ಇಂದಾಯಿತು, ಮುಂದೇನು?
ಅದೇ ಹೆಜ್ಜೆಗಳನ್ನೇ ಇಡುತ್ತಿದ್ದೇನೆ
ಅಡಿಯಿಡಲು ಬೇಸರವಿದೆ
ಹೊಸತನವಿಲ್ಲ ಯಾಂತ್ರಿಕತೆಗೆ ಜೋತುಬಿದ್ದಿದ್ದೇನೆ
ಆಯಿತು, ಎಲ್ಲವೂ ಆಯಿತು
ಮನವ ಶೋಧಿಸಿದ್ದಾಯಿತು
ಹಲವು ವರುಷಗಳ ಕಾಲ ತೊಟ್ಟ
ಮುಖವಾಡ ಕಳಚಿಟ್ಟಾಯಿತು
ಬೆತ್ತಲಾಗಿ ನಿಂತಿಹೆನು ಅಸಹಾಯಕನಾಗಿಹೆನು
ಇಂದಾಯಿತು, ಮುಂದೇನು?
ಕಣ್ಣು ಮುಚ್ಚಿದರೂ ಗೋಚರಿಸುತ್ತಿಲ್ಲ
ಕಣ್ಣು ತೆರೆದರಂತೂ ಕಾಲೆಳವರ
ದಂಡೇ ಕಾಣುತಿದೆ, ಅಸಹ್ಯವಾಗಿದೆ
ಓಡಿಹೋಗೋಣವೆಂದರೂ
ಭೂಮಿ ದುಂಡಾಗಿದೆಯೆಂಬ ಭಯ
ಇಂದಾಯಿತು, ಮುಂದೇನು? ನಾಳೆಗಳ ನಿರೀಕ್ಷಿಸುವುದು ಹೇಗೆ
No comments:
Post a Comment