ಬಚ್ಚಿಟ್ಟ ಭಾವ

ಯಾರು ನೆನಪಿಡುವರು?
ಮುಂದೆ ಕಾಲ ಉರುಳುತಿರುವುದ
ಯಾರು ನಂಬುವರು?
ಈ ನನ್ನ ಪದಗಳ......
ಗೊತ್ತಿದೆಯಾದರೂ ನೋವಿಲ್ಲ
ಗೋರಿಯೊಳಗೆ ಬಚ್ಚಿಟ್ಟ ಭಾವಗಳಂತೆ
ಯಾರೂ ಬಗೆದು ನೋಡುವರಿಲ್ಲ
ಹಳೆಯದೆಲ್ಲವೂ ಇತಿಹಾಸ
ಹೊಸತೆಲ್ಲವೂ ಅನ್ವೇಷಣೆ
ಹಿಂದಿನದೆಲ್ಲವೂ ಕಥೆಗಳ ಗಂಟು
ನಂಬುವರಾರು? ಗೊಡ್ಡು ವೇದಾಂತ;
ನಡೆಯುತ್ತಿರುವರು ಸತ್ಯ ಹರಿಶ್ಚಂದ್ರರು
ಮಾತಿಗೆ ಬೆಲೆಯಿಲ್ಲ, ಬರೀ ಒಣ ವೇದಾಂತ;
ಎಲ್ಲರೂ ಚಪ್ಪಾಳೆ ತಟ್ಟುವವರೇ!
ತಪ್ಪೆಂದು ಹೇಳಬೇಕಾದವರು ತೆಪ್ಪಗಿಹರು
ಮೂಕರಾಗಿ, ನಿಜವಲ್ಲ ಬರೀ ನಾಟಕ;
ಮುನ್ನಡೆಯುತಿಹುದು ಕಾಲ ಗಹಗಹಿಸಿ
ಮುಂದೆ ಕಾದಿದೆ....
ಮುಂದೆ ಕಾದಿದೆ...
ಕಾಣದ ರುದ್ರನರ್ತನ.......

2 comments:

  1. 99%ಕನ್ನಡ, 1%ಇತರೆ ಕನ್ನಡ ಕಂದನ ಕನ್ನಡದ ತಾಣ ಅದುವೇ www.spn3187.blogspot.in & https://t.me/spn3187 ಕನ್ನಡವನ್ನು ಕನ್ನಡಿಗರೇ ಬೆಳೆಸದಿದ್ದರೆ ಮತ್ಯಾರು ಬೆಳೆಸುವರು ಅದಕ್ಕೆ ನಮ್ಮ ಕನ್ನಡವನ್ನು ನಾವು ಬೆಳೆಸಲು ಚಿಕ್ಕ ಪ್ರಯತ್ನ ಜೈ ಕನ್ನಡಾಂಬೆ

    ReplyDelete

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...