ಸತೈವೋ?,ಭ್ರಮೆಯೋ?

ನನ್ನ ಕಣ್ಣುಗಳ ನಾನೇ ನಂಬಲಿಲ್ಲ,
ಯಾರನ್ನು ನೋಡುತ್ತಿದ್ದೇನೆ?
ಸತೈವೋ?,ಭ್ರಮೆಯೋ?, ಅಯೋಮಯವೋ?
ಕನ್ನಡಿಯೊಳಗೆ ಕಂಡದ್ದು ಯಾರನ್ನು?
ಅದು ನಾನೇ? ಅಥವಾ ಬೇರಾರು?
ಮನದಲ್ಲೇ ಆತಂಕ ಮೂಡಿದೆ
ಬಿಳಿ ಕೂದಲಿನ ತಲೆ,
ಬಿಳಿ ಜುಂಜಿನಂತ ಗಡ್ಡ;
ಸುಕ್ಕುಗಟ್ಟದ ಚರ್ಮ;
ಕೃಶಗೊಂಡ ನಿಶಕ್ತಿಯ ದೇಹ;
ನಿದ್ದೆಕಾಣದ ಕಂಗಳು;
ಇಂದು ಕಾಣುತ್ತಿರುವುದೇನು?
ಸಾವಿನ ಮುನ್ಸೂಚನೆಯೋ?
ಮತ್ತೇನಿದು? ಕಾಮರ್ೋಡ ತಂದ ಕಗ್ಗತ್ತಲು!
ಸೌಂದರ್ಯವೆಲ್ಲಾ ನಶಿಸಿದೆ
ಹೃದಯವೊಂದೇ ಚಿರತಾರುಣ್ಯದಿಲ್ಲಿದೆ!
ನಿನ್ನ ಮೇಲಿನ ಪ್ರೀತಿ ಈಗಷ್ಟೇ ಚಿಗುರೊಡೆದಿದೆಯಷ್ಟೇ
ಕಾಲವ್ಯಯ ಮಾಡದಿರು
ಸದಾ ಮನವ ಪ್ರೀತಿಯಲ್ಲೇ ತೊಡಗಿಸು
ನೋಡು ಆಗ ಚಿರಯೌವ್ವನ ನಿನ್ನದೇ....

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...