ವಿಧಿಯಾಟವೋ ಇಲ್ಲ, ನನ್ನ ದೌಭರ್ಾಗ್ಯವೋ?
ತಿರಸ್ಕರಿಸಲ್ಪಟ್ಟಿದ್ದೇನೆ, ನನ್ನ ಸ್ಥಿತಿಗೆ ನಾನೇ ಮರುಕಪಟ್ಟಿದ್ದೇನೆ
ಸಹಾಯಕ್ಕೆ ಕೈಚಾಚಿಹೆನು, ನನ್ನ ರಕ್ಷಿಸುವರಾರು?
ನನ್ನ ವಿಧಿಯ ನಾನೇ ಹಳಿಯುತಿಹೆನು
ಪರರ ಭಾಗ್ಯವು ಎನಗೆ ಬಾರದೇ?
ಅವರ ಚಾಕಚಕ್ಯತೆ, ಚತುರತೆ ಎನಗೇಕಿಲ್ಲ?
ನನ್ನ ಅಂತಃಶಕ್ತಿಯ ಅರಿವೆನಗಿಲ್ಲ
ಹೊರಬರಬೇಕಿದೆ ಈ ಕತ್ತಲಕೂಪದಿಂದ;
ಬದಲಾಗಬೇಕಿದೆ, ಮುಂದೆ ಸಾಗಲು
ಇಲ್ಲಿ ಎಲ್ಲವೂ ಬದಲಾಗುತ್ತಲೇ ಇದೆ;
ಇದ್ದಂಗಿಲ್ಲ ಇಲ್ಲಿ ಎಲ್ಲವೂ
ಬದಲಾವಣೆಗೆ ತೆರೆದು ಕೋ ಮನವೇ
ಬದಲಾಗು, ಬದಲಾಗು ಮನವೇ......
No comments:
Post a Comment