿ ಹೆಜ್ಜೆ ಮುಂದಿಟ್ಟಾಗಿದೆ
ಸೋಲೋ-ಗೆಲುವೋ ಕಾಲವೇ ನಿರ್ಣಯಿಸಲಿ
ಮನವು ಧೃಡತೆಯಿಂದಿರಲಿ
ಕಲಿಕೆಯೊಂದೇ ಗುರಿಯಾಗಲಿ//

No comments:

Post a Comment

ಅಣುವಿನಿಂದ ಅನಂತದವರೆಗೆ

ಅದೇನೋ ನಾ ತಿಳಿಯೇ ! ಕಡಲ ಸೇರುವಾಗ ಹೃದಯ ಭಯದಿಂದ ಚಡಪಡಿಸುವುದು ! ನಾನು ಹರಿದು ಬಂದ ದಾರಿಯ ಹಿಂತಿರುಗಿ ನೋಡುವೆ , ಪರ್ವತಗಳ ಶಿಖರದ ತುದಿಯಿಂದ ಮೊದ...