ಎಷ್ಟು ದಿನವಾಯಿತೋ ಹೀಗೆ ಏಕಾಂಗಿಯಾಗಿ ಕುಳಿತು
ದೂರದ ಪಶ್ಚಮದಲ್ಲಿ ಸೂರ್ಯ ಬಣ್ಣ ಚೆಲ್ಲಿ ಹೊರಟಿದ್ದಾನೆ
ಆಗಸದಲ್ಲಿ ನೂರು ರಂಗೋಲಿಯ ಚಿತ್ತಾರ;
ಮೋಡಗಳ ಬಳಸಿ ಕಲೆಗಾರ ಹೇಳಹೊರಡಿದ್ದಾನೆ ನೂರು ಕಥೆ,ವ್ಯಥೆ;
ಮನದ ನೂರು ವ್ಯಥೆಯ ಮರೆತು ತಲ್ಲೀನನಾಗಿದ್ದೇನೆ ಅಚ್ಚರಿಯಿಂದಲೇ;
ಇದು ಕೆಲವೇ ನಿಮಿಷಗಳ ರಸದೌತಣ, ಇದೇ ರಸಗವಳ ಮನಸಿಗೆ, ಕವಿ ರಸ ನಿಮಿಷ;
ಮನದಲ್ಲಿ ಚಿತ್ತಾರ ಮೂಡುವ ಮೊದಲೇ ಮಾಯವಾಯಿತು,ಮನಸ್ಸು ಪ್ರಶಾಂತವಾಯಿತು
No comments:
Post a Comment