Sunday, November 18, 2018

ಹೊಸತನಕಿದೋ ಸ್ವಾಗತ

ನಾನು ಅವರಂತಲ್ಲ
ಮೋಹ,ವ್ಯಾಮೋಹಗಳಿಗೆ ಒಳಗಾದವನಲ್ಲ
ಬಯಕೆ,ಆಮೀಷಗಳಿಗೆ ಬಲಿಯಾದವನಲ್ಲ
ಸೌಂದರ್ಯ,ಸಂಪತ್ತುಗಳಿಗೆ ಕತ್ತುಕೊಟ್ಟವನಲ್ಲ
ಓತ-ಪ್ರೋತಗಳಿಗೆ ಓಗೊಡುವವನಲ್ಲ
ಆದರೂ ಕೆಲವೊಮ್ಮೆ ನನ್ನದಲ್ಲದ ತಪ್ಪುಗಳಿಗೆ;
ಟೀಕೆಗಳಿಗೆ ತೆರೆದುಕೊಂಡವನು;
ಅನುಭವಗಳಿಗೆ ತೆರೆದ ಹೃದಯದವನು;
ಎಲ್ಲಾ ನಿಜ ಅನುಭವಗಳಿಗಿದೋ ಸ್ವಾಗತ,
ಮನವ ,ಹೃದಯವ ಕಾಪಿಡುವ
ಸಂಗತಿಗಳಿಗಿದೋ ಸ್ವಾಗತ;
ಬೆಳಕಾಗಿ,ಹೊಂಗಿರಣವ ಸೂಸುವ
ಹೊಸತನಕಿದೋ ಸ್ವಾಗತ;

No comments:

Post a Comment

ಅಣುವಿನಿಂದ ಅನಂತದವರೆಗೆ

ಅದೇನೋ ನಾ ತಿಳಿಯೇ ! ಕಡಲ ಸೇರುವಾಗ ಹೃದಯ ಭಯದಿಂದ ಚಡಪಡಿಸುವುದು ! ನಾನು ಹರಿದು ಬಂದ ದಾರಿಯ ಹಿಂತಿರುಗಿ ನೋಡುವೆ , ಪರ್ವತಗಳ ಶಿಖರದ ತುದಿಯಿಂದ ಮೊದ...