Wednesday, November 21, 2018

ನಿನ್ನದೇ ಧ್ಯಾನ

ಗೊಂದಲ ಮನದಲ್ಲಿ
ನಿದ್ರಾದೇವಿ ಸೆಳೆಯುತಿಹಳು
ಜೀವನ ಯಾತ್ರೆಯ ಪಯಣ
ಆಲಸ್ಯ,ಯಾಂತ್ರಿಕತೆ ಬಳಲಿಸಿದೆ
ಶಾಂತಿ,ಶಾಂತಿ,ವಿಶ್ರಾಂತಿ
ಹೃದಯದ ಒಳಗಣ್ಣು ತೆರೆದಿದೆ
ನಿತ್ಯಯಾತ್ರೆಗೆ ಸನ್ನದ್ಧ ನಿನ್ನಲ್ಲಿಗೆ
ಬೆರಗುಗಣ್ಣುಗಳ ತೆರೆದೆ
ಕತ್ತಲ ತೂರಿ ಬೆಳಕ ಬಾಗಿಲ ತೆರೆದೆ
ಕ್ಷಣ-ಕ್ಷಣದಿ ಅಂಧಕಾರ ಆವರಿಸಿ
ಮನದಲ್ಲಿ ಭಯದ ವಾತಾವರಣ ಮೂಡಿದೆ;
ಕಲ್ಪನಾವಿಲಾಸದಲ್ಲಿ ನಿನ್ನದೇ ಚಿತ್ರ ಮನದ ತೆರೆಯಲ್ಲಿ
ಕಾರ್ಗತ್ತಲಿನಲ್ಲಿ ಹೊಳೆವ ವಜ್ರದಂತೆ
ನಿನ್ನ ನೆನಪು ಮನದಲ್ಲಿ
ಆ ಕತ್ತಲ ರಾತ್ರಿಯ ಸೊಬಗ ಹೆಚ್ಚಿಸಿದೆ
ಹೇಗಾದರೂ ಸರಿಯೇ....
ವಿಶ್ರಾಂತಿ ಇಲ್ಲ ಎನಗೆ.....
ಮುಂಜಾನೆ ಕಾಲುಗಳಿಗೆ.....
ರಾತ್ರಿ ಕಣ್ಣುಗಳಿಗೆ....
ದಿನವೂ, ರಾತ್ರಿಯೂ ಒಂದೇ
ನಿನ್ನದೇ ಧ್ಯಾನ, ನಿನ್ನದೇ ಧ್ಯಾನ//

No comments:

Post a Comment

ಸಂತೋಷದ ಋಣ

ನೀ ಯಾರಾದರೇನು ? ನಿನ್ನಲ್ಲಿ ಏನಿದ್ದರೇನು ? ಮನದೊಳ ಭಾವಗುಣದಂತೆ ,   ದಕ್ಕುವುದು ನಿನಗೆ ಸಂತೋಷದ ಋಣ .   ಮನದ ರಂಗಮಂಚದಲಿ ನಡೆದಿದೆ ತಾಲೀಮು , ...