Saturday, November 24, 2018

ಜಿಗುಪ್ಸೆ

ತಲೆಯ ಮೇಲೆ ತೂಗುಗತ್ತಿ
ಸಾವಿನ ಭಯ ಮನದಲ್ಲಿ ಆವರಿಸಿದೆ
ನೇಣುಗಂಬ ಏರಿದವನಿಗೆ,
ಮುಕ್ತಿ ಸಿಗುವುದೆಂಬ ಸಂತೋಷ;
ನೇಣು ಹಾಕಿವವನೇ ರಜೆ ತೆಗೆದುಕೊಂಡರೆ
ಸಂತಸ ಪಡಬೇಕೋ? ಇಲ್ಲ ಕೈ ಕೈ ಹಿಸುಕಿಕೊಳ್ಳಬೇಕೋ?
ನಿಟ್ಟುಸಿರಂತೂ ಬಿಟ್ಟಿರುತ್ತಾನೆ ಬೇಸರಿಸಿ;
ಜಿಗುಪ್ಸೆ ಮನೆಮಾಡಿರುತ್ತೆ ಸಾವು ಮುಂದೆ ಹೋದರೆ
ಜೊತೆಯಲ್ಲಿದ್ದವರಿಗೂ, ಜೀವನೋವ ಹೊತ್ತಿರುವವರಿಗೂ
ಆದರೂ ಅನುಕ್ಷಣದ ಭಯದ ಜೀವನ ವಾಕರಿಸುತ್ತದೆ
ಮುಂದಿರುವ ರಸಗವಳವೂ ಹಳಸಿದ ಊಟವೇ ಆಗಿರುತ್ತೆ


No comments:

Post a Comment

ಅಣುವಿನಿಂದ ಅನಂತದವರೆಗೆ

ಅದೇನೋ ನಾ ತಿಳಿಯೇ ! ಕಡಲ ಸೇರುವಾಗ ಹೃದಯ ಭಯದಿಂದ ಚಡಪಡಿಸುವುದು ! ನಾನು ಹರಿದು ಬಂದ ದಾರಿಯ ಹಿಂತಿರುಗಿ ನೋಡುವೆ , ಪರ್ವತಗಳ ಶಿಖರದ ತುದಿಯಿಂದ ಮೊದ...