ಏಕಿಂತ ದಾಳಿ ಮನದ ಮೇಲೆ
ಮೊದಲೇ ನರಳಿದೆ ಸಣ್ಣದಾಗಿ
ಗಾಯದ ಮೇಲೆ ಬರೆ ಎಳೆದ ಹಾಗೆ
ಮತ್ತೆ ಮತ್ತೆ ಬೀಳುತಿದೆ ಹೊಡೆತ
ಚೇತರಿಕೆ ಕಾಣುವ ಮೊದಲೇ........
ಒಬ್ಬನೇ ಏಕಾಂಗಿಯಾಗಿ
ಸೂಯರ್ಾಸ್ತದ ಸೊಬಗ ಅನುಭವಿಸುವಾಗ
ಧುತ್ತನೆ ಕಾಮರ್ೋಡ ಆವರಿಸಿದಹಾಗೆ
ಹಳೆಯ ನೋವುಗಳೆಲ್ಲಾ ಗರಿಗೆದರಿವೆ
ಸುಂದರ ಸೊಬಗೆನ್ನೆಲ್ಲಾ ನುಂಗಿದೆ
ಕರಾಳ ದಿನಗಳ ನೆನಪಾಗಿ
ಮನವು ನೋವ ಕಡಲಲಿ ಮುಳುಗಿದೆ
ಸಂಕಟ ಪಡುತ್ತಿದ್ದೇನೆ,
ಅಮೂಲ್ಯ ಸಮಯ ವ್ಯರ್ಥ ಮಾಡಿದೆ
ನೋವೆಲ್ಲಾ ಮೋಡವಾಗಿ ಬಾನಿನಲ್ಲಿ ಕರಗಿದೆ
ಮನದ ಚಿಂತೆಯ ಕಂತೆಗಳನ್ನೆಲ್ಲಾ
ಗೋರಿಯೊಳಗೆ ಬಲವಂತವಾಗಿ ಬಚ್ಚಿಟ್ಟಿದ್ದೇನೆ
ಗೆಳೆಯನೇ ನಿನ್ನ ನೆನಪು ಮತ್ತೆ ಮತ್ತೆ ಕಾಡಿದೆ
ಈ ಹೃದಯದಲಿ ನಿನ್ನ ಬಂದಿಸಿರುವೆ
ಎಲ್ಲವೂ ಮುಗಿದ ಅಧ್ಯಾಯ
ಹೊಸ ಅಧ್ಯಾಯ ಪ್ರಾರಂಭಿಸಿರುವೆ......
No comments:
Post a Comment