Sunday, November 18, 2018

ನಿನ್ನೊಳು ನಾನು

ಓಹ್! ಕನ್ನಡಿಯೇ,
ನಿನ್ನೊಳು ನಾನು ಹುರುಪಿನಿಂದಿರುವೆ
ಭಾಹ್ಯದ ಈ ದೇಹದಲ್ಲಿ
ಚರ್ಮವೆಲ್ಲಾ ಸುಕ್ಕುಗಟ್ಟಿದೆ
ಮನಸು ಮಾತ್ರ ಅರಳುವ ಮಲ್ಲಿಗೆಯೇ!
ನಿನ್ನೊಳ ದೇಹದಲ್ಲಿದೆ
ನನ್ನ ಹರೆಯದ ಹೃದಯ ಚೈತನ್ಯದಿ
ನಿನ್ನಯ ತರುಣ ಹೃದಯ
ನನ್ನೊಳು ನೆಲೆಸಿದೆ ಹುರುಪಿನಲಿ
ತಿಳಿದಿದೆ ನಾನು ನಿನ್ನ ಮೊದಲು
ಕೊನೆಯುಸಿರೆಳೆಯುವೆ;
ನಾ ಮುಗಿದ ಕಥೆಯಾದರೂ
ನೆನಪಿರಲಿ ನನ್ನಯ ಹೃದಯಗಾನ;
ಮರೆತು ನನ್ನ ಹೃದಯವ ಕೊಲ್ಲದಿರು
ಓ! ಕನ್ನಡಿಯೇ!, ಓ ಕನ್ನಡಿಯೇ!
ನಿನ್ನೊಳ ನಾನು ಜೀವಂತವಾಗಿರುವೆ
ನಿನ್ನ ಹೃದಯವ ಪಡೆದು ಸಂತಸದಿಂದಿರುವೆ//

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...